Headlines

ಸಂಘಟನೆ ಬಲಿಷ್ಠವಾದರೆ ನಿಂದಕರು ದೂರ- ಹಾರನಹಳ್ಳಿ

ಬೆಳಗಾವಿ. ತಲೆತಲಾಂತರದಿಂದ ಬ್ರಾಹ್ಮಣ ರನ್ನು ನಿಂದಿಸುವದನ್ನೇ ಕಾಯಕ ಮಾಡಿಕೊಂಡಿರುವವರನ್ನು ದೂರ ಮಾಡಬೇಕಾದರೆ ನಾವು ಸಂಘಟನೆ‌ ದೃಷ್ಟಿಯಿಂದ ಇನ್ನಷ್ಡು ಪ್ರಭಲವಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ‌ ಹಾರನಹಳ್ಳಿ ಹೇಳಿದರು.

ಬೆಳಗಾವಿ ಜಿಲ್ಲಾ ಭ್ರಾಹ್ಮಣ ಸಮಾಜ ಟ್ರಸ್ಟ್‌ ಆಯೋಜನೆ ಮಾಡಿದ ಸಭೆಯಲ್ಲಿ‌ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕೆಲವೊಂದು ಯುನಿವರ್ಸಿಟಿಗಳಲ್ಲಿ ಬ್ರಾಹ್ಮಣರ ವಿರೋದವಾಗಿ ಸಂಶೋಧನೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಹೀಗಾಗಿ ನಾವು ಬ್ರಾಹ್ಮಣರು ಎಂದುಬಹೇಳಿಕೊಳ್ಳಲು ಮುಜುಗುರ ಪಡುವ ಸನ್ನಿವೇಶ ಸೃಷ್ಡಿ ಆಗುತ್ತಿದೆ. ಅದಕ್ಕೆ ನಾವೆಲ್ಲರೂ ಸಂಘಟಿತರಾದರೆ ಮಾತ್ರ ಇದೆಲ್ಲವನ್ನು ಸಮರ್ಥವಾಗಿ‌‌ ಎದುರಿಸಿ ಮುನ್ನಡೆಯಬಹುದು ಎಂದು ಹಾರನಹಳ್ಳಿ ಹೇಳಿದರು.

,ಬ್ರಾಹ್ಮಣ ರ ವಿರುದ್ಧ ಮಾತನಾಡುವ ಪದ್ಧತಿಯನ್ನು ಅಳಿಸಿ ಹಾಕಬೇಕಾದರೆ ನಾವು ಇನ್ನಷ್ಟು ಸಂಘಟನಾತ್ಮಕವಾಗಬೇಕು ಎಂದು ಹೇಳಿದರು

ಬ್ರಾಹ್ಮಣರನ್ನು ಎಷ್ಟೇ ನಿಂದಿಸಿದರೂ ಅವರಲ್ಲಿ ಪ್ರತಿಭಟನಾ ಶಕ್ತಿ ಇಲ್ಲ ಎನ್ನುವ ಮನೋಭವನೆ ಬಂದಿದೆ. ಅದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಸಮಾಜ ಸಂಘಟನೆ ಜೊತೆಗೆ ರಾಜಕೀಯವಾಗಿಯೂ ಪ್ರಭಲ ಎನಿಸಿಕೊಳ್ಳಬೇಕಾಗಿದೆ ಎಂದರು.

ಬ್ರಾಹ್ಮಣರ ಮತಗಳು ನಮ್ಮನ್ನು ಬಿಟ್ಟು ಬೇರೆಡೆ ಹೋಗಲ್ಲ ಕಲ್ಪನೆಯಲ್ಲಿ ಕೆಲ ಪಕ್ಷದವರು ಇದ್ದಾರೆ. ಆದರೆ ಬ್ರಾಹ್ಮಣರು ಸನಾತನ ಧರ್ಮದ ರಕ್ಷಣೆ ಮಾಡುವವರನ್ನು ಬೆಂಬಲಿಸುತ್ತ ಬಂದಿದೆ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರನ್ನು ಶಾಸಕ ಅಭಯ ಪಾಟೀಲ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಪರ ಯಾವಾಗಲೂ ಇರುವುದಾಗಿ ಶಾಸಕರು ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!