ಜಾತ್ರೆಗೆ ಸಿಂಗಾರಗೊಳ್ಳುತ್ತಿರುವ ಹಿರೇಬಾಗೇವಾಡಿ ಗ್ರಾಮ
`25 ವರ್ಷಗಳ ನಂತರ ಗ್ರಾಮದೇವತೆ ಜಾತ್ರೆ’ ಹಾಸ್ಯ ಸಙಜೆ, ನಗೆ ಹಬ್ಬ, ರಸಮಂಜರಿ, ನಾಟಕ ಪ್ರದರ್ಶನ ಚಕ್ಕಡಿ ಓಡಿಸುವ ಸ್ಪರ್ಧೆ..
ಬೆಳಗಾವಿ.
ಸುಮಾರು 25 ವರ್ಷಗಳ ನಂತರ ನಡೆಯುವ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದೇವಿ ಜಾತ್ರೆಗೆ ಇಡೀ ಗ್ರಾಮವೇ ಈಗ ಸಿಂಗಾರಗೊಳ್ಳುತ್ತಿದೆ. ಗ್ರಾಮದಲ್ಲಿ ಪ್ರತಿಯೊಬ್ಬರು ತಮ್ಮ ಮನೆಗಳ ಸ್ವಚ್ಚತೆಯಲ್ಲಿ ತೊಡಗಿದ್ದಾರೆ, ಮತ್ತೊಂದು ಕಡೆಗೆ ಜಾತ್ರಾ ಮಹೋತ್ಸವ ಕಮಿಟಿಯವರೂ ಸಹ ಜಾತ್ರೆಯ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ,
ಇದೇ ದಿ. 12 ರಿಂದ ಮೇ 3 ರವರೆಗೆ ಗ್ರಾಮದೇವತೆ ಜಾತ್ರೆ ಮತ್ತು ಎಪ್ರಿಲ್ 15 ರಂದು ಫಡಿಬಸವೇಶ್ವರ ಜಾತ್ರೆ ನಡೆಯಲಿದೆ,

ಈ ಹಿನ್ನೆಲೆಯಲ್ಲಿ ಪ್ರತಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ರಾಜ್ಯ ಅಂತಾರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿವೆ,
ಬಳ್ಳಾರಿ ಜಿಲ್ಲೆಯ ಕೂಡ್ಲಗಿಯ ಕೊಟ್ರೇಶಿ ತಂಡದಿಂದ ಹಾಸ್ಯ ಸಂಜೆ, ನಗೆ ಹಬ್ಬ, ರಸಮಂಜರಿ, ಚಕ್ಕಡಿ ಓಡಿಸುವ ಸ್ಪರ್ಧೆ ಮುಂತಾದವುಗಳು ನಡೆಯಲಿವೆ,.
ದಿ, 12 ರಂದು ವಾರ ಹಾಕುವುದು ಮತ್ತು ಸೀಮೆ ಕಟ್ಟುವುದು ದಿ. 15 ರಂದು ಶ್ರೀಗಳ ಉಪಸ್ಥಿತಿಯಲ್ಲಿ ಶ್ರೀ ಫಡಿಬಸವೇಶ್ವರ ಕಳಸಾರೋಹಣ ನಡೆಯಲಿದೆ, ದಿ.16 ರಂದು ದೇವಿಯ ಜೋಡಣೆ ಮಾಡುವುದು,

ನಂತರ ದಿ, 17 ರಿಂದ 30 ಎಪ್ರಿಲ್ ವರೆಗೆ ಫಡಿಬಸವೇಶ್ವರ ದೇವಸ್ಥಾನದಲ್ಲಿ ಮಹಾಪ್ರಸಾದ ನಡೆಯಲಿದೆ. ದಿ. 18 ರಂದು ಬೆಳಿಗ್ಗೆ ಹೊನ್ನಾಟ ಮತ್ತು ರಾತ್ರಿ 9.30 ಕ್ಕೆ ಕಲಾವತಿ ದಯಾನಂದ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ದಿ 19 ರಂದು ಬೆಳಿಗ್ಗೆ ಹೊನ್ನಾಟ ಮತ್ತು ರಾತ್ರಿ 9,.30ಕ್ಕೆ ಕಾಮಿಡಿ ತಂಡವರಿಂದ ನಗೆ ಹಬ್ಬ ನಡೆಯಲಿದೆ. ದಿ 20 ರಂದೂ ಸಹ ಬೆಳಿಗ್ಗೆ ಹೊನ್ನಾಟ ಮತ್ತು ರಾತ್ರಿ 9.30 ಕ್ಕೆ ಕಾಶೀಮ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ದಿ. 21 ರಂದು ಬೆಳಿಗ್ಗೆ 10 ಕ್ಕೆ ಗ್ರಾಮದೇವಿ ಮಂದಿರದಿಂದ ರಥೋತ್ಸವ ನಂತರ ಫಡೀಬಸವೇಶ್ವರ ದೇವಸ್ಥಾನದ ಆಙವರಣದಲ್ಲಿ ಗದ್ದುಗೆಯ ಮೇಲೆ ಗ್ರಾಮದೇವಿಯ ಸ್ಥಾಪನೆ ಮಾಡಲಾಗುತ್ತದೆ, ಅಂದೇ ರಾತ್ರಿ 10 ಕ್ಕೆ ಮಹಾಭಾರತ ತಂಡದವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಲಿದೆ.
ದಿ. 22 ರಿಂದ 30 ರವರೆಗೆ ಬೆಳಿಗ್ಗೆ ಕುಂಕುಮಾರ್ಚನೆ ಮತ್ತು ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ, ಅಷ್ಟೇ ಅಲ್ಲ ಪ್ರತಿ ದಿನ ರಾತ್ರಿ ಬೇರೆ ಬೇರೆ ತಂಡದಿಂದ ನಾಟಕ ಪ್ರದರ್ಶನ, ಜೋಡೆತ್ತಿನ ಖಾಲಿ ಬಂಡಿ ಓಡಿಸುವ ಸ್ಪರ್ಧೆ, ಕುಸ್ತಿ ಪಂದ್ಯಾವಳಿ ಮುಂತಾದವುಗಳು ನಡೆಯಲಿವೆ. ಮೇ 1 ರಂದು ದೇವಿ ಸೀಮೆಗೆ ಹೋಗುವಳು ಮತ್ತು ದಿ 3 ರಂದು ದೇವಸ್ಥಾನದಲ್ಲಿ ದೇವಿಯ ಪುನ: ಪ್ರತಿಷ್ಠಾಪನೆ ನಡೆಯಲಿದೆ.

ಬಡೇಕೊಳ್ಳಮಠದ ಶ್ರೀ ಶಿವಯೋಗಿ ನಾಗೇಂದ್ರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಜರುಗಲಿವೆ, ಮುತ್ನಾಳದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಅರಳೀಕಟ್ಟಿಯ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು, ತಾರೀಹಾಳದ ಶ್ರೀ ಅಡವೇಶ್ವರ ಸ್ವಾಮಿಗಳು ಸಾನಿಧ್ಯವಹಿಸುವರು, ಕಲ್ಲಯ್ಯ ಸ್ವಾಮಿಗಳು ಉದೇಶಿಮಠ, ವೇದಮೂರ್ತಿ ನಿಂಗಯ್ಯ ಸ್ವಾಮಿಗಳು ಹಿರೇಮಠ, ಗಂಗಯ್ಯ ಸ್ವಾಮಿಗಳು ಹಿರೇಮಠ, ವೇದಮೂರ್ತಿ ಈರಯ್ಯ ಸ್ವಾಮಿಗಳು ಉದೇಶಿಮಠ, ಈರಯ್ಯ ಸ್ವಾಮಿಗಳು ಕಂಬಿ ಮತ್ತು ದಿಗಂಬರ ಜೋಶಿ ಇವರ ನೇತೃತ್ವದಲ್ಲಿ ಇನ್ನುಳಿದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.