ಬೆಳಗಾವಿ
ಕಿಣಯೇ ಗ್ರಾಮದ ಪಾಗಲ್ ಪ್ರೇಮಿ ತಿಪ್ಪಣ್ಣ ಬಂಧನ.
ಬೆಳಗಾವಿ ತಾಲ್ಲೂಕಿನ ಕಿಣಯೆ ಗ್ರಾಮದಲ್ಲಿ ಪಾಗಲ್ ಪ್ರೇಮಿ ಹುಚ್ಚಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹೇಳಿದರು
22 ಮೇ ರಂದು ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಒಂದು ಕೇಸ್ ದಾಖಲಾಗುತ್ತು. ಐಪಿಸಿ ಸೆಕ್ಷನ್ 19/24 ರಡಿಯಲ್ಲಿ 354 E, 455,427, 505,506 ರಡಿಯಲ್ಲಿ ಪ್ರಕರಣ ದಾಖಲಾಗಿದೆ
ಹುಡುಗಿ ಮನೆಯವರು ಹುಡುಗನ ಮೇಲೆ ದೂರು ಕೊಟ್ಟಿದ್ದಾರೆ.
ಹುಡುಗ ನಮಗೆ ತೊಂದರೆ ಕೊಡುತ್ತಿದ್ದಾನೆ ಎಂದು ಹುಡುಗಿ ಪ್ರಕರಣ ದಾಖಲಿಸಿದ್ದಾರೆ.
ಹುಡುಗಿಗೆ ಪ್ರತಿ ದಿನ ಬಂದು ತೊಂದರೆ ಕೊಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಹುಡುಗ ಹುಡುಗಿ ಮನೆ ಹತ್ರ ಬಂದು ಮತ್ತಷ್ಟು ಸಮಸ್ಯೆ ಮಾಡಿದ್ದಾನೆ. ನೊಂದವರು ನನ್ನ ಬಳಿ ಬಂದಿದ್ದರು ತಕ್ಷಣ ಪೋಲಿಸ್ ಠಾಣೆಗೆ ಕಳುಹಿಸಿದ್ದೇನೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾದ ಹಿನ್ನಲೆ ಆರೋಪಿಯನ್ನ ಬಂದಿಸಿದ್ದೇವೆ ಎಂದರು.
ಹುಡುಗನನ್ನ ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದೇವೆ ಎಂದ ಪೊಲೀಸ್ ಆಯುಕ್ತ.
ಕಿಣಯೇ ಗ್ರಾಮದಲ್ಲಿನ ಯುವತಿ ಮನೆಗೆ ಸೂಕ್ತ ರಕ್ಷಣೆ ನೀಡಿದ್ದೇವೆ.
ಹುಡುಗಿ ಕಾಲೇಜಿಗೆ ಹೋಗದೆ ಇರುವ ವಿಚಾರ
ಕಾಲೇಜಿಗೆ ರಜೆ ಇರುವ ಹಿನ್ನೆಲೆ ಹುಡುಗಿ ಹೋಗುತ್ತಿಲ್ಲಾ ಎಂದು ಹೇಳಿದ್ದಾಳೆ.
ನೀವು ಯಾವ ಕಾಲೇಜಿಗೆ ಹೋಗತ್ತೀರಿ ನಿಮಗೆ ಭದ್ರತೆ ಕೊಡುತ್ತೇವೆ ಎಂದು ಅವರಿಗೆ ಹೇಳಿದ್ದೇವೆ.
ಈಗ ಆರೋಪಿ ಜೈಲಿನಲ್ಲಿ ಇದ್ದಾನೆ ಹುಡುಗಿ ಪೋಷಕರ ಜೊತೆ ಮಾತನಾಡಿದ್ದೇವೆ.
ಮತ್ತೆ ಏನಾದರೂ ನಮ್ಮ ಇಲಾಖೆಯಿಂದ ಸಹಾಯ ಮಾಡಲು ನಾವು ಸಿದ್ದರಿದ್ದೇವೆ ಎಂದ ಪೋಲಿಸ್ ಆಯುಕ್ತರು ಹೇಳಿದರು.