ಬೆಳಗಾವಿ..
ಚಿಕ್ಕೋಡಿಯ ಹಾಲಿ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ಯೂ ಆಗಿರುವ ಅಣ್ಣಾಸಾಹೇಬ ಜೊಲ್ಲೆಗೆ ವಿರೋಧಿಗಳಿಗಿಂತ ಮಗ್ಗುಲ ಮುಳ್ಳುಗಳೇ ಜಾಸ್ತಿ.
ಬಹುತೇಕ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಸಿಸ್ ಬಿಜೆಪಿ ಯುದ್ಧ ನಡೆದಿದ್ದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾತ್ರ ವಿಚಿತ್ರ ಸನ್ನಿವೇಶ ನಡೆದಿದೆ.
ಇಲ್ಲಿ ಯಾರೂ ಅಷ್ಟು ಸುಲಭವಾಗಿ ಅರ್ಥೈಸಿ ಕೊಳ್ಳದ ಹಾಗೆ ಮ್ಯಾಚ್ ಫಿಕ್ಸಿಂಗ್ ಆಗಿದೆ.
ಸಧ್ಯ ಬಂದಿರುವ ಮಾಹಿತಿ ಪ್ರಕಾರ, ಚಿಕ್ಕೋಡಿ ಲೋಕ ಸಮರದಲ್ಲಿ ಜೊಲ್ಲೆ ವರ್ಸಿಸ್ ಕಾಂಗ್ರೆಸ್ ಮತ್ತು ಬಿಜೆಪಿ ಯುದ್ಧ ಜೋರಾಗಿ ನಡೆದಿದೆ. !
ಅಂದರೆ ಹಾಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಯನ್ನು ಸೋಲಿಸಲು ಕಾಂಗ್ರೆಸ್ ಬಹಿರಂಗವಾಗಿ ತಂತ್ರಗಾರಿಕೆ ನಡೆಸಿದ್ದರೆ, ಆ ಭಾಗದ ಬಿಜೆಪಿ ಪ್ರಮುಖರೂ ಕೂಡ ಸೈಲೆಂಟ್ ಉಳಿದು ಬಿಟ್ಟಿದ್ದಾರೆ, ಅಂದರೆ ಪರೋಕ್ಷವಾಗಿ ಕಾಂಗ್ರೆಸ್ ಕೈ ಬಲಪಡಿಸುವ ಕೆಲಸ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಾರಕಿಹೊಳಿ ಕುಟುಂಬದ ಕುಡಿ ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರಿಂದ ಒಂದು ರೀತಿಯ ಕಣ ಕಾವೇರುವಂತೆ ಮಾಡಿದೆ. ಹಾಗೆ ನೋಡಿದರೆ ಚಿಕ್ಕೋಡಿ ಬಿಜೆಪಿ ಭದ್ರಕೋಟೆ. ಆದರೆ ಅಲ್ಲಿ ಅಥಣಿ, ಕಾಗವಾಡ, ಕುಡಚಿ ಮತ್ತು ನಿಪ್ಪಾಣಿ ಕ್ಷೇತ್ರಗಳು ಈಗ ಕಾಂಗ್ರೆಸ್ ಹಿಡಿತದಲ್ಲಿವೆ. ಇಲ್ಲಿ ಕೈ ಭದ್ತಕೋಟೆಯೊಳಗೆ ನುಗ್ಗಿ `ಕಮಲವನ್ನು ಜೊಲ್ಲೆ ಹೇಗೆ ಅರಳಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು,
ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ, ಅಥಣಿಯ ಲಕ್ಚ್ಮಣ ಸವದಿ ಕಾಂಗ್ರೆಸ್ಗೆ ಹೋದ ನಂತರ ಬಿಜೆಪಿಗೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ರಾಜಕೀಯ ಹೊರತುಪಡಿಸಿ ಸವದಿ ಮತ್ತು ಜೊಲ್ಲೆ ನಡುವೆ ಉತ್ತಮ ಸಂಬಂಧವಿದೆ, ಈ ಸಂಬಂಧ ವಕರ್ೌಟ್ ಆದರೆ ಬಿಜೆಪಿಗೆ ಅನುಕೂಲ ಆಗುವುದರಲ್ಲಿ ಅನುಮಾನವಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ರಮೇಶ ಜಾರಕಿಹೊಳಿ ಅವರ ನಡುವಿನ ವೈಮನಸ್ಸಿನ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಂಡರು, ಆದರೆ ಈಗ ಅದೇ ಸವದಿ ಜಾರಕಿಹೊಳಿ ಕುಟುಂಬವನ್ನು ಎಷ್ಟರ ಮಟ್ಟಿಗೆ ಬೆಂಬಲಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು,
ಇಲ್ಲಿ ಸಚಿವ ಸತೀಶ ಜಾರಕಿಹೊಳಿ ಕೂಡ ಲಕ್ಷ್ಮಣ ಸವದಿಯವನ್ನು ಭೆಟ್ಟಿ ಮಾಡಿ ಮಾತುಕತೆ ನಡೆಸಿದ್ದಾರೆ,. ಮೇಲಾಗಿ ಸವದಿ ಕೂಡ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೂ ಹೊರಟಿದ್ದಾರೆಂದು ಗೊತ್ತಾಗಿದೆ.
ಬಿಜೆಪಿಗರೇ ಸೈಲೆಂಟ್…!
ಮತ್ತೊಂದು ಸಂಗತಿ ಎಂದರೆ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಕೆಲ ಹಾಲಿ, ಮಾಜಿ ಶಾಸಕರು ಪ್ರಚಾರದಿಂದ ತೆರೆಗೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ,

ಕಾಗವಾಡದ ಮಾಜಿ ಶಾಸಕ ಶ್ರೀಮಂತ ಪಾಟೀಲ, ಅಥಣಿಯ ಮಹೇಶ ಕುಮಟಳ್ಳಿ ಸೇರಿದಂತೆ ಮತ್ತಿತರರು ಪ್ರಚಾರದಿಂದ ದೂರ ಉಳಿದಿದ್ದು ಹಲವು ಸಂಶಯಗಳಿಗೆ ಆಸ್ಪದ ಮಾಡಿಕೊಡುತ್ತಿದೆ,
ಇವರಿಗೆಲ್ಲರಿಗೆ ಸೈಲೆಂಟ್ ಉಳಿಯುವಂತೆ ಮಾಡಿದ್ದು ಯಾರು ಎನ್ನುವುದರ ಬಗ್ಗೆಯೂ ರಾಜಕೀಯ ವಲಯದಲ್ಲಿ ಚಚರ್ೆ ನಡೆದಿದೆ,.