Headlines

ಕಮಲ ಹಿಡಿದ ಕಿತ್ತೂರು ಸೊಸೆ…!

ಬೆಳಗಾವಿ

ಕಿತ್ತೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಕಾಂಗ್ರೆಸನ ಭದ್ರಕೋಟೆಯನ್ನಾಗಿ ಪರಿವರ್ತಿಸಿದ ಮಾಜಿ ಸಚಿವರು ಧಣಿಗಳೆಂದೇ ಚಿರಪರಿಚಿತರಾಗಿದ್ದ ದಿ. ಡಿ ಬಿ ಇನಾಮದಾರ್ ಅವರು ಹಿರಿಯ ಮಗ ವಿಕ್ರಮ ಇನಾಮದಾರ ಸೊಸೆ ಲಕ್ಷ್ಮಿ ಇನಾಮದಾರ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿಗೆ ಅಧಿಕೃತವಾಗಿ ಇಂದು ಸೇರಿದ್ದಾರೆ.


ಬಾಗಲಕೋಟೆಯಲ್ಲಿಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ವಿಜೇಂದ್ರ ಅವರು ಪಕ್ಷದ ಶಾಲು ಹೊದಿಸಿ, ಧ್ವಜವನ್ನು ನೀಡಿ ಸ್ವಾಗತಿಸಿದರು.
ಈ ಹಿಂದೆ ಕಾಂಗ್ರೆಸ್‌ ಪಕ್ಷದಿಂದ ಸಚಿವರಾಗಿದ್ದ ಡಿ ಬಿ ಇನಾಮದಾರ ಅವರು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಕಿತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಬಲಗೊಳಿಸಿದ್ದರು.

ಆದರೆ ಅವರ ನಿಧನದ ನಂತರ ಕಾಂಗ್ರೆಸ್‌ ಮುಖಂಡರು ಅವರ ಕುಟುಂಬವನ್ನು ನಿರ್ಲಕ್ಷಿಸುತ್ತ ಬಂದಿದ್ದರು. ಇದರಿಂದ ಬೇಸತ್ತ ಅವರು ಬಿಜೆಪಿ ಸೇರಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಿ ಇನಾಮದಾರ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತತ್ವ ಸಿದ್ದಾಂತ ಹಾಗೂ ಬಿಜೆಪಿಯ ಪಕ್ಷವು ರಾಷ್ಟ್ರದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುದನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಹಿರಿಯ ಧಣಿಗಳಿದ್ದ ಸಂದರ್ಭದಲ್ಲಿ ಎಲ್ಲರೂ ಕುಟುಂಭಕ್ಕೆ ಆಪ್ತರಾಗಿದ್ದರು. ಆದರೆ ಅವರ ನಂತರ ಕಾಂಗ್ರೆಸನ ಯಾರೊಬ್ಬರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದರಿಂದ ಅನೇಕ ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಆದ್ದರಿಂದ ನಾವು ಬಿಜೆಪಿ ಬೆಂಬಲಿಸುವ ನಿರ್ಧಾರ ಮಾಡಿದ್ದೇವೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕೆನರಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸುವ ಕಾರ್ಯ ಮಾಡುತ್ತೇವೆ ಎಂದು ತಿಳಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಲೋಕಸಭಾ ಅಭ್ಯರ್ಥಿ ಪಿ ಸಿ ಗದ್ದಿಗೌಡರಸೇರದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!