
ದುಡ್ಡು+ಅಧಿಕಾರ= ಅಹಂಕಾರ
ಬೆಳಗಾವಿ.ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎಂಬುದು ಹಿರಿಯರ ಮಾತು.ಇವತ್ತಿನ ದಿನಮಾನಕ್ಕೆ ಅದು ಅಕ್ಷರಶಃ ಅನ್ವಯಿಸುತ್ತದೆ.ಹೇಗಂತೀರಾ ಹೇಳ್ತೀವಿ ನೋಡಿ.ಅಂದುಕೊಳ್ಳದೆ ಯಶಸ್ಸು, ಹಣ, ಅಧಿಕಾರ ಬಂದುಬಿಟ್ಟರೆ ಸಾಕು. ಅದೆಂತಹವರೇ ಇರಲಿ ಗೊತ್ತೇಇಲ್ಲದಂತೆ ಅಹಂಕಾರ, ಸೊಕ್ಕು ಕೂಡಾ ತನ್ನಂತಾನೇ ಬಂದೇ ಬಿಡುತ್ತದೆ. ಸಾಲದಕ್ಕೆ ಇಗೋ ಇಜಎಂ ದುರಹಂಕಾರವೂ ಸೇರಿಕೊಂಡರೆ ವಿನಾಶಕ್ಕೆ ಅದೇ ನಾಂದಿಯಾಗುತ್ತದೆ. ಇದನ್ನೇ ಮೇಲಿನಂತೆ ಒಂದೇ ಮಾತಿನಲ್ಲಿ ಹಿರಿಯರು ಹೇಳಿದ್ದಾರೆ ಅಷ್ಟೆ!ಸಧ್ಯ ಭಾರೀ ಚರ್ಚೆ ಯಲ್ಲಿರುವ ಚಿತ್ರನಟ ದರ್ಶನ ಬಂಧನ ಪ್ರಕರಣವೂ ಇಂತಹದ್ದೇ ಅಹಂಕಾರ, ಸೊಕ್ಕಿನ ಪರಿಣಾಮ ಎಂದರೆ ತಪ್ಪಾಗಲ್ಲ….