ಬೆಳಗಾವಿ. ಹುಬ್ಬಳ್ಳಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಮುದ್ರದ ಅಲೆ ವಿರುದ್ಧ ದಿಕ್ಕಿನಲ್ಲಿ ಈಜುತ್ತಿದ್ದಾರೆ. ಇದರರ್ಥ ಅವರು ಗೆಲುವಿನ ದಡ ತಲುಪುವರೇ ಹೇಗೆ ಎನ್ನುವ ಊಹೆ ತಮಗೆ ಬಿಟ್ಟಿದ್ದು.!

ಬೆಳಗಾವಿಯಲ್ಲೇ ಸಾಕಷ್ಟು ಜನ ಪ್ರಭಲ ಅಭ್ಯರ್ಥಿ ಗಳಿದ್ದಾರೆ. ಅವರಿಗೆನೇ ಟಿಕೆಟ್ ಕೊಡಬೇಕು ಎನ್ಬುವ ಸಣ್ಣ ಮಟ್ಟದ ಕೂಗು ಈಗ ಆಲದಮರವಾಗಿ ಬೆಳೆದು ನಿಂತಿದೆ. ಅದರಲ್ಲೂ ಶೆಟ್ಟರ್ ಅವರು ಡಾ. ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ, ಎಂ.ಬಿ. ಝಿರಲಿ ಸೇರಿದಂತೆ ಇನ್ನಿತರರ ಬಗ್ಗೆ ಆಡಿದ ಹಗುರ ಮಾತು ಇಡೀ ಬೆಳಗಾವಿ ಬಿಜೆಪಿಗರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಂತಾಗಿದೆ.




ಹೀಗಾಗಿ ಅವರ ಬದಲು ಬೇರೆ ಯಾರಿಗಾದರೂ ಟಿಕೆಟ್ ಕೊಡಿ ಎನ್ಬುವ ಸಂದೇಶವನ್ಬು ಅವರು ರವಾನಿಸಿದ್ದರು ಇಲ್ಲಿ ಶೆಟ್ಟರ್ ಬದಲು ಬೇರೆ ಯಾರಿಗಾದರೂ ಟಿಕೆಟ್ ನೀಡಿದರೆ ಬಿಜೆಪಿ ಬರೊಬ್ಬರಿ ಒಂದುವರೆ ಲಕ್ಷ ಮತಗಳ ಅಂತರದಿಂದ ಗೆಲುತ್ತದೆ. ಆದರೆ ಅದೇ ಶೆಟ್ಟರಗೆ ಟಿಕೆಟ್ ನೀಡಿದರೆ ಫಲಿತಾಂಶ ಉಲ್ಟಾ ಆಗಬಹುದು ಎನ್ನುವ ಸ್ಪಷ್ಟ ಸಂದೇಶ ಹೈ ಕಮಾಂಡಗೆ ರವಾನೆಯಾಗಿದೆ.

ಗಮನಿಸಬೇಕಾದ ಸಂಗತಿ ಎಂದರೆ ಬಿಜೆಪುಗರು ಅಷ್ಟೆ ಅಲ್ಲ ಸಂಘ ಪರಿವಾರದವರೂ ಸಹ ಇದೇ ಮಾಹಿತಿಯನ್ನು ತಲುಪಿಸಿದ್ದಾರೆ. ಬೆಳಗಾವಿಯಲ್ಲಿ ಶೆಟ್ಟರ್ ಜೊತೆ ಅಂಗಡಿ ಕುಟುಂ ಬಿಟ್ಟರೆ ಬೇರೆ ಯಾರೂ ನಿಂತಿಲ್ಲ. ಹೀಗಾಗಿ ಶೆಟ್ಟರಗೆ ಬಲು ಕಷ್ಟ ಎನ್ನುವ ಮಾತುಗಳು ಕೇಳಿ ಬರುತ್ತಿವೆ.