ಹತ್ತಕ್ಕೂ ಹೆಚ್ಚು ನಿಮಿಷ ಮಾತಾಡಿದ ಪ್ರಧಾನಿ. ರೈತರು, ಕಬ್ಬು ಬೆಳೆಗಾರರ ಬಗ್ಗೆ ಪ್ರಶ್ನೆ.
ಬೂತ್ ಮಟ್ಟದ ಕಾರ್ಯವೈಖರಿ, ಪೇಜ್ ಪ್ರಮುಖರ ಬಗ್ಗೆ ಪ್ರಶ್ನೆ ಮಾಡಿದ ಮೋದಿ. ಮೋದಿ ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿದ ಶೃತಿ.
ಬೆಳಗಾವಿ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಆಯ್ದ ಬಿಜೆಪಿ ಬೂತ್ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು, ‘ಖುದ್ದು ಅವರೇ ದೂರವಾಣಿ ಕರೆ ಮಾಡಿದ ಮೋದಿ, ಬೂತ್ ಮಟ್ಟದ ಕಾರ್ಯಕ್ರಮಗಳ ಬಗ್ಗೆ ಅಷ್ಟೇ ಅಲ್ಲ ಪೇಜ್ ಪ್ರಮುಖರನ್ನು ಯಾವ ರೀತಿ ನೇಮಕ ಮಾಡಿಕೊಳ್ಳುತ್ತೀರಿ ಎನ್ನುವುದರ ಬಗ್ಗೆ ಬೂತ್ ಅಧ್ಯಕ್ಷರನ್ನು ಪ್ರಶ್ನೆ ಮಾಡಿದರು, ಬೆಳಗಾವಿಯಿಂದ ಬೂತ್ ನಂಬರ 80 ರ ಅಧ್ಯಕ್ಷೆ ಶೃತಿ ಅಪ್ಟೇಕರ ಅವರೊಂದಿಗೆ ಮೋದಿ ಇಂದು ಮಾತುಕತೆ ನಡೆಸಿದರು,
ಮೋದಿ ಕೇಳಿದ ಪ್ರಶ್ನೆ
ಚುನಾವಣೆ ಅಭಿಯಾನ ಹೇಗೆ ನಡೆಯುತ್ತಿದೆ, ?ಕರ್ನಾಟಕ ದಲ್ಲಿ ಸಾಮಾನ್ಯ ಮತದಾರರು, ವಿಶೇಷವಾಗಿ ಅಲ್ಲಿನ ಮಹಿಳೆಯರು ಈ ಚುನಾವಣೆ ಕುರಿತು ಏನು ಹೇಳುತ್ತಾರೆ ? ಇದರ ಜೊತೆಗೆ ಕೃಷಿ ಮಾಡುವಂತಹ ಅನ್ನದಾತರು ಬಹಳ ದೊಡ್ಡ ಸಂಖ್ಯೆಯಲ್ಲಿದ್ದಾರೆ, ಅಲ್ಲಿ ಕಬ್ಬು ಬೆಳೆಯುವಂತಹ ಅಧಿಕ ಬೆಳೆಗಾರರು ಇದ್ದಾರೆ, ನಮ್ಮ ಸರ್ಕಾರ ರೈತಿರಗಾಗಿ ಮಾಡಿರುವಂತಹ ಕಾರ್ಯದ ಬಗ್ಗೆ ಕರ್ನಾಟಕದ ಅನ್ನದಾತರು ಏನು ಹೇಳುತ್ತಾರೆ?
ಮೋದಿಜಿಯರು ಸುಮಾರು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಶೃತಿ ಅಪ್ಟೇಕರ ಅವರೊಂದಿಗೆ ಮಾತನಾಡಿದರು, ಅತ್ಯಂತ ಖುಷಿಯಲ್ಲಿದ್ದ ಮೋದಿಜಿಯವರು ಮೊದಲು ಮರಾಠಿಯಲ್ಲಿಯೇ ಹೇಗಿದ್ದೀರಾ ಎಂದು ಕೇಳಿ ನಂತರ ಪ್ರಶ್ನೆ ಮಾಡಿದರು, ಕಳೆದ ಹತ್ತು ವರ್ಷದ ಮೋದಿ ಸಕರ್ಾರದ ಸಾಧನೆ, ಕರ್ನಾಟಕಖ್ಕೆ ಬಂದಂತ ಕೊಡುಗೆ, ಮಹಿಳಾ ಸಬಲೀಕರಣ, ನಾರಿ ಶಕ್ತಿ ಯೋಜನೆ ಇವೆಲ್ಲವನ್ನು ಮತದಾರರಿಗೆ ಮೋದಿ ಆಪ್ ಮತ್ತು ಸರಳ್ ಆಪ್ ಮುಖಾಂತರ ತಿಳಿಸುತ್ತಿದ್ದೇವೆ, ಅದರಲ್ಲೂ ಮಹಿಳಾ ಮತದಾರರಿಗೆ ಹೆಚ್ಚಾಗಿ ತಿಳಿಸುತ್ತಿದ್ದೇವೆ. ಕರ್ನಾಟಕದಲ್ಲಿ ನಮ್ಮ ಬಿಜೆಪಿ ಸರ್ಕಾರ ಇದ್ದಾಗ ರೈತರಿಗೆ ಕೇಂದ್ರ ಕೊಡುತ್ತಿದ್ದ 6 ಸಾವಿರ ಜೊತೆಗೆ 4 ಸಾವಿರ ಸೇರಿಸಿ ಕೊಡುತ್ತಿದ್ದರು ಈಗಿನ ಸರ್ಕಾರ ಆ 4 ಸಾವಿರ ರೂವನ್ನು ರಾಜಕೀಯ ದುರುದ್ದೇಶದಿಂದ ನಿಲ್ಲಿಸಿದೆ .. ಪ್ರತಿ ಮತದಾರನ್ನು ಭೇಟಿ ಮಾಡುವ ಯೋಜನೆ ತಯಾರಾಗಿದೆ. ಸಮಾಜದ ವಿಭಿನ್ನ ವರ್ಗಗಳ ಸಭೆಯನ್ನು ಕರೆದಿದ್ದೇವೆ. ನಮ್ಮ ಸರ್ಕಾರ ಹಾಗು ಪಕ್ಷದ ಆ ವರ್ಗದ ಜನರಿಗೆ ಮಾಡಿದಂತೆ ಕೆಲಸವನ್ನ ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ