Headlines

ಪೊಲೀಸ್ ಠಾಣೆಗೆ 3 ಸಾವಿರ, ಬೀಮ್ಸ್ ಗೆ 1500 ರೂ,

ಡ್ಯೂಟಿ ನೇಮಕಕ್ಕೆ ಕಾಂಚಾಣ ಆರೋಪ.

ಬೆಳಗಾವಿ.


ಇಲ್ಲೊಂದು ಥರಾ ಭಾಜಿ ಮಾಕರ್ೆಟ್ ವ್ಯವಹಾರ ಇದ್ದಂತೆ. ಪ್ರತಿಯೊಂದಕ್ಕೂ ರೇಟ್ ಕಾರ್ಡ ಫಿಕ್ಸ್ ಆಗಿದೆ ಅಂತೆ. ಒಟ್ಟಿನಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸುರಳಿತ. ಇಲ್ಲದಿದ್ದರೆ ಕಿರಿಕಿರಿ…
ಇಷ್ಟೆಲ್ಲ ಹೇಳಿದ ಮೇಲೆ ನಿಮಗೆ ಯಾವುದು ಈ ಇಲಾಖೆ ಎನ್ನುವ ಚಿಂತೆ ಶುರುವಾಗಿರಬಹುದು, ಕೆಲವರು ಇದು ಪೊಲೀಸ್, ಕಂದಾಯ ಇಲಾಖೆ ಇರಬಹುದು ಎಂದು ಅಂದುಕೊಳ್ಳಬಹುದು.
ಆದರೆ ಅದ್ಯಾವುದು ಅಲ್ಲ. ಅದು ಬೆಳಗಾವಿ ಗೃಹ ರಕ್ಷಕ ದಳ.!
ಪೊಲೀಸ ಪೇದೆಗಳಿಗೆ ಸರಿಸಮಾನವಾಗಿ ಕೆಲಸ ಮಾಡುವ ಈ ಗೃಹ ರಕ್ಷಕ ದಳದಲ್ಲಿ ಪೊಲೀಸ್ ಠಾಣೆಗೆ ಡ್ಯೂಟಿ ಬೇಕಿದ್ದಲ್ಲಿ ತಿಂಗಳಿಗೆ 4 ರಿಂದ 5 ಸಾವಿರ ಮತ್ತು ಬೀಮ್ಸ್ ಗೆ ಡ್ಯೂಟಿ ಬೇಕಿದ್ದಲ್ಲಿ ತಿಂಗಳಿಗೆ 1500 ರೂ ಕೊಡಬೇಕಾದ ಪರಿಸ್ಥಿತಿ ಬಂದಿದೆ ಎನ್ನುವುದು ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳದವರ ಆರೋಪ.


ಇದರ ಬಗ್ಗೆ ಖಡಕ್ ಆಗಿ ವಿಚಾರಣೆ ನಡೆದರೆ ಮಾತ್ರ ಸತ್ಯಾಂಶ ಬಯಲಿಗೆ ಬರಲು ಸಾಧ್ಯ..!
ಇಲ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಬೇಕೆಂದರೆ, ಉಳಿದ ಇಲಾಖೆಗಳಿಗಿಂತ ಇಲ್ಲಿ ಅಶಿಸ್ತು ಮನೆ ಮಾಡಿದೆ. ಇಲ್ಲಿ ಗುಂಪುಗಾರಿಕೆ ಹೇಳತೀರದು. ಅನಾಮದೇಯ ಪತ್ರದ ಹಾವಳಿ ಲೆಕ್ಕಕ್ಕಿಲ್ಲ.

ಇಷ್ಟೆಲ್ಲ ಇದ್ದರೂ ಕೂಡ ಗೃಹ ರಕ್ಷಕ ದಳದ ಹಿರಿಯ ಅಧಿಕಾರಿಗಳು ಇದನ್ನು ಶಮನ ಮಾಡಲು ಪ್ರಯತ್ನಿಸಿಲ್ಲ ಎನ್ನುವು ಅಸಮಾಧಾನ ಇದ್ದೇ ಇದೆ.

ನ್ಯಾಯ ಕೊಡಿಸಿ..!
ಪೊಲೀಸ್ ಇಲಾಖೆಯ ಜೊತೆ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದ್ದ ಗೃಹ ರಕ್ಷದ ದಳದವರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಕಣ್ಣೀರಿಡುತ್ತಿದ್ದಾರೆ.

ಗೃಹ ರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆ ಜ್ಯೋತಿ ಚಿಟಗಿ ಅವರು ನ್ಯಾಯ ಕೋರಿ ಮಾಳಮಾರುತಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದನ್ನು ಗಮನಿಸಿದರೆ ಅಲ್ಲಿನ ಪರಿಸ್ಥಿತಿ ಯಾವರೀತಿ ಇರಬಹುದು ಎನ್ನುವ ಊಹೆ ತಮಗೆ ಬಿಟ್ಟಿದ್ದು,

ಯಾರ ವಿರುದ್ಧ ದೂರು..! ,
ಗಮನಿಸಬೇಕಾದ ಸಂಗತಿ ಎಂದರೆ, ನೋಂದ ಮಹಿಳೆ ಬೆಳಗಾವಿ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡಂಟ್ ಪ್ರಭಾರ ಹುದ್ದೆ ವಹಿಸಿಕೊಂಡಿರುವ ಸುನೀಲ್ ಸರೂರ ಸೇರಿದಂತೆ ಇನ್ನಿತರರ ವಿರುದ್ಧ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಇಲ್ಲಿ ಕಮಾಂಡಂಟ್ ಅಷ್ಟೇ ಅಲ್ಲ ಇನ್ನೂ ಕೆಲ ಸಿಬ್ಬಂದಿಗಳ ಹೆಸರು ಉಲ್ಲೇಖಿಸಿ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ.?
ಕಳೆದ ಹಲವು ವರ್ಷಗಳಿಂದ ನಾನುಗೃಹ ರಕ್ಷಕ ದಳದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇನೆ, ತುತರ್ು ಸಂದರ್ಭಗಳಲ್ಲಿ ನನ್ನ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬಿಟ್ಟು ಹಬ್ಬ ಹುಣ್ಣಿಮೆಗಳನ್ನು ಲೆಕ್ಕಿಸದೇ ಹಗಲಿರುಳು ಸದಾ ಗೃಹರಕ್ಷಕದಳ ಇಲಾಖೆಗೊಸ್ಕರ ದುಡಿದಿರುತ್ತೇನೆ ಎಂದು ಜ್ಯೋತಿ ದೂರಿನಲ್ಲಿ ವಿವರಿಸಿದ್ದಾರೆ,.

ಆದರೆ ಇಲ್ಲಿ ನನಗೆ ಧಾರವಾಡ ಜಿಲ್ಲಾ ಗೃಹರಕ್ಷಕದಳದ ಕಮಾಂಡಂಟ್ ಸುನಿಲ ಸರೂರ ಇವರು ಬೆಳಗಾವಿ ಜಿಲ್ಲಾ ಗೃಹರಕ್ಷಕದಳದ ಕಮಾಂಡಂಟ್ ಪ್ರಬಾರ ವಹಿಸಿಕೊಂಡ ದಿನದಿಂದ ಕಿರುಕುಳ ಪ್ರಾರಂಭವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಏನಿದು ವಿವಾದ?
ಬೆಳಗಾವಿ ಜಿಲ್ಲೆಯ ಹಿಂದಿನ ಕಮಾಂಡಂಟ್ ಡಾ. ಕಿರಣ್ ರುದ್ರಾ ನಾಯ್ಕ ರವರು ಕಚೇರಿಯ ಸಹಾಯಕ ಬೋಧಕ ರಾಕೇಶ ಗೋನಾಳರವರ ಪರಿಶೀಲನೆ ಹಾಗೂ ಬೆಳಗಾವಿ ಘಟಕದ ಘಟಕಾಧಿಕಾರಿಗಳ ಶಿಪಾರಸ್ಸಿನ ಮೇರೆಗೆ ಸರಸ್ವತಿ ಖಾರಗೆ ಎಂಬುವವಳಿಗೆ ಒಂದು ತಿಂಗಳ ನೋಟೀಸ್ ನೀಡಿ ಗೃಹ ರಕ್ಷಕದಳ ಇಲಾಖೆಯಿಂದ ಸಮಾಲೋಪನೆ ಮಾಡಿರುತ್ತಾರೆ.
ಇಲ್ಲಿ ಸರಸ್ವತಿ ಖಾರಗೆ ಅಂಗವಿಕಲಳಿರುತ್ತಾಳೆ ಹಾಗೂ ಇವಳ ಹತ್ತಿರ “ಸಿ ಫಾರ್ಮ” (ಅಪಾಯಿಂಟೆಂಟ್ ಲೆಟರ್) ಕೂಡ ಇರುವುದಿಲ್ಲ. ಆದರೂ ಕೂಡ ದಾರವಾಡ ಜಿಲ್ಲಾ ಕಮಾಂಡಂಟ್ ಸುನೀಲ ಸರೂರ ಇವರು ಸರಸ್ವತಿ ಖಾರಗೆ ಇವಳನ್ನು ಬೆಳಗಾವಿ ಜಿಲ್ಲಾ ಗೃಹ ರಕ್ಷಕದಳ ಕಚೇರಿಯಲ್ಲಿ ಕಟ್ಟಡ ಪಹರೆ ಕರ್ತವ್ಯಕ್ಕೆ ನಿಯೋಜಿಸಿಕೊಡಿರುತ್ತಾರೆ ಎಂದು ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ, ಇದಕ್ಕೆ ಕಚೇರಿಯ ಕೆಲ ಸಿಬ್ಬಂದಿಗಳ ಜೊತೆಗೆ ಗದಗ ಜಿಲ್ಲಾ ಗೃಹರಕ್ಷಕದಳ ಕಚೇರಿಯ ಟಿ.ಎಲ್ ರಾಜಕುಮಾರ ಇವರೆಲ್ಲರ ಬೆಂಬಲ ಇರುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಯಾವುದೇ ಕಾರಣ ಕೂಡೆ ಕೊಡದೇ ಕಳೆದ ಜನೇವರಿ 06 ರಂದು ಕಮಾಂಡಂಟ್ ಸುನೀಲ ಸರೂರ ನನ್ನನ್ನು ಕಚೇರಿ ಕಟ್ಟಡ ಪಹರೆ ಕರ್ತವ್ಯದಿಂದ ಏಕಾಏಕಿಯಾಗಿ ತೆಗದು ಅವಮಾನ ಮಾಡಿದ್ದಾರೆಂದು ಜ್ಯೋತಿ ಆರೋಪಿಸಿದ್ದಾರೆ, ಇಲ್ಲಿ ಮುಖ್ಯವಾಗಿ ಅಂಗವಿಕಲರಿಗೆ ಸೇವೆ ಮಾಡಲು ಅವಕಾಶ ಇರುವುದಿಲ್ಲ ಆದರೂ ಕೂಡ ಒಬ್ಬ ಅಂಗವಿಕಲಳನ್ನು ಸಮಾಲೋಪನೆಯಾದ ಗೃಹರಕ್ಷಕಿಯನ್ನು ಕಚೇರಿ ಕರ್ತವ್ಯಕ್ಕೆ ನಿಯೋಜಿಸಿಕೊಂಡಿದ್ದಾರೆಂದು ದೂರಿದ್ದಾರೆ.

ನಕಲಿ ಹೆಸರು?
ಜನೇವರಿ 2024ರ ತಿಂಗಳಿಂದ 2024ರ ವರೆಗೆ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ 04 ಜನ ಗೃಹರಕ್ಷಕರ ನಿಯೋಜನೆ ಮಂಜೂರಾತಿ ಆದೇಶವಿದ್ದರೂ ಸಹ ಕೇವಲ 03 ಜನ ಗೃಹರಕ್ಷಕರನ್ನು ಕಚೇರಿ ಕರ್ತವ್ಯಕ್ಕೆ ನಿಯೋಜಿಸಿಕೊಂಡಿದ್ದಾರೆ, ಉಳಿದವರ ಸುಳ್ಳು ಗೃಹರಕ್ಷಕರ ಹೆಸರು ಹಾಕಿ ಇವರೆಲ್ಲರೂ ಸೇರಿ ದುಡ್ಡು ತಿಂದು ಸಕರ್ಾರಕ್ಕೆಮೋಸ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಕಚೇರಿ ಕರ್ತವ್ಯದಲ್ಲಿ ಒಂದು ಗೃಹರಕ್ಷಕರ ಹುದ್ದೆ ಖಾಲಿ ಇದ್ದರೂ ಕೂಡ ಉದ್ದೇಶಪೂರ್ವಕವಾಗಿ ನನ್ನನ್ನು ಅವಮಾನಿಸಿ ಕರ್ತವ್ಯದಿಂದ ತೆಗೆದಿರುತ್ತಾರೆ. ಇದರಿಂದ ನನಗೆ ಮಾನಸಿಕವಾಗಿ, ಆಥರ್ಿಕವಾಗಿ ಹಾಗೂ ದೈಹಿಕವಾಗಿ ತುಂಬಾ ತೊಂದರೆ ಉಂಟಾಗಿರುತ್ತದೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!