ಡಿ ಗ್ಯಾಂಗ್ ಬೆಂಡೆತ್ತಿದವರಿಗೊಂದು ಸಲಾಮ್ ..!

ನನ್ನ ಬಿಟ್ಬಿಡಿ ಸ್ವಾಮೀ… ಎಂದರೂ ಮಾದ್ಯಮಗಳು ಬೆನ್ನು ಬಿಡಲಿಲ್ಲ!

ಮಾಧ್ಯಮ ಬೆನ್ನು ಬೀಳದಿದ್ದರೆ ಡಿ ಗ್ಯಾಂಗ್ ಆರಾಮವಾಗಿ ಹೊರಗೆ ಇರ್ತಿತ್ತು.

.ಮಾಧ್ಯಮ, ಪೊಲೀಸ್ ಅಣದಿಕಾರಿಗಳ ಖಡಕ್ ನಿರ್ಧಾರ ಡಿ ಗ್ಯಾಂಗ್ ಕಂಬಿ ಹಿಂದೆ ನಿಂತಿತು.

ಡಿ ಬಾಸ್ ಪರವಾಗಿ ಬ್ಯಾಟ ಬೀಸಿದ್ದ ಮಂತ್ರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ ಮಾಧ್ಯಮಗಳಿಗೆ ದೊಡ್ಡ ಸಲಾಂ.

ಬರೀ ಮಾಧ್ಯಮಗಳನ್ನು ನಿಂದಿಸುವ ಕಾಮಾಲೆ ಕಣ್ಣಿನವರು ಈಗ ತುಟಿಪಿಟಕ್ಕೆನ್ನುತ್ತಿಲ್ಲ.

E belagavi spl ಬೆಳಗಾವಿ ವಿಶೇಷ

D BOSS ಗ್ಯಾಂಗ್ ನಡೆಸಿದ ಭೀಭತ್ಸ ಕೊಲೆ ಪ್ರಕರಣದಲ್ಲಿ ಮಾಧ್ಯಮಗಳು, ಪೊಲೀಸರು ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಖಂಡಿತವಾಗಿ ಆರೋಪ ಹೊತ್ತ ಹಂತಕರು ಆರಾಮವಾಗಿ ಹೊರಗೆ ತಿರುಗುತ್ತಿದ್ದರು.

ಇದರ ಜೊತೆಗೆ ಡಿ ಗ್ಯಾಂಗ್ ನ ದೊಡ್ಡ ಮೊತ್ತದ ಆಫರ್ ಗಳಿಗೆ ಪೊಲೀಸರು ಕವಡೆ ಕಾಸಿನ ಕಿಮ್ಮತ್ತು ಕೊಡದೇ ನ್ಯಾಯ ದೊರಕಿಸುವ ಕೆಲಸ ಮಾಡಿದ್ದರು‌

ಹೀಗಾಗಿ ಯಾರಿಗೂ ಬಗ್ಗದೆ, ಜಗ್ಗದೆ ಮುನ್ನುಗ್ಗಿ ಕೊಲೆಗಡುಕರ ಹೆಡಮುರಿ ಕಟ್ಟಿದ ಮಾಧ್ಯಮಗಳಿಗೆ ಮತ್ತು ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಒಂದು ಸಲಾಮ್.

ಇಲ್ಲಿ ಮಾಧ್ಯಮಗಳು ಮತ್ತು ಪೊಲೀಸರು ಸರಿಯಾಗಿ ಕೆಲಸ ಮಾಡದಿದ್ದರೆ ಪ್ರಕರಣ ಹಳ್ಳ ಹಿಡಿಯುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಚಂದನವನದ ಸಾರಥಿ ನಟ ದರ್ಶನ್ ಗ್ಯಾಂಗ್ ಕೊಲೆ ಪ್ರಕರಣದಲ್ಲಿ ಕಂಬಿ ಎಣಿಸುತ್ತಿದ್ದಾರೆ ಎಂಬುದು
ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಪ್ರಕರಣದಲ್ಲಿ ಮಾಧ್ಯಮಗಳ ಪಾತ್ರ ಬಹಳಷ್ಟಿದೆ.
ಪ್ರತಿಯೊಂದು ಮಾಧ್ಯಮಗಳೂ ಪ್ರಕರಣದಲ್ಲಿ ಆರೋಪಿ ವಿರುದ್ಧ ಟೊಂಕ ಕಟ್ಟಿ
ನಿಂತಿರುವುದರಿಂದಲೆ ಇಂದು ಪ್ರಕರಣದಲ್ಲಿ ದರ್ಶನ್ ಎ-೨ ಆರೋಪಿಯಾಗಿದ್ದಾರೆ ಎಂಬುದು
ಬಹುಶಃ ಹಲವರಿಗೆ ಗೊತ್ತಿಲ್ಲ. ಮಾದ್ಯಮಗಳು ಒಂದಷ್ಟು ಎಡವಿದ್ದರೂ ಎ-೨ ಜಾಗದಲ್ಲಿದ್ದ
ದರ್ಶನ್ ಎ.೧೫ರಲ್ಲಿರುತ್ತಿದ್ದರು. ಆರಾಮವಾಗಿ ಜಾಮೀನು ತಗೊಂಡು ಬಿಂದಾಸ್ ಆಗಿ
ಓಡಾಡುತ್ತಿದ್ದರು.

ಹೌದು. ಜೂ.೮ರಂದು ಸಂಜೆಯೇ ರೇಣುಕಾಸ್ವಾಮಿ ಕೊಲೆಯಾಗಿದೆ ಎಂಬುದು ತನಿಖೆಯಿಂದ
ಹೊರಬಂದಿದೆ. ನಂತರ ಈ ಪ್ರಕರಣದಲ್ಲಿ ಮೂವರನ್ನು ಫಿಟ್ ಮಾಡುವುದಕ್ಕೆ ಸ್ಕೆಚ್ ಹಾಕಿರುವ
‘ಸುಲ್ತಾನ್’ ತಂಡ ೯ನೇ ತಾರೀಕು ಸಂಜೆ ಮೂವರನ್ನು ತಪ್ಪೊಪ್ಪಿಕೊಂಡು ನಾವೇ ಕೊಲೆ
ಮಾಡಿದ್ದು ಎಂದು ಪೊಲೀಸರ ಮುಂದೆ ಶರಣಾಗಿದ್ದಾರೆ.

ಆದರೆ ಈ ಮೂವರನ್ನು ಪ್ರತ್ಯೇಕವಾಗಿ
ವಿಚಾರಣೆಗೆ ಒಳಪಡಿಸಿದಾಗಲೇ ಕೊಲೆಯ ಹಿಂದೆ ದೊಡ್ಡವರ ಕೈ ಇರುವ ಅಂಶ ಬಯಲಾಗಿದೆ.
ಬಲವಾದ ಸಾಕ್ಷಿಗಳನ್ನು ತೆಗೆದುಕೊಂಡೇ ಮೈಸೂರಿಗೆ ಹೊರಟ ಎಸಿಪಿ ಚಂದನ್ ಕುಮಾರ್ ಅವರು
ಸ್ಟಾರ್ ಹೊಟೇಲ್‌ನಲ್ಲಿ ಶೂಟಿಂಗ್ ಹೋಗೋದಕ್ಕೆ ತಯಾರಾಗುತ್ತಿದ್ದರು. ಠಾಣೆಗೆ ಬನ್ನಿ
ಹೋಗೋಣ ಎಂದು ತಮ್ಮ ಜೀಪ್ ಹತ್ತಿಸಿ ಕರೆತಂದಿದ್ದಾರೆ. ಅಷ್ಟರಲ್ಲಾಗಲೇ ಸುದ್ದಿ ಎಲ್ಲಾ
ಕಡೆ ಹರಡಿದೆ. ಅಷ್ಟೆ! ಅಲ್ಲಿಂದ ಪ್ರಕರಣದ ಇಂಚಿಂಚು ಮಾಹಿತಿಗಳನ್ನೂ ಎಡೆ ಬಿಡದೆ
ಪ್ರಸಾರ ಮಾಡುವಲ್ಲಿ ಎಲ್ಲಾ ಮಾಧ್ಯಮಗಳು ಮುಂದಾಗಿವೆ. ಹೌದು. ಇದೀಗ ಮಾದ್ಯಮಗಳ
ಕಾಟದಿಂದ ತಪ್ಪಿಸಿಕೊಳ್ಳುವುದಕ್ಕೇ ಮಹಾಲಕ್ಷ್ಮಿ ಪುರಂ ಠಾಣೆಯನ್ನು ಸಂಪೂರ್ಣವಾಗಿ
ಶಾಮಿಯಾನಾದಿಂದ ಮುಚ್ಚಿ ಹಾಕಲಾಗಿದೆ. ಒಳಗಡೆ ಏನಾಗುತ್ತಿದೆ ಎಂಬುದರ ಮಾಹಿತಿ
ಹೊರಬರದಂತೆ ಪೊಲೀಸರು ವ್ಯವಸ್ಥೆ ಮಾಡುತ್ತಿದ್ದಾರ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಹೌದು, ಇಂತಹ ವರದಿಗಳನ್ನು ಮಾಡದೆ ಇದ್ದರೆ ಮಾದ್ಯಮಗಳಲ್ಲಿ ಯಾಕೆ ಇರಬೇಕು ಎಂದು
ಮಾದ್ಯಮದವರೇ ಹೇಳಿಕೊಂಡಿದ್ದಾರೆ. ನಾವಿನ್ನೂ ನೈತಿಕತೆ ಮಾರಿಕೊಂಡಿಲ್ಲ ಎಂಬುದನ್ನು
ತೋರಿಸಿಕೊಟ್ಟಿದ್ದಾರೆ. ಹಣಕ್ಕಾಗಿ ನಾವು ಮಾರಾಟವಾಗಿಲ್ಲ. ಯಾರ ಒತ್ತಡಕ್ಕೂ ಮಣಿಯಲ್ಲ
ಎಂಬುದನ್ನು ಈ ಪ್ರಕರಣದಲ್ಲಿ ಮಾದ್ಯಮಗಳು ಸ್ಪಷ್ಟಪಡಿಸಿದ್ದು, ಈ ಪ್ರಕರಣದಲ್ಲಿ
ಧೈರ್ಯವಾಗಿ ಮುನ್ನುಗ್ಗಿ ದರ್ಶನ್ ಹೆಡೆಮುರಿ ಕಟ್ಟಿದ್ದ ನಿಷ್ಠ ಅಧಿಕಾರಿಗಳ ತಂಡದ
ಜತೆಗೆ ನಿಂತಿದ್ದಾರೆ.

ಅಪರಾಧಿಗೆ ಶಿಕ್ಷೆಯಾಗಲೇಬೇಕು ಎಂಬ ಕೂಗು ಎಲ್ಲೆಡೆಯಿಂದಲೂ ಕೇಳಿ ಬರುತ್ತಿದೆ.


ಚಿತ್ರದುರ್ಗದ ಮನೆಗೂ ಭೇಟಿ:
ಕೇವಲ ಬೆಂಗಳೂರಿನಿಂದ ವರದಿ ಮಾಡುವುದಷ್ಟೇ ಅಲ್ಲ; ಚಿತ್ರದುರ್ಗದ ಮೃತ ರೇಣುಕಾಸ್ವಾಮಿ
ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕೆ ಮುಂದಾಗಿದ್ದಾರೆ.
ನಿಮ್ಮೊಂದಿಗೆ ನಾವಿದ್ದೇವೆ. ನ್ಯಾಯದ ಪರ ನಿಲ್ಲುತ್ತೇವೆ ಎಂದು ವಾಗ್ದಾನವನ್ನು
ಮಾಡಿದ್ದರು. ಈಗ ಆ ನೊಂದ ಕುಟುಂಬಕ್ಕೆ ಕೊಟ್ಟ ಮಾತನ್ನು ಪಾಲಿಸುವಲ್ಲಿ ಕಟಿಬದ್ಧರಾಗಿ
ನಿಂತಿದ್ದಾರೆ.


ಅಶ್ಲೀಲ ಮೆಸೇಜ್ ಮಾಡಿರುವ ರೇಣುಕಾಸ್ವಾಮಿ ವಿರುದ್ಧ ಠಾಣೆಗೆ ದೂರು ನೀಡಬೇಕಾಗಿತ್ತು.
ಕಾನೂನು ಕೈಗೆತ್ತಿಕೊಂಡು ಈ ರೀತಿ ಅಮಾನುಷವಾಗಿ ಕೊಲೆ ಮಾಡಿದ್ದನ್ನು ಯಾವ
ಏಂಗಲ್‌ನಿಂದಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಪರಾಧಿಗೆ ಶಿಕ್ಷೆಯಾಗಲೇಬೇಕು ಎಂಬುದು
ಶತಸಿದ್ಧ. ದೇಶದ ಕಾನೂನಿನ ಮುಂದೆ ಯಾವ ಛಾಲಂಜಿಂಗ್ ಸ್ಟಾರೂ ಇಲ್ಲ. ಹೊಟೇಲ್
ಕಾರ್ಮಿಕನೂ ಇಲ್ಲ…. ಎಲ್ಲರಿಗೂ ಒಂದೇ ಕಾನೂನು ಎಂಬುದು ಮತ್ತೊಮ್ಮೆ
ಸಾಬೀತಾಗಬೇಕಾಗಿದೆ. ಇನ್ನೇನು ಎರಡು ದಿನಗಳಲ್ಲಿ ಪೊಲೀಸ್ ಕಸ್ಟಡಿ ಮುಗಿಯಲಿದ್ದು,
ಅಷ್ಟರಲ್ಲಿ ತನಿಖಾ ತಂಡ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುವುದರಲ್ಲಿ ಸಂದೇಹವಿಲ್ಲ.


ಮಾಜಿ ಮೇನೇಜರ್ ಏನಾದ?
ಏಳು ವರ್ಷಗಳ ಹಿಂದೆ ೭ ಕೋಟಿ ರೂ ವಂಚನೆ ಮಾಡಿದ್ದರೆನ್ನಲಾದ ದರ್ಶನ ಮಾಜಿ ಮೆನೇಜರ್
ನಾಪತ್ತೆ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ಪೊಲೀಸ್ ಕಸ್ಟಡಿಯಲ್ಲಿರುವ
ದರ್ಶನ್ ಈಗ ಈ ವಿಚಾರಣೆಯನ್ನೂ ಎದುರಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!