Headlines

ಯಾರ ಕೇಳಿ ರಸ್ತೆ ಅಗೆಯಲು ಅನುಮತಿ ಕೊಟ್ರಿ..?

ಪಾಲಿಕೆ ಕೌನ್ಸಿಲ್ ದಲ್ಲೇ ಚರ್ಚೆನೇ ಆಗಿಲ್ಲ.

ಬರೀ 25 ಸಾವಿರ ಶುಲ್ಕ ವಿಧಿಸಿ ಬೆಳಗಾವಿ ತುಂಬ‌ ರಸ್ತೆ ಅಗೆಯಲು ಕೊಟ್ಟಿದ್ದು ಸರಿನಾ?.

ಬೆಳಗಾವಿಯಲ್ಲಿ‌ನಡೆದ ಸಭೆ

ವಿಚಾರ ಮಾಡ್ತೆನಿ ಅಂದ ಪಾಲಿಕೆ ಆಯುಕ್ತರು.

ಸ್ಮಾರ್ಟ ಸಿಟಿ ಮತ್ತು ಪಾಲಿಕೆ ನಡುವೆ ಜಟಾಪಟಿ
ಬೆಳಗಾವಿ.
ಮಹಾನಗರ ಪಾಲಿಕೆಯ ಪರಿಷತ್ನ ಪೂರ್ವಾನುಮತಿ ಇಲ್ಲದೇ ರಸ್ತೆ ಅಗೆಯಲು ಕೇವಲ 25 ಸಾವಿರ ರೂ, ಶುಲ್ಕವಿಧಿಸಿ ಅನುಮತಿ ನೀಡಿದ್ದರ ಬಗ್ಗೆ ತನಿಖೆ ನಡೆಸಲು ಇಂದಿಲ್ಲಿ ನಡದ ಸಭೆಯಲ್ಲಿ ತೀರ್ಮಾನಿಸಲಾಯಿತು,
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು.
ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಮುಗಿದ ನಂತರ ಅಭಿವೃದ್ದಿ ಮತ್ತು ಮಳೆಗಾಲದಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಈ ಸಭೆಯನ್ನು ಕರೆಯಲಾಗಿತ್ತು.
ಖಾಸಗಿ ದೂರಸಂಪರ್ಕ ಸಂಸ್ಥೆಗೆ ಬೆಳಗಾವಿ ನಗರದ ರಸ್ತೆ ಅಗೆಯಲು ಕೇವಲ 25 ಸಾವಿರ ರೂಪಾಯಿ ಶುಲ್ಕ ವಿಧಿಸಿ ಅನುಮತಿ ನೀಡಿದ್ದರ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಧೋತ್ರೆ ಸಭೆಯಲ್ಲಿ ಪ್ರಸ್ತಾಪಿಸಿದಾಗ ಗಂಭೀರ ಚರ್ಚ ನಡೆಯಿತು.


ಪಾಲಿಕೆಯ ಯಾವೊಬ್ಬ ನಗರ ಸೇವಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇವಲ 25 ಸಾವಿರ ರೂ.ಗೆ ರಸ್ತೆ ಗೆಯಲು ಖಾಸಗಿ ಕಂಪನಿಗೆ ಅನುಮತಿ ನೀಡಲಾಗಿದ್ದರ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನೆ ಮಾಡಿದರು,
ಹೊಸದಾಗಿ ನಿಮರ್ಿಸಿದ ರಸ್ತೆಗಳನ್ನು ಆ ಕಂಪನಿಯವರು ಅಗೆದಿದ್ದಾರೆ. ಅಗೆದ ನಂತರವೂ ರಸ್ತೆಗಳನ್ನು ಸರಿಯಾಗಿ ದುರಸ್ತೆಇ ಮಾಡಿಲ್ಲ ಎಂದು ಆರೋಪಿಸಿದರು.


ಕುಡಿಯುವ ನೀರಿನ ಪೈಪ್ ಸಂಪರ್ಕಕ್ಕೆ ಸ್ವಲ್ಪ ರಸ್ತೆ ಅಗೆಯಲು 3 ಸಾವಿರ ರೂ. ಆಕರಣೆ ಮಾಡಲಾಗುತ್ತದೆ. ಹೀಗಿರುವಾಗ ನಗರದಾದ್ಯಂತ ಅಗೆಯಲು ಕೇವಲ 25 ಸಾವಿರ ರೂ ನಿಗದಿ ಮಾಡಿದ್ದು ಸರಿಯೇ?. ಅಷ್ಟೇ ಅಲ್ಲ ಹೊಸ ರಸ್ತೆಗಳನ್ನು ಅಗೆಯಲು ಅನುಮತಿ ನೀಡಿದ್ದು ಏಕೆ? ಎಂದು ರವಿ ಧೋತ್ರೆ ಪ್ರಶ್ನೆ ಮಾಡಿದರು.


ಈ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಬೇಕಾದ ಅಧಿಕಾರಿಗಳು ಉತ್ತರ ಹೇಳುವಲ್ಲಿ ತಡವರಿಸಿದರು. ಈ ಬಗ್ಗೆ ಸಕರ್ಾರಕ್ಕೆ ಪತ್ರ ಬರೆಯುವಂತೆ ಸೂಚನೆ ಕೂಡ ನೀಡಲಾಯಿತು,

ಪ್ರಕರಣದ ಗಂಭೀರತೆ ಅರಿತ ಪಾಲಿಕೆ ಆಯುಕ್ತ ಲೋಕೇಶ ಕುಮಾರ ಅವರು ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಕೊನೆಗೆವಿಚಾರಣೆ ವರದಿ ಬಂದ ನಂತರ ಸಾಮಾನ್ಯ ಸಭೆಯಲ್ಲಿ ಚಚರ್ಿಸಲು ತೀರ್ಮಾ ನಿಸಲಾಯಿತು.

ಉಪಮೇಯರ್ ಆನಂದ ಚವ್ಹಾಣ, ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ, ವೀಣಾ ವಿಜಾಪುರೆ, ಆಡಳಿತ ಗುಂಪಿನ ನಾಯಕ ಗಿರೀಶ್ ಧೋಂಗಡಿ, ವಿರೋಧ ಪಕ್ಷದ ನಾಯಕ ಮುಜಮ್ಮಿಲ್ ಡೋಣಿ, ಹನುಮಂತ ಕೊಂಗಾಲಿ, ರಾಜು ಭಾತಖಾಂಡೆ, ಸಂತೋಷ ಪೇಡ್ನೇಕರ, ಆಯುಕ್ತ ಲೋಕೇಶ್ ಸೇರಿದಂತೆ ಕೆಲ ನಗರಸೇವಕರು, ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!