Headlines

ಮೋದಿ ದಾರಿಯಲ್ಲಿ ಬೆಳಗಾವಿ ಹಿರೇಮಠ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತದ ಕಲ್ಪನೆಯಂತೆ ಬೆಳಗಾವಿ ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ, ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಮುಕ್ಕಾದ ದೇವರ ಫೋಟೋಗಳನ್ನು ಗಿಡ, ಮರಗಳ ಕೆಳಗಡೆ ಇಡುವ ಬದಲು ಶಾಸ್ತ್ರೋಕ್ತವಾಗಿ ಅದನ್ನು ವಿಸರ್ಜನೆ ಮಾಡಬೇಕೆಂದು ಜನರಲ್ಲಿ ಜಾಗೃತಿ‌ ಮೂಡಿಸಿ ನಗರದ ಪ್ರಮುಖ ಸ್ಥಳಗಳಲ್ಲಿ ಬಿತ್ತಿ ಪತ್ರ ಹಚ್ಚುವ ಮೂಲಕ ಮಾದರಿಯಾಗಿದ್ದಾರೆ.


ದೇವರ ಫೋಟೋಗಳನ್ನು ಖುಷಿಯಿಂದ ತಂದು ‌ಮನೆಯಲ್ಲಿ ಪೂಜೆ ಮಾಡುವುದು ಸರ್ವೇಸಾಮಾನ್ಯ. ಆದರೆ ಅದೇ ಫೋಟೋ ಮುಕ್ಕಾದಾಗ ಅದನ್ನು ಮರ, ಗಿಡದ ಕೆಳಗಡೆ ಅನಾಥವಾಗಿ ಇಡುವುದು ಸರಿಯಲ್ಲ. ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಮೆರೆಯಬೇಕು. ಸ್ವತಃ ತಾವೇ ಮುಕ್ಕಾದ ಫೋಟೋಗಳನ್ನು ವಿಧಿ ವಿಧಾನಗಳ ಮೂಲಕ ವಿಸರ್ಜನೆ ಮಾಡುವುದು ಉತ್ತಮ ಎಂದು ವೀರೇಶ ಬಸಯ್ಯ ಹಿರೇಮಠ ಜನರಿಗೆ ಕರೆ ನೀಡಿದರು.
ಪ್ರಧಾನಿ ನರೇಂದ್ರ ‌ಮೋದಿ ಅವರು ಸ್ವಚ್ಚ ಭಾರತದ ಕಲ್ಪನೆಯನ್ನು ಮೊದಲಿಗೆ ಕೆಲವರು ಆಡಿಕೊಂಡಿದ್ದರು. ಈಗ ದೇಶವೇ ಬದಲಾಗಿದೆ. ಪ್ರತಿಯೊಬ್ಬರೂ ಸ್ವಚ್ಚತೆಗೆ ಅಧ್ಯತೆ ನೀಡುತ್ತಿದ್ದಾರೆ. ಅದರಂತೆ ನಾವು ಆರಂಭಿಸಿರುವ ಫೋಟೋ‌ ವಿಸರ್ಜನೆಯ ಕಾರ್ಯವನ್ನು ಪ್ರತಿಯೊಬ್ಬರು ಚಾಚು ತಪ್ಪದೆ ಮಾಡಿದರೇ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ ಎಂದರು.


ಫೋಟೋ ವಿಸರ್ಜನೆ ಮಾಡುವಾಗ ಜನರು ಫೋಟೋದಲ್ಲಿರುವ ಗಾಜು ಮತ್ತು ಕಟ್ಟಿಗೆಯನ್ನು ಬೇರ್ಪಡಿಸಬೇಕು. ಗಾಜುಗಳನ್ನು ಮರುಬಳಿಕೆಗೆ ಪ್ರಯತ್ನಿಸಿ, ಕಟ್ಟಿಗೆಯನ್ನು ಅಗ್ನಿ ಸ್ಪರ್ಶದಲ್ಲಿ ಹಾಕಬೇಕು. ದೇವರ ಫೋಟೋಗಳನ್ನು‌ ನಿತ್ಯ ಪೂಜಿಸುವ ಹಾಗೆ ಅಗ್ನಿ ಯಜ್ಞ ‌ಮಾಡಬೇಕು. ಕೊನೆಗೆ ಉಂಟಾಗುವ ಬಸ್ಮವನ್ನು ತುಳಸಿ, ಆಲ, ಬಿಲ್ವ ಪತ್ರೆ, ಬನ್ನಿ ಯಾವುದಾದರೂ ಗಿಡದ ಕೆಳಗಡೆ ಹಾಕುವುದು ಉತ್ತಮ ಎಂದರು.
ನೀಲಕಂಠಯ್ಯ ರಾಚಯ್ಯ ಹಿರೇಮಠ ಶಾಸ್ತ್ರೀ, ಪಾಲಿಕೆ ಸದಸ್ಯ ಬಸವರಾಜ ಮೊದಗೇಕರ, ಪರಶುರಾಮ, ಸುನೀಲ್ ಮಾಯನಾಚೆ, ಶೀತಲ ಪಾಟೀಲ್, ಮಾರುತಿ ಕಣಬರಕರ, ಮತ್ತು ಕುಡುಚಿ ಕಲ್ಮೇಶ್ವರ ದೇವಸ್ಥಾನದ ಆಡಳಿ ಸಿಬ್ಬಂದಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!