Headlines

ಶುಲ್ಕ ಪಾವತಿಸದ ವಿದ್ಯಾರ್ಥಿ ಭವಿಷ್ಯದೊಂದಿಗೆ ಚೆಲ್ಲಾಟ

ಅಥಣಿ :

ಶಾಲೆಯ ಶುಲ್ಕ ಪಾವತಿಸದ ಕಾರಣ ನೀಡಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಪ್ರವೇಶ ಪತ್ರ ನೀಡದೆ ವಿದ್ಯಾರ್ಥಿ ಭವಿಷ್ಯದ ಜೊತೆ ಚೆಲ್ಲಾಟ ಆಡಿದ ಘಟನೆ ಅಥಣಿ ತಾಲೂಕಿನಲ್ಲಿ‌ ನಡೆದಿದೆ.

ಅಥಣಿ ತಾಲೂಕಿನ ಸತ್ತಿ ಗ್ರಾಮದ‌ ಎಸ್ಎಸ್ಎಲ್‌ಸಿ ವಿದ್ಯಾರ್ಥಿ ನಿಹಾಲ್ ಡಾಂಗೆ ಮಹಿಷವಾಡಗಿ ಗ್ರಾಮದ ಪದ್ಮಾವತಿ ಇಂಟರ್ನ್ಯಾಷನಲ್ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಪ್ರಸ್ತುತ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಶಾಲೆಯ ಶುಲ್ಕ ಕಟ್ಟದ ಕಾರಣ ಆತನಿಗೆ ಪ್ರವೇಶ ಪತ್ರ ನಿರಾಕರಣೆ ಮಾಡಲಾಗಿದೆ. ಈ ಕುರಿತು ಶಾಲಾ ಆಡಳಿತ ಮಂಡಳಿಗೆ ಎಷ್ಟೇ ಬೇಡಿಕೊಂಡರು ಕೇಳದ ಇವರು ವಿದ್ಯಾರ್ಥಿ ಭವಿಷ್ಯದ ಜೊತೆ ಚೆಲ್ಲಾಟ ಆಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಪದ್ಮಾವತಿ ಇಂಟರ್ನ್ಯಾಷನಲ್ ಶಾಲೆಯಲ್ಲೇ ವಿದ್ಯಾರ್ಥಿ ನಿಹಾಲ್ ವ್ಯಾಸಂಗ ಮಾಡುತ್ತಿದ್ದ. ಕುಟುಂಬದಲ್ಲಿ ಉಂಟಾದ ತೊಂದರೆಗಳಿಂದ ಶಾಲೆಯ ಶುಲ್ಕದಲ್ಲಿ 96 ಸಾವಿರ ರೂ. ಕಟ್ಟಲಾಗಿಲ್ಲ. ನಂತರ ಎಸ್ಎಸ್ಎಲ್ ಸಿ ಪರೀಕ್ಷೆ ಸಮೀಪಿಸುತ್ತದ್ದಂತೆ ಶಾಲೆಯ ಆಡಳಿತ ಮಂಡಳಿ ಪ್ರವೇಶ ಪತ್ರ ನೀಡಲು ನಿರಾಕರಣೆ ಮಾಡಿದ್ದಾರೆ. ಹಣ ಕಟ್ಟಲು ಕೆಲ ಸಮಯ ನೀಡಿ ಎಂದು ಪೋಷಕರು ಮನವಿ ಮಾಡಿದರು ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿಗೆ ಅವಕಾಶ ನೀಡಿಲ್ಲ.

ಎಸ್ಎಸ್ಎಲ್ ಸಿ ಯ ನಾಲ್ಕು ವಿಷಯಗಳ ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿ ಪೋಷಕರಿಂದ ಹತ್ತು ಸಾವಿರ ರೂ.‌ ಶುಲ್ಕ ಪಡೆದು ಕೇವಲ ಎರಡು ವಿಷಯಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಸಧ್ಯ ನಡೆಯಲಿರುವ ಪೂರಕ ಪರೀಕ್ಷೆ ಬೆರಯಲು ಅವಕಾಶ ಕೇಳಿದರು ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಯ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ನೊಂದ ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನೂ ವಿದ್ಯಾರ್ಥಿಗೆ ಆದ ತೊಂದರೆ ಕುರಿತು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮಗನ ಭವಿಷ್ಯಕ್ಕಾಗಿ ಪೋಷಕರು ಶಾಲಾ ಆಡಳಿತ ಮಂಡಳಿಗೆ ಎಷ್ಟೇ ಬೇಡಿಕೊಂಡರು ಪ್ರಯೋಜನ ಆಗಿಲ್ಲ ಎಂದು ಅಸಹಾಯಕತೆ ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!