Headlines

ಪ್ರಿಯಾಂಕಾ ಪರ ರಾಹುಲ್ ಪ್ರಚಾರ

ಪ್ರಿಯಂಕಾ ಪರ ಯುವ ನಾಯಕ ರಾಹುಲ್‌ ಜಾರಕಿಹೊಳಿ ಅಬ್ಬರ ಪ್ರಚಾರ

ಬೆಳಗಾವಿ: ಬಡವರು ದೀನ ದಲಿತರು ಸೇರಿದಂತೆ ಎಲ್ಲಾ ವರ್ಗಗಳ ಜನರ ಪಕ್ಷ ವೆಂದರೆ ಅದು ಕಾಂಗ್ರೆಸ ಪಕ್ಷ ವಾಗಿದೆ. ಜನಪರ ಯೋಜನೆಗಳನ್ನು ಜಾರಿ ತಂದು ಅಬಿವೃದ್ಧಿ ಮಾಡುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ನಮ್ಮ ಸಹೋದಿರಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ರಾಯಬಾಗ ವಿಧಾನಸಭಾ ಕ್ಷೇತ್ರದ ಕಂಕಣವಾಡಿ ಪಪಂ ಮತ ಕ್ಷೇತ್ರದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ ಪಕ್ಷ ತತ್ವ ಸಿದ್ಧಾಂತ.ಜನಪರ ಯೋಜನೆ ಗಳನ್ನು ಜಾರಿಗೆ ತಂದು ಅಭಿವೃದ್ಧಿ ಮಾಡುವ ಮೂಲಕ ಎಲ್ಲಾ ಸಮುದಾಯಗಳ.ಅಭಿವೃದ್ಧಿಯ ಬಯಸುವ ಪಕ್ಷ ಕಾಂಗ್ರೆಸ ಎಂದರು.


ಸಿದ್ಧರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ಅನೇಕ ಜನಪರ ಬಾಗ್ಯಗಳನ್ನು ಜಾರಿಗೆ ತಂದಿದ್ದಾರೆ ಅಲ್ಲದೆ ಬಡವರ ಹಾಗೂ ವಿದ್ಯಾರ್ಥಿಗಳ ಹಸಿದು ಹೊಟ್ಟೆ ತುಂಬಿಸಲು ಇಂದಿರಾ ಕ್ಯಾಟೀನ್ ಆರಂಭಿಸಿದರು ಮಹಿಳೆಯರ ಹಾಗೂ ನಿರುದ್ಯೋಗ ಯುವಕರಿಗಾಗಿ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದರು ಎಂದರು.
ಸತೀಶ ಜಾರಕಿಹೊಳಿ ಫೌಂಡೇಶನ್ ಮೂಲಕ ಯಾವುದೇ ಭೇದಭಾವ ಇಲ್ಲದೇ ಪ್ರತಿಭಾವಂತ ಕ್ರೀಡಾಪಟುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತ ಅವರಿಗೆ ಮನೋ ಸ್ಥೈರ್ಯ ತುಂಬಿದ್ದಾರೆ.‌ ವಯಸ್ಸಿನಲ್ಲಿ ಚಿಕ್ಕವರಿದ್ದರು ಸಮಾಜ ಸೇವೆಯಲ್ಲಿ ಅವರ ಕೀರ್ತಿ ದೊಡ್ಡದಾಗಿದೆ. ಹೀಗಾಗಿ ಅವರನ್ನು ಆಯ್ಕೆ ಮಾಡುವ ಮೂಲಕ‌ ಚಿಕ್ಕೋಡಿ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ವಿಶೇಷ ಜನಪರ ಕಾರ್ಯಕ್ರಮಗಳೊಂದಿಗೆ ಅಭಿವದ್ಧಿಯ ಕ್ರಾಂತಿ ಗೆ ಮುನ್ನುಡಿ ಬರೆದಿದ್ದು, ರೈತರು, ಕೂಲಿ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲರೂ ನೆಮ್ಮದಿಯಿಂದ ಬದುಕು ಸಾಗಿಸಲು ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಬೇಕು. ಭ್ರಷ್ಟಾಚಾರ ಮುಕ್ತ ಅಧಿಕಾರ ನೀಡಲು ನಮ್ಮ ಸಹೋದರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಒಂದು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಈ ವೇಳೆ ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರನ್ನು ಗ್ರಾಮದ ಮುಖಂಡರು ಹಾಗೂ ಯುವಕರು ಸನ್ಮಾನಿಸಿದರು. ಈ ವೇಳೆ ಕಾಂಗ್ರೆಸ್‌ ಮುಖಂಡ ಅರ್ಜುನ ನಾಯಕವಾಡಿ, ತಮ್ಮಣ್ಣ ನಾಯಕವಾಡಿ, ಸಿದ್ದು ಬಂಡಿಗಾರ, ಬಾಳಪ್ಪ ಅರಬಾಂವಿ, ಕರೆಪ್ಪ ಪೂಜೇರಿ, ರವೀಂದ್ರ ಪೂಜೇರಿ, ಭೀಮಪ್ಪ ಮಸರಗುಟ್ಟಪಿ, ಭೀಮಪ್ಪ ನಾಯಕವಾಡಿ, ಬಸವರಾಜ ಮರ್ದಿ, ಡಾ. ಅರವಿಂದ ಗಡಾದಿ, ಸಚೀನ್‌ ನಾಯಕವಡಿ ಸೇರಿದಂತೆ ಇತರರು ಇದ್ದರು

Leave a Reply

Your email address will not be published. Required fields are marked *

error: Content is protected !!