Headlines

ಬೆಳಗಾವಿಯಲ್ಲಿ MES ಏಕಾಂಗಿ…!

ಬೆಳಗಾವಿ.
ಗಡಿನಾಡ ಬೆಳಗಾವಿ ಲೋಕಸಮರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಅದರ ಮುಖಂಡಡು ನಡು ನೀರಿನಲ್ಲಿಯೇ ಕೈ ಬಿಟ್ಟರೆ?
ಬೆಳಗಾವಿ ರಾಜಕೀಯದಲ್ಲಿ ಸಧ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಎಂಇಎಸ್ ಅಭ್ಯಥರ್ಿ ಮಹಾದೇವ ಪಾಟೀಲ ಈಗ ಏಕಾಂಗಿ..!
ಸಧ್ಯ ಹೇಗಾಗಿದೆ ಎಂದರೆ, ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಎಂಇಎಸ್ನ ಮಾಜಿ ಮೇಯರ್ ಸೇರಿದಂತೆ ಕೆಲವರು ಬಹಿರಂಗವಾಗಿ ಬಿಜೆಪಿ ಅಭ್ಯಥರ್ಿ ಜಗದೀಶ ಶೆಟ್ಟರ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.


ಮತ್ತೊಂದು ಕಡೆಗೆ ಬೆಳಗಾವಿಯ ಅದೇ ಎಂಇಎಸ್ ಮತ್ತೊಬ್ಬ ಮಾಜಿ ಮೇಯರ ಕಿರಣ ಸಾಯನಾಯ್ಕ ಮತ್ತು ವಿಜಯ ಮೋರೆ ಅವರು ಚಿಕ್ಕೊಡಿಯಲ್ಲಿ ಕಾಂಗ್ರೆಸ್ ಅಭ್ಯಥರ್ಿ ಪ್ರಿಯಾಂಕಾ ಜಾರಕಿಹೊಳಿ ಪರ ಪ್ರಚಾರಕ್ಕೆ ಧುಮುಕಿದ್ದಾರೆ.
ಅಂದರೆ ಈಗ ಬೆಳಗಾವಿಯಲ್ಲಿ ಎಂಇಎಸ್ ಅಭ್ಯಥರ್ಿ ಏಕಾಂಗಿ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಅವರ ಜೊತೆಗೆ ರಮಾಕಾಂತ ಕೊಂಡುಸ್ಕರ ಮತ್ತಿತರರು ಮಾತ್ರ ಇದ್ದಾರೆ.


ಇಲ್ಲಿ ಬಿಜೆಪಿ ಬೆಂಬಲಕ್ಕಿರುವ ಎಂಇಎಸ್ನವರ ಪ್ರಕಾರ ಬಹುತೇಕ ಶೇ. 80 ರಷ್ಟು ಪಕ್ಕಾ ಎಂಇಎಸ್ ಬೆಂಬಲಿಸುವ ಮರಾಠಿ ಭಾಷಿಕರು ಬಿಜೆಪಿ ಬೆಂಬಸುವ ತೀಮರ್ಾನ ಮಾಡಿದ್ದಾರೆಂದು ಹೇಳಲಾಗಿದೆ.
ಮತ್ತೊಂದು ಸಂಗತಿ ಎಂದರೆ, ಎಂಇಎಸ್ನಿಂದಲೇ ಮೇಯರ್ ಆಗಿ ಹಿಂದೊಮ್ಮೆ ವಿಧಾನಸಭೆ ಚುನಾವಣೆಗೂ ನಿಂತು ಪರಾಭವಗೊಂಡ ಕಿರಣ ಸಾಯನಾಯ್ಕ ಕೂಡ ಈಗ ಬೆಳಗಾವಿ ಎಂಇಎಸ್ ಅಭ್ಯಥರ್ಿಯತ್ತ ತಿರುಗಿ ನೋಡುತ್ತಿಲ್ಲ.
ಇವರ ಜೊಎಗೆ ದೀಪಕ ಜಮಖಂಡಿ, ಸುಜೀತ್ ಮುಳಗುಂದ ಸಹ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೊರಟಿದ್ದಾರೆ

Leave a Reply

Your email address will not be published. Required fields are marked *

error: Content is protected !!