ಬೆಳಗಾವಿ. ಬಿದ್ದಾಗ ಆಳಿಗೊಂದು ಕಲ್ಲು ಎನ್ನುವ ಮಾತಿದೆ. ಅದು ಸಹಜ ಕೂಡ ಹೌದು.
ಹುಬ್ಬಳ್ಳಿಯ ನೇಹಾ ಹಿರೇಮಠ ಬರ್ಬರ ಹತ್ಯೆಯಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಫೊಟೊಗಳ ವೈರಲ್ ಮಾಡುವುದು ಶುರುವಾಗಿದೆ.
ಆರಂದಲ್ಲಿ ಫಯಾಜನು ನೇಹಾಳನ್ನು ಕೊಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಯಿತು. ಅದು ಕೂಡ ಸಿಕ್ಕಾಪಟ್ಟೆ ವೈರಲ್ ಆಯಿತು. ಅದನ್ನು ಗಮನಿಸಿದ ನಂತರ ಆಕ್ರೋಶಿತಗೊಂಡ ಜನ ಫಯಾಜಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಆದರೆ ಇದೆಲ್ಲ ಒಂದು ಕಡೆ ನಡೆದಿರುವಾಗ ಸಿಕ್ಕಿಬಿದ್ದ ಫಯಾಜನನ್ನು ಹುಬ್ಬಳ್ಳಿ ಪೊಲೀಸರು ತಮ್ಮವಶಕ್ಕೆ ತೆಗೆದುಕೊಂಡರು. ಸಹಜವಾಗಿ ಆತನ ಮೊಬೈಲ್ ನ್ನೂ ಕೂಡ ಪೊಲೀಸರು ಜಪ್ತಿಮಾಡಿಕೊಂಡರು.

ಗಮನಿಸಬೇಕಾದ ಸಂಗತಿ ಎಂದರೆ, ಇದಾದ ನಂತರ ಫಯಾಜ ಮೊಬೈಲ್ ನಲ್ಲಿದ್ದ ನೇಹಾ ಮತ್ತು ಆತನ ಪೊಟೊಗಳು ವೈರಲ್ ಆದವು. ಎಲ್ಲೊ ಒಂದು ಕಡೆಗೆ ಪ್ರಕರಣದ ಗಂಭೀರತೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಯಿತು. ಕುಟುಂಬಸ್ಥರು ಇಂತಹ ಪೊಟೊಗಳನ್ನು ಪೊಲೀಸರೇ ವೈರಲ್ ಮಾಡುತ್ತಿದ್ದಾರೆಂದೂ ಆರೋಪಿಸಿದ್ದರು.
ಈಗ ಅದೆಲ್ಲವೂ ಒಂದು ಹಂತಕ್ಕೆ ಬಂದು ಹೋಯಿತು ಎನ್ನುವಾಗಲೇ ಕಾಂಗ್ರೆಸ್ ನಾಯಕರೊಬ್ಬರು ಅದೇ ಫಯಾಜಗೆ ಹಿಂದೆ ಸನ್ಮಾನ ಮಾಡಿದ ಪೊಟೊ ಈಗ ವೈರಲ್ ಆಗುತ್ತಿದೆ. ಹಾಗೆ ನೋಡಿದರೆ, ಫಯಾಜ ಬಾಡಿಬಿಲ್ಡರ್ . ಯುನಿವರ್ಸಿಟಿ ಬ್ಲೂ.ಹೀಗಾಗಿ ಆತನಿಗೆ ಸನ್ಮಾನ ಆಗಿದ್ದುಂಟು. ಆದರೆ ಅದಕ್ಕೆ ಬೇರೆ ರೀತಿಯ ಬಣ್ಣ ಕೊಟ್ಟು ಪೊಟೊ ವೈರಲ್ ಮಾಡುವ ಕೆಟ್ಟ ಸಂಪ್ರದಾಯ ಬೆಳೆದಿದೆ.