Headlines

ಗೆಲ್ಲಿಸಿದವರನ್ನ ನೆನಪಿಸಿಕೊಂಡ ಶೆಟ್ಟರ್..!

ಮಾಜಿ ಮುಖ್ಯಮಂತ್ರಿ ಶೆಟ್ಡರ್ ದೊಡ್ಡ ಗುಣ.

ಹತ್ತಿದ್ದ ಏಣಿ ಒದೆಯಲಿಲ್ಲ. ಬಿಜೆಪಿಯ ಎಲ್ಲರನ್ನು ಒಗ್ಗೂಡಿಸಿದ ಶೆಟ್ಟರ್.

ಬೆಳಗಾವಿ ಅಭಿವೃದ್ಧಿ ಗೆ ನನ್ನ‌ ಆಧ್ಯತೆ.

ಸಚಿವೆ ಹೆಬ್ಬಾಳಕರ ಕ್ಷೇತ್ರದಲ್ಲೇ ಬಿಜೆಪಿಗೆ ಅತ್ಯಧಿಕ ಲೀಡ್

ಬೆಳಗಾವಿ. ಗಡಿನಾಡ ಬೆಳಗಾವಿ ಜನ ಹುಬ್ಬಳ್ಳಿ ಯ ಜಗದೀಶ ಶೆಟ್ಟರ್ ಅವರನ್ನು ಇಷ್ಟಪಡೋದಕ್ಕೆ ಹಲವು ಕಾರಣವಿದೆ.

ಶೆಟ್ಟರ್ ಹಾರ್ಮಫುಲ್ ಅಲ್ಲ. ಎಲ್ಲರೊಂದಿಗೂ ನಮಸ್ಕಾರ, ಚಮತ್ಕಾರ ಅನ್ನುತ್ತ ನಗು‌ನಗುತ್ತ ಮಾತನಾಡುತ್ತಾರೆ.

ಶೆಟ್ಡರ್ ಸುದ್ದಿಗೋಷ್ಟಿ..

ಎಲ್ಲಕ್ಕಿಂತ ಮುಖ್ಯವಾಗಿ ದೂರವಾಣಿ ಕರೆ ಮಾಡಿದರೆ ನೇರವಾಗಿ ಅವರೇ ರಿಸೀವ್ ಮಾಡ್ತಾರೆ. ಒಂದು ವೇಳೆ ರಿಸೀವ್ ಮಾಡದಿದ್ದರೆ ಮಿಸ್ ಕಾಲ್ ನೋಡಿ ನಂತರ ಮಾತನಾಡುವ ಪರಿಪಾಠವನ್ಬು ಬೆಳೆಸಿಕೊಂಡು ಬಂದಿದ್ದಾರೆ.

ಅಂದರೆ ಇಲ್ಲಿ ಅವರು ಎಲ್ಲವನ್ನೂ ಪಿಎಗಳ ಮೂಲಕ ನಿಭಾಯಿಸಲ್ಲ.

ಮುಖ್ಯಮಂತ್ರಿ ಯಂತಹ ದೊಡ್ಡ ಹುದ್ದೇಗೇರಿದ್ದ ಜಗದೀಶ ಶೆಟ್ಟರ್ ಬಗ್ಗೆ ಬೆಳಗಾವಿಗರಿಗೆ ಸಾಫ್ಟ್ ಕಾರ್ನರ್ ಇದೆ. ಅದೇ ಅವರ ಗೆಲುವಿಗೆ ಕಾರಣ

ಗೆಲ್ಲಿಸಿದವರನ್ನು ನೆನೆದ ಶೆಟ್ಟರ್.

.ಗಡಿನಾಡ ಬೆಳಗಾವಿ ರಾಜಕಾರಣದಲ್ಲಿ ಹತ್ತಿದ ಏಣಿಯನ್ನು ಒದೆಯುವವರೇ ಹೆಚ್ಚು. ಆದರೆ ಬಿಜೆಪಿ ಯಿಂದ ಗೆದ್ದ ಜಗದೀಶ ಶೆಟ್ಟರ್ ಅವರು ತಮ್ಮ ಗೆಲುವಿಗಾಗಿ ಶ್ರಮಿಸಿದ ಪ್ರತಿಯೊಬ್ಬರನ್ನು ನೆನಪಿಸಿಕೊಂಡರು.

ಗಮನಿಸಬೇಕಾದ ಸಂಗತಿ ಎಂದರೆ, ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಪಡೆದ ಲೀಡ್ ಮತಗಳನ್ನು ಹೇಳುವುದರ ಜೊತೆಗೆ ಗೆಲುವಿಗೆ ಸಹಕಾರ ನೀಡಿದವರ ಹೆಸರನ್ನು ಉಲ್ಲೇಖಿಸಿ ಕೃತಜ್ಞತೆ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಏನ್ ಹೇಳಿದ್ರು ಗೊತ್ತಾ?

ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಹಣ, ಅಧಿಕಾರದ ಬಲವನ್ನು ಮೀರಿ ಜನರು ಬಿಜೆಪಿ ಗೆಲ್ಲಿಸಿದ್ದಾರೆ. ಇದು ಬೆಳಗಾವಿ ಜನರ ಜಯ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಪಕ್ಷ, ಮೋದಿ ನಾಯಕತ್ವ ನೋಡಿ ನನಗೆ ಅಭೂತಪೂರ್ವ ಗೆಲುವು ತಂದುಕೊಟ್ಟ ಜನರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು,
ಹಿಂದೆ ನಾಲ್ಕು ಬಾರಿ ಸುರೇಶ ಅಂಗಡಿಯವರಿಗೆ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಬೆಂಬಲ ಸಿಕ್ಕಂತೆ ಈ‌ಬಾರಿ ನನಗೂ ಸಿಕ್ಕಿದೆ. ಜನರ ಪ್ರೀತಿ, ವಿಶ್ವಾಸ, ಗೌರವ ನಾನು ಮರೆಯಲ್ಲ. ಆ ಋಣ ಎಂದಿಗೂ ಮರೆಯಲು ಆಗೋದಿಲ್ಲ ಎಂದರು.

ಡಾ.ಪ್ರಭಾಕರ ‌ಕೋರೆ, ಮಹಾಂತೇಷ ಕವಟಗಿಮಠ, ರಾಜ್ಯಶಭಾ ಸದಸ್ಯ ಈರಣ್ಣ ಕಡಾಡಿ, ಎಂ.ಬಿ ಜಿರಲಿ. ಮುತಾಲಿಕ ದೇಸಾಯಿ ಮುಂತಾದವರು ಸಹಕಾರ ನೀಡಿದ್ದಾರೆ
ಎರಡು ಕ್ಷೇತ್ರಗಳಲ್ಲಿ ಹಿನ್ನಡೆ ಬಿಟ್ಟರೆ ಎಲ್ಲಾ ಕಡೆ ಮುನ್ನಡೆ ಆಗಿದೆ. ಅಭಯ್ ಪಾಟೀಲ ನೇತೃತ್ವದಲ್ಲಿ ದಕ್ಷಿಣ ಕ್ಷೇತ್ರದಲ್ಲಿ 73220 ಮತಗಳ ಅಂತರ ಲೀಡ್ ಸಿಕ್ಕಿದೆ. ಇದರಿಂದ ಹೆಚ್ಚಿನ ಬಲ ಸಿಕ್ಕಿದೆ. ಅಲ್ಲದೇ ಸ್ವತಃ ಸಚಿವರ ಗ್ರಾಮೀಣ ಕ್ಷೇತ್ರದಲ್ಲೆ 50529 ಮತಗಳ ಲೀಡ್ ಸಿಕ್ಕಿದೆ.

ಧನಂಜಯ ಜಾಧವ, ಮಾಜಿ ಶಾಸಕ‌ ಸಂಜಯ ಪಾಟೀಲ, ಶಿವಾಜಿ ಸುಂಠಕರ ಅವರು ಗ್ರಾಮೀಣದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ., ಗೋಕಾಕದ ರಮೇಶ ಜಾರಕಿಹೊಳಿ, ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ‌ ಅನಿಲ ಬೆನಕೆ , ಡಾ.ರವಿ ಪಾಟೀಲ, ಬೈಲಹೊಂಗಲದಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್, ವಿಶ್ವನಾಥ ಪಾಟೀಲ, ಜೆಡಿಎಸ್ ನ ಶಂಕರ ಮಾಡಲಗಿ ಮುಂತಾದವರು ಎಲ್ಲ ರೀತಿಯ ಸಹಕಾರ ಕೊಟ್ಟಿದ್ದರು ಎಂದು ಶೆಟ್ಟರ‌ ಹೇಳಿದರು.

Leave a Reply

Your email address will not be published. Required fields are marked *

error: Content is protected !!