Headlines

‘ಕೈ ಕೊಟ್ಟವರ್ಯಾರು? ‘ಕಮಲ’ ಕೆಳಗಿಟ್ಟವರ್ಯಾರು?

ಬೆಳಗಾವಿ ರಾಜಕಾರಣವೇ ವಿಚಿತ್ರ ಚಿಕ್ಕೋಡಿಯಲ್ಲಿ ಕಮಲ ಬಿಟ್ಡು ಕೈಗೆ ಸಾಥ್ ಕೊಟ್ಡ ಬಿಜೆಪಿ ಮಾಜಿ ಶಾಸಕರು. ಜಾತ್ರೆ ನೆಪ. ಪ್ರಚಾರಕ್ಕೆ ಸಕ್ರೀಯವಾಗಿ ಧುಮುಕದ ಕಾರ್ಯಕರ್ತರು. ಕೆಲವೆಡೆ ಅಸಾಮಾಧಾನದಿಂದ ದೂರ ದೂರ..ಅರಭಾವಿ, ಗೋಕಾಕ, ಬೆಳಗಾವಿ ದಕ್ಷಿಣ ದಿಂದಲೇ ಬಿಜೆಪಿಗೆ ಭಾರೀ ಲೀಡ್ ಸಾಧ್ಯತೆ, ಸವದತ್ತಿ, ಬೈಲಹೊಂಗಲದಲ್ಲಿ ಕೈಗೆ ಮುನ್ನೆಡೆ ಸಂಭವ,

ವಿಶೆಷ ವರದಿ
ಬೆಳಗಾವಿ.

ಲೋಕಸಮರ ಫಲಿತಾಂಶದ ಬಗ್ಗೆ ಜಿಲ್ಲೆಯ ಎರಡೂ ಕ್ಷೇತ್ರದ ಮತದಾರರ ನಾಡಿಮಿಡಿತ ಕೇಳಿದರೆ ಅಚ್ಚರಿ ಫಲಿತಾಂಶ ಗ್ಯಾರಂಟಿ.

ಅಷ್ಟೇ ಅಲ್ಲ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ‘ಕೈ’ ಕೊಟ್ಟವರು ಯಾರು ಮತ್ತು ‘ಕಮಲ’ ವನ್ನು ನಡು ನೀರಿನಲ್ಲಿ ಕೈ ಬಿಟ್ಟವರು ಯಾರು ಎನ್ನುವುದನ್ನು ಕೆದಕುತ್ತ ಹೋದರೆ ಹಲವು ರೋಚಕ ಸತ್ಯಗಳು ಹೊರಬರುತ್ತವೆ.

ಇನ್ನೂ ಕೆಲವೆಡೆ ಎರಡೂ ಪಕ್ಷದಲ್ಲಿ ಸ್ವಪಕ್ಷಿಯರು ಸೈಲೆಂಟ್ ಆಗಿದ್ದೂ ಕೂಡ ಚರ್ಚೆಗೆ ಕಾರಣವಾಗಿದೆ. ಚಿಕ್ಕೋಡಿ ಭಾಗದ ಬಿಜೆಪಿಗರು ಬೆಳಗಾವಿ ಬಿಜೆಪಿ ಪರ ಬ್ಯಾಟ್ ಬೀಸಿದರು. ಮತ್ತೊಂದು ಕಡೆಗೆ ಅದೇ ಭಾಗದ bjp ಮಾಜಿ ಶಾಸಕರು congress ಪರ ಪ್ರಚಾರ ಮಾಡಿದ್ದಾರೆ.

ಲೆಕ್ಕಾಚಾರ ಶುರು
ಬೆಳಗಾವಿ ಜಿಲ್ಲೆಯ ಎರಡೂ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳು ಆ ಎಲ್ಲ ಲೆಕ್ಕಾಚಾರಗಳನ್ನಿಟ್ಟುಕೊಂಡು ಸೋಲು ಗೆಲುವಿನ ಲೆಕ್ಕವನ್ನು ಹಾಕತೊಡಗಿದ್ದಾರೆ.
ಅದಕ್ಕೆ ಬೆಳಗಾವಿ ಜಿಲ್ಲೆಯ ಅಂತರಿಕ ರಾಜಕಾರಣವೂ ಕಾರಣ ಇರಬಹುದು, ಇಲ್ಲಿನ ರಾಜಕಾರಣದಲ್ಲಿ ಬಗಲ್ಮೆ ದುಶ್ಮನಗಳೇ ಹೆಚ್ಚು. ಯಾರಿಗೂ ಯಾರು ನಮ್ಮವರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗಲ್ಲ.

ಬೆಳಗಾವಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ 8 ರಲ್ಲಿ 5 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಿಡಿತವಿದೆ. ಮೂರು ಕಡೆಗೆ ಬಿಜೆಪಿ ಹಿಡಿತವಿದೆ,
ಇಲ್ಲಿ ಬಿಜೆಪಿ ಹಿಡಿತ ಹೊಂದಿರುವ ಅರಭಾವಿ, ಗೋಕಾಕ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುವ ಮಾತುಗಳನ್ನು ಆಡುತ್ತಿದ್ದಾರೆ, ಅದಕ್ಕೆ ತಮ್ಮದೇ ಆದ ಕಾರಣಗಳನ್ನು ನೀಡುತ್ತಾರೆ, ಇನ್ನೂ ಒಂದು ಗಮನಿಸಬೇಕಾದ ಸಂಗತಿ ಎಂದರೆ, ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಕನಿಷ್ಟ 12 ಸಾವಿರ ಮತ ಹೆಚ್ಚಿಗೆ ಸಿಗುತ್ತದೆ ಎನ್ನುವ ವಿಶ್ವಾಸವನ್ನು ಅಲ್ಲಿನ ಸ್ಥಳೀಯ ಕಾಂಗ್ರೆಸ್ಸಿಗರು ಸಚಿವೆ ಹೆಬ್ಬಾಳಕರಗೆ ನೀಡಿದ್ದಾರೆ, ಅದನ್ನು ಹೊರತುಪಡಿಸಿ ಗೋಕಾಕ ಮತ್ತು ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಲೀಡ್ ಕಟ್ ಮಾಡಬಹುದು ಎನ್ನುವ ವಿಶ್ವಾಸದಲ್ಲಿದ್ದಾರೆ.


ಆದರೆ ವಾಸ್ತವತೆ ಮತ್ತು ಹಿಂದಿನ ಇತಿಹಾಸವನ್ನು ಗಮನಿಸುತ್ತ ಹೋದರೆ ಬಿಜೆಪಿ ಹಿಡಿತದ ಮೂರು ಕ್ಷೇತ್ರಗಳು ತಮ್ಮ ಭದ್ರಕೋಟೆಯನ್ನು ಬಿಟ್ಟುಕೊಟ್ಟಿಲ್ಲ ಎನ್ನುವುದು ಸ್ಪಷ್ಟ.
ಪ್ರತಿ ಬಾರಿ ಚುನಾವಣೆ ಬಂದಾಗ ಈ ಮೂರು ಕ್ಷೇತ್ರಗಳಲ್ಲಿ ಕೆಲವರು ಬಿಜೆಪಿ ವಿರುದ್ಧ ಅಂದರೆ ಗೋಕಾಕ ಅರಭಾವಿಯಲ್ಲಿ ಜಾರಕಿಹೊಳಿ ಮತ್ತು ಬೆಳಗಾವಿ ದಕ್ಷಿಣದಲ್ಲಿ ಶಾಸಕ ಅಭಯ ಪಾಟೀಲರ ವಿರುದ್ಧದ ಅಲೆಯನ್ನು ಸೃಷ್ಟಿಸುವ ಕೆಲಸ ಮಾಡುತ್ತಾರೆ, ಆದರೆ ಫಲಿತಾಂಶ ಬಂದಾಗ ಆ ವಿರೋಧ ಅಲೆ ಕೆಲಸ ಮಾಡಿಲ್ಲ ಎನ್ನುವುದು ಗೊತ್ತಾಗುತ್ತದೆ,
ಈಗ ಲೋಕಸಭೆ ಚುನಾವಣೆಯಲ್ಲಿ ಕೂಡ ಅದೇ ರೀತಿ ಆಗಬಹುದು ಎನ್ನುವ ಮಾತುಗಳಿವೆ, ಗುಪ್ತಚರ ಇಲಾಖೆಯ ವರದಿ ಪ್ರಕಾರ ಈ ಮೂರು ಕ್ಷೇತ್ರಗಳಲ್ಲಿಯೇ ಬಿಜೆಪಿ ಹೆಚ್ಚಿನ ಲೀಡ್ಗಳಿಸಬಹುದು ಎನ್ನುವ ಮಾತುಗಳಿವೆ
.


ಇದನ್ನು ಹೊರತುಪಡಿಸಿದರೆ ಬೈಲಹೊಂಗಲ ಕ್ಷೇತ್ರದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಸಿರಿಯಸ್ ಆಗಿ ಪಕ್ಷದ ಪರ ಕೆಲಸ ಮಾಡಿದ್ದಾರೆ ಎನ್ನುವ ಮಾತಿದೆ, ಆದರೆ ಮತ್ತೊಂದು ಕಡೆಗೆ ಅವರಿಗೆ ಹೆಚ್ಚಿನ ಜವಾಬ್ದಾರಿ ಕೊಡಲಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ, ಮತ್ತೊಂದು ಸಂಗತಿ ಎಂದರೆ ಇತ್ತೀಚೆಗೆ ಬಿಜೆಪಿ ಸೇರಿದ ಅಲ್ಲಿನ ಮಾಜಿ ಶಾಸಕರು ಪರೋಕ್ಷವಾಗಿ ಹಿಂಬದಿಯಿಂದ ಕಾಂಗ್ರೆಸ್ ಕೈಹಿಡಿದರು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಅದರಲ್ಲಿ ಸ್ಪಷ್ಟತೆ ಇಲ್ಲ. ಇಲ್ಲಿ ಕೆಲ ಕಾಂಗ್ರೆಸ್ಸಿಗರನ್ನು ಪ್ರಚಾರಕ್ಕೆ ಕರೆದಿಲ್ಲ ಎನ್ನುವ ಅಸಮಾಧಾನದ ಮಾತುಗಳಿವೆ. ಆದನ್ನು ಹೊರತುಪಡಿಸಿ ಕಾಂಗ್ರೆಸ್ಗೆ ಸರಿಸಮನಾಗಿ ಬಿಜೆಪಿ ಮತಗಳಿಸಬಹುದು ಎನ್ನುವ ಮಾತಿದೆ,


ಬೆಳಗಾವಿ ಗ್ರಾಮೀಣ ಕ್ಷೇತ್ರ ಅಂದರೆ ಸಚಿವೆ ಹೆಬ್ಬಾಳಕರ ಅವರ ತವರು ಕ್ಷೇತ್ರ, ಅದು ಕಾಂಗ್ರೆಸ್ನ ಭದ್ರ ಕೋಟೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿರೇಬಾಗೇವಾಡಿಯಲ್ಲಿ ಕಾಂಗ್ರೆಸ್ಸಿಗರು ಜಾತ್ರೆಯ ನೆಪ ಮಾಡಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೆಚ್ಚಿಗೆ ಹೋಗಿಲ್ಲ ಎನ್ನುವ ಮಾತುಗಳಿವೆ, ಇಲ್ಲಿ ಜಾತ್ರೆಯ ನೆಪವೋ ಅಥವಾ ಇನ್ಯಾವುದೊ ಎನ್ನುವುದು ಸ್ಪಷ್ಟವಾಗಿಲ್ಲ.ಮೂಲಗಳ ಪ್ರಕಾರ ಇಲ್ಲಿ ಕಾಂಗ್ರೆಸ್ ಅಲೆ ಇದೆ ಎನ್ನಲಾಗುತ್ತಿದೆ.

ಸವದತ್ತಿಯಲ್ಲಿ ಮಾತ್ರ ಎಲ್ಲರೂ ಹೇಳುವಂತೆ ಕಾಂಗ್ರೆಸ್ಗೆ ಕನಿಷ್ಟ 20 ಸಾವಿರ ಮತಗಳ ಮುನ್ನಡೆ ಸಿಗಬಹುದು ಎನ್ನಲಾಗುತ್ತಿದೆ, ಏಕೆಂದರೆ ಸಚಿವೆಯ ಒಡೆತನದ ಹರ್ಷ ಶುಗರ್ಸ ಇದೆ, ಹೀಗಾಗಿ ಅಲ್ಲಿನ ಜನ ಕೈ ಹಿಡಿದಿದ್ದಾರೆ, ರಾಮದುರ್ಗದಲ್ಲಿ ಎರಡೂ ಪಕ್ಷಗಳಿಗೆ ಟಪ್ ಫೈಟ ನಡೆದಿದೆ, ಬಿಜೆಪಿಯಲ್ಲಿ ಕೆಲವರು ಮುಂದಿನ ಟಿಕೆಟ್ ಲೆಕ್ಕ ನೋಡಿಕೊಂಡು ಪ್ರಚಾರ ಮಾಡಿದರೆ, ಕಾಂಗ್ರೆಸ್ನ ಅಶೋಕ ಪಟ್ಟಣ ತಮ್ಮ ಭದ್ರಕೋಟೆ ಮತ್ತಷ್ಟು ಗಟ್ಟಿಮಾಡಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ, ಹೀಗಾಗಿ ಇಲ್ಲಿ ಹೀಗೇ ಆಗುತ್ತದೆ ಎಂದು ಹೇಳುವುದು ಕಷ್ಟ.

ಚಿಕ್ಕೋಡಿಯಲ್ಲಿ ಕೈಕೊಟ್ಟ ತ್ರಿಕೆ..!


ಬೆಳಗಾವಿ ಲೋಕಸಮರದ್ದು ಒಂದು ಕತೆಯಾದರೆ, ಚಿಕ್ಕೋಡಿಯಲ್ಲಿ ಬೇರೆ ರೀತಿಯ ರಾಜಕಾರಣ ನಡೆದಿದೆ,
ಚಿಕ್ಕೊಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಶಾಸಕರು ಕಾಂಗ್ರೆಸ್ ಕೈ ಹಿಡಿದಿದ್ದಾರೆ ಎನ್ನುವ ಮಾತಿದೆ. ಅಥಣಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಬಿಗಿ ಹಿಡಿತ ಮುಂದುವರೆಸಿದ್ದರೆ, ಅಲ್ಲಿನ ಮಾಜಿ ಶಾಸಕರೂ ಕೂಡ ತೆರೆಮರೆಯಲ್ಲಿ ಕಾಂಗ್ರೆಸ್ಗೆ ಜೈ ಎಂದಿದ್ದಾರೆ ಎನ್ನುವ ಮಾತಿದೆ,
ಅದನ್ನು ಹೊರತುಪಡಿಸಿ ಕಳೆದ ಬಾರಿ ಎನ್ಸಿಪಿಯಿಂದ ಸ್ಪಧರ್ಿಸಿದ್ದ ಉತ್ತಮ ಪಾಟೀಲ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ, ಆದರೆ ಇವರ ಲಾಭ ಎಷ್ಟರ ಮಟ್ಟಿಗೆ ಅಯಿತು ಎನ್ನುವುದು ಗೊತ್ತಾಗಬೇಕಿದೆ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ ಅವರು ಕೈ ಬಲವಾಗಿ ಹಿಡಿದಿದ್ದರು ಎನ್ನುವ ಮಾತಿದೆ,
ಗಮನಿಸಬೇಕಾದ ಸಂಗತಿ ಎಂದರೆ, ಚಿಕ್ಕೊಡಿ ಭಾಗದಲ್ಲಿ ಬಲವಾದ ಹಿಡಿತಹೊಂದಿದವರು ಅಲ್ಲಿ ಬಿಜೆಪಿ ಅಭ್ಯಥರ್ಿ ಪರ ಪ್ರಚಾರಕ್ಕೆ ಹೋಗಲಿಲ್ಲ, ಬದಲಾಗಿ ಬೆಳಗಾವಿಯನ್ನೇ ಗಟ್ಟಿಯಾಗಿ ಹಿಡಿದುಕೊಂಡರು, ಇದು ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಹೊಡೆತ ಕೊಟ್ಟರೂ ಕೊಡಬಹುದು, ಆದರೆ ಜೊಲ್ಲೆ ದಂಪತಿಗಳು ಇದೆಲ್ಲವನ್ನು ಯಾವ ರೀತಿ ಎದುರಿಸಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಅದೆನೇ ಇರಲಿ, ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಯಾರು ಯಾರಿಗೆ ಕೈ ಕೊಟ್ಟರು ಎನ್ನುವ ಚಚರ್ೆ ಮಾತ್ರ ನಿಂತಿಲ್ಲ ಎನ್ನುವುದು ಸತ್ಯ.

Leave a Reply

Your email address will not be published. Required fields are marked *

error: Content is protected !!