ಅನುಮತಿ ಪಡೆಯದೇ ಸಭೆ ಮಾಡಿದ MES?
ಬೆಳಗಾವಿ. ನಾಡದ್ರೋಹಿ ಎಂಇಎಸ್ ಸಂಘಟನೆ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಆಯೋಗದ ಯಾವುದೇ ಪೂರ್ವಾನುಮತಿ ಪಡೆಯದೇ ಇಂದಿಲ್ಲಿ ಸಭೆ ನಡೆಸಿತು. ಈ ಬಗ್ಗೆ ಸಂಘಟನೆಯ ಮುಖಂಡರಲ್ಲೊಬ್ಬರಾದ ರಮಾಕಾಂತ ಕೊಂಡುಸ್ಕರ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ. ಸಭೆಯಲ್ಲಿ ಏನೇನಾಯಿತು? ಕಳೆದ ಹಲವು ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ನಾಡದ್ರೋಹಿ ಎಂಇಎಸ್ ಈಗ ಅಸ್ತಿತ್ವ ಉಳಿಸಿಕೊಳ್ಳುವ ಸರ್ಕಸ್ ಮಾಡುತ್ತಿದೆ. ಈ ಹಿಂದೆ ನಡೆದ ಪಾಲಿಕೆ ಚುನಾವಣೆ ಸಂದರ್ಭದಲ್ಲಿ AIMIM ಮತ್ತು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡ ಎಂಇಎಸ್ ಹೀನಾಯ ಸೋಲು ಅನುಭವಿಸಿತ್ತು.ಪ್ರತಿಯೊಂದು…