ಬೆಳಗಾವಿ ಮೃತ್ಯುಂಜಯ ನಗರ, ಭಾಗ್ಯನಗರದಲ್ಲಿ ಶೆಟ್ಟರ್ ಸಂಚಾರ.
ಬೀದಿ ವ್ಯಾಪಾರಿಗಳಿಂದಲೂ ಬೆಂಬಲ, ಶೆಟ್ಡರ್ ಗೆAdvanced congrats ಹೇಳಿದ ಮತದಾರರು.
ಇದರ ಜತೆಗೆ ಬಿಜೆಪಿ ನಗರಸೇವಕರ ಗುಣಗಾನ ಮಾಡಿದ ಮತದಾರರು . ಹೂವಿನಹಾರ ಹಾಕಿ ಸ್ವಾಗತಿಸಿದ ಜನ.
ನಮಗೆ ಭಿಜೆಪಿ ಬಿಟ್ಡು ಮತ್ತೊಂದು ಪಕ್ಷ ಗೊತ್ತಿಲ್ಲ ಎಂದ ಜನ
ಬೆಳಗಾವಿ. ಬೆಳಗಾವಿ ಲೋಜಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಗೆ ಈಗ ಪ್ರತಿಯೊಂದು ಕಡೆಗೆ ಭಾರೀ ಬೆಂಬಲ ವ್ಯಕ್ತವಾಗತೊಡಗಿದೆ.

ಪ್ರಚಾರಕ್ಕೆ ಹೋದ ಕಡೆಗೆ ಜನರೇ Advance congratulations ಹೇಳುತ್ತಿರುವುದು ಕಂಡು ಬರುತ್ತಿದೆ ಅಷ್ಟೇ ಅಲ್ಲ ಬೆಳಿಗ್ಗೆ ಚಾಯ್ ಪೇ ಚರ್ಚಾ ನಡೆಸಿದ ಸಂದರ್ಭದಲ್ಲಿ ಯಂತೂ ಜನ ಮುಗಿಬೀಳತೊಡಗಿದ್ದಾರೆ. ಶೆಟ್ಟರ್ ಕೂಡ ಅಭಿವೃದ್ಧಿ ಜೊತೆಗೆ ದೇಶದ ಸುರಕ್ಷತೆ ದೃಷ್ಟಿಯಿಂದ ಬಿಜೆಪಿ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ನಗರಸೇವಕರು, ಸಾಥ್ ನೀಡುತ್ತಿದ್ದಾರೆ.

ಇಂದು ಬೆಳಿಗ್ಗೆ ಭಾಗ್ಯನಗರ 9 ನೇ ಕ್ರಾಸ್ ಮತ್ತು ವಾರ್ಡ ನಂಬರ ,43 ರಲ್ಲಿ ಬರುವ ಮೃತ್ಯುಂಜಯ ನಗರದಲ್ಲಿರುವ ಉದ್ಯಾನದಲ್ಲಿ ಶೆಟ್ಟರ್ ಮತಬೇಟೆ ಮಾಡಿದರು. ನಗರಸೇವಕಿ ವಾಣಿ ಜೋಶಿ, ಅಭಿಜಿತ್ ಜವಳಕರ ಸೇರಿದಂತೆ ಬಿಜೆಪಿ ಮುಖಂಡರಾದ ಮಧು ಗುರವ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.