ಕಾಂಗ್ರೆಸ್ ಹೋಗಲ್ಲ ಹೋಗಲ್ಲ…!
ಬೆಳಗಾವಿ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಹೋಗುವ ಮಾತೇ ಇಲ್ಲ ಎಂದು ಮಾಜಿ ಸಂಸದ ರಮೇಶ ಕತ್ತಿ ಸ್ಪಷ್ಟಪಡಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಕತ್ತಿ ಕಾಂಗ್ರೆಸ್ ಗೆ ಬಂದರೆ ಸ್ವಾಗತ ಎನ್ನುವ ಹೇಳಿಕೆಗೆ ಈ ಸ್ಪಷ್ಟನೆ ನೀಡಿದ್ದಾರೆ.

ನಾನು ಯಾರ ಬಳಿ ಕೂಡ ಬಿಜೆಪಿ ತ್ಯಜಿಸುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದಲೂ ನಮ್ಮ ಕತ್ತಿ ಕುಟುಂಬ ಬಿಜೆಪಿಗೆ ನಿಷ್ಠವಾಗಿದೆ. ಹೀಗಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಮಾತೇ ಬರಲ್ಲ ಎಂದರು.