ಡಾ.ಗಿರೀಶ್ ಸೋನವಾಲ್ಜರ ಮನೆಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೆಟ್ಟಿ ನೀಡಿದಾಗ ನಡೆದ ಸಹಜ ಚರ್ಚೆ ಏನು? ಅಲ್ಲಿ ಸೇರಿದ್ದ ಜನರು ಏನಂದ್ರು ಎನ್ನುವುದನ್ನು ಕೇಳಿದರೆ ಕಾಂಗ್ರೆಸ್ ಸೋಲಿಗೆ ಸ್ಪಷ್ಟ ಕಾರಣ ಸಿಗುತ್ತದೆ.
ನಾವಂತೂ ಟಿಕೆಟ್ ಕೇಳಿಯೇ ಇಲ್ಲ. ನಾವೂ ನಿಮ್ಮ ಹೆಸರನ್ನೇ ಹೈ ಕಮಾಂಡಗೆ ಕಳಿಸಿದ್ದೇವಿ. ನೀವ್ ರೆಡಿಯಾಗಿ ಎಂದು ಆಣೆ ಪ್ರಮಾಣ ಮಾಡಿದವರು ಯಾರು?

ಈ ಸುಳ್ಳು ಆಶ್ವಾಸನೆಯಿಂದ ಜನರೋಸಿ ಹೋದರಾ? ಅಥವಾ ರಾಜಕಾರಣದಲ್ಲಿ ಹಿಂದೊಂದು ,ಮುಂದೊಂದು ಮಾತನಾಡುವುದನ್ನು ಮತದಾರ ಪ್ರಭು ಸಹಿಸಲ್ಲ.
ಇಲ್ಲಿ ಕಾಂಗ್ರೆಸ್ ನವರು ಡಾ. ಸೋನವಾಲ್ಕರಗೆ ಕೊಟ್ಟ ಮಾತಿಗೆ ತಪ್ಪಿದರು. ಇದು ಗೋಕಾಕ , ಮೂಡಲಗಿತಾಲೂಕಿನ ಜನರ ಮುನಿಸಿಗೆ ಕಾರಣವಂತೆ. ಒಂದು ವೇಳೆ ಡಾ. ಸೋನವಾಲ್ಕರಗೆ ಟಿಕೆಟ್ ಕೊಟ್ಟಿದ್ದರೆ ಫಲಿತಾಂಶ ಉಲ್ಟಾ ಆಗುತ್ತಿತ್ತಂತೆ.
ಹಾಗಿದ್ದರೆ ಕೈ ಲೆಕ್ಕಾಚಾರ ತಪ್ಪಾಗಿದ್ದೆಲ್ಲಿ ಎನ್ನುವುದು ಸ್ಪಷ್ಟ
ಇ ಬೆಳಗಾವಿ ವಿಶೇಷ.
ಬೆಳಗಾವಿ.
ಲೋಕಸಭೆ ಚುನಾವಣೆ ಫಲಿತಾಂಶ ಬಂದು ಹೋದರೂ ಕೂಡ ಅದರ ಹಿಂದಿನ ಸೋಲು ಗೆಲುವಿನ ಲೆಕ್ಕಾಚಾರಗಳು ನಿಂತಿಲ್ಲ. ಒಂಥರ ಮಳೆ ನಿಂತರೂ ಹನಿ ನಿಲ್ಲಲಿಲ್ಲ ಎನ್ನುವಂತೆ..!
ಸಹಜವಾಗಿ ಕ್ಷೇತ್ರದ ಮತ್ತು ಒಂದಿಷ್ಡು ಜನ ಹಿತೈಷಿಗಳು ಒಂದೆಡೆ ಕೂಡಿದ ಸಂದರ್ಭದಲ್ಲಿ ರಾಜಕೀಯ ಚರ್ಚೆಗಳು ಸಹಜವಾಗಿ ನಡೆಯುತ್ತವೆ. ಅದು ಸಹಜ ಕೂಡ ಹೌದು.
ಅಂತಹ ಒಂದು ಚರ್ಚೆ ಈಗ ಬೆಳಗಾವಿ ಲೋಕಸಭೆ ವ್ಯಾಪ್ತಿಯಲ್ಲಿ ನಡೆದಿದೆ. ಇದು ಮುಂಬರುವ ಚುನಾವಣೆಯಲ್ಲಿ ಹೊಸ ಬಿರುಗಾಳಿ ಬೀಸಿದರೂ ಅಚ್ಚರಿಪಡಬೇಕಿಲ್ಲ
ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಪ್ರಿಯಾಂಕಾ ಜಾರಕಿಹೊಳಿ ಅತ್ಯಧಿಕ ಮತದಿಂದ ಗೆಲುವು ಸಾಧಿಸಿದ್ದರು.

ಈ ಹಿನ್ನೆಲೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಪುತ್ರಿ, ಸಂಸದೆ ಪ್ರಿಯಾಂಕಾ ಮತ್ತು ಪುತ್ರ ರಾಹುಲ್ ಜಾರಕಿಹೊಳಿ ಅವರೊಂದಿಗೆ ಬೆಳಗಾವಿಯ ಡಾ. ಗಿರೀಶ್ ಸೋನವಾಲ್ಕರ ಅವರ ಮನೆಗೆ ಬಂದಿದ್ದರು. ಇಲ್ಲಿ ನಡೆದ ಸಚಿವರು ಡಾ ಸೋನವಾಲ್ಕರ ಮತ್ತು ಸೇತಿದ್ದ ಜಬರೊಂದಿಗೆ ನಡೆಸಿದ ಮಾತುಕತೆ ರಾಜಕೀಯ ವಲಯದಲ್ಲಿ ವಿಭಿನ್ನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಯಾರು ಈ ಡಾ ಗಿರೀಶ. ಸೋನವಾಲ್ಜರ?

ರಾಜ್ಯ ರಾಜಕೀಯದಲ್ಲಿ ಸದ್ದು ಗದ್ದಲವಿಲ್ಲದೇ ತಮ್ಮದೇ ಆದ ಛಾಪು ಮೂಡಿಸಿದ ಡಾ. ಗಿರೀಶ್ ಸೋನವಾಲ್ಕರ ಯಾರು ಎನ್ನುವುದನ್ನು ಇಲ್ಲಿ ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. ಪಕ್ಷ ಬೇಧ ಮರೆತು ಎಲ್ಲರಿಗೂ ಬೇಕಾದ ವ್ಯಕ್ತಿ.
ಮೂಲತ; ಮೂಡಲಗಿಯವರಾದ ಸೋನವಾಲ್ಕರ ಕುಟುಂಬಕ್ಕೆ ತಾಲೂಕಿನಲ್ಲಿ ಅಷ್ಟೇ ಅಲ್ಲ ಜಿಲ್ಲೆಯಲ್ಲಿ ಒಳ್ಳೆಯ ಹೆಸರಿದೆ.
ಇಲ್ಲಿ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದವರಲ್ಲಿ ಡಾ. ಗಿರೀಶ ಸೋನವಾಲ್ಕರ ಒಬ್ಬರು.

ಈ ಹಿಂದೆ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಇದೇ ಡಾ. ಸೋನವಾಲ್ಕರಗೆ ಬಿಜೆಪಿ ಟಿಕೇಟ್ ಪಕ್ಕಾ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಕೊನೆಗಳಿಗೆಯ ಆಟದಲ್ಲಿ ತಪ್ಪಿತು
ಇದಾದ ನಂತರ ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್ ದಿಂದ ಇವರ ಹೆಸರು ಅಂತಿಮ ಎನ್ನಲಾಗಿತ್ತು. ಗಮನಿಸಬೇಕಾದ ಸಂಗತಿ ಎಂದರೆ ಖುದ್ದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರೇ ನಿಮಗೆ ಟಿಕೆಟ್ ಪಕ್ಕಾ. ತಯಾರಿ ಮಾಡಿಕೊಳ್ಳಿ ಎಂದು ಭರವಸೆ ನೀಡಿದ್ದರಂತೆ.
ಹೀಗಾಗಿ ಗೋಕಾಕ , ಮೂಡಲಗಿ, ರಾಮದುರ್ಗ, ಸವದತ್ತಿ, ಬೆಳಗಾವಿ ಗ್ರಾಮೀಣ ಅಷ್ಟೇ ಅಲ್ಲ ಇನ್ನುಳಿದ ಕ್ಷೇತ್ರದ ಜನ ಫುಲ್ ಖುಷ್ ಆಗಿದ್ದರು. ಅದರಲ್ಲೂ ಗೋಕಾಕ ಮತ್ತು ಮೂಡಲಗಿ ಕ್ಷೇತ್ರದ ಜನ ಮೊದಲ ಬಾರಿ ನಮ್ಮವರು ಎಂಪಿ ಆಗ್ತಾರೆ ಎಂದು ಹಿರಿಹಿರಿ ಹಿಗ್ಗಿದ್ದರು.
ಆದರೆ ಚಿಕ್ಕೋಡಿಯಲ್ಲಿ ಪ್ರಿಯಾಂಕಾಗೆ ಟಿಕೆಟ್ ಅಂತಿಮವಾದರೆ ಬೆಳಗಾವಿಯಲ್ಲಿ ನನ್ನ ಪುತ್ರ ಮೃನಾಲ್ ಗೆ ಟಿಕೆಟ್ ಬೇಕು ಎಂದು ಸಚಿವೆ ಹಠ ಮಾಡಿದರು. ಹೀಗಾಗಿ ಡಾ.ಸೋನವಾಲ್ಕರಗೆ ಟಿಕೆಟ್ ತಪ್ಪಿತು ಎನ್ನುವ ಮಾತಿದೆ. ರಾಜಕೀಯದಲ್ಲಿ ಇದೆಲ್ಲ ಸಹಜ ಅನಿಸಿದರೂ ಕೂಡ ಮತದಾರರು ಇದನ್ನು ಗಂಭೀರವಾಗಿ ಪರಿಗಣಿಸಿದರು.
ಕುಂದರನಾಡಿನ ಮುನಿಸು..!
ಇಲ್ಲಿ ಡಾ.ಗಿರೀಶ ಸೋನವಾಲ್ಕರಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದಕ್ಜಾಗಿ ಸಹಜವಾಗಿ ಕ್ಷೇತ್ರದ ಜನ ಮುನಿಸಿಕೊಂಡರು. ಇದೂ ಒಂದು ಬೆಳಗಾವಿ ಲೋಕಸಮರದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಇರಬಹುದು.
ಈಗ ಅದೆಲ್ಲ ಮುಗಿದ ಅಧ್ಯಾಯ.. ಈ ರಾಜಕೀಯ ಲೆಕ್ಕಾಚಾರದ ಬಗ್ಗೆ ಖುದ್ದು ಡಾ ಸೋನವಾಲ್ಕರ ಸಹ ಯಾರ ಮುಂದೆಯೂ ತುಟಿಪಿಟಕ್ಕೆನ್ನಲಿಲ್ಲ. ಆದರೆ ಜನ ಮಾತ್ರ ಮಾತಾಡುವುದನ್ನು ಬಿಟ್ಟಿಲ್ಲ.

ಸೋನವಾಲ್ಕರ ಕುಟುಂಬದ ಪರವಾಗಿ ಸಂಸದೆ ಪ್ರಿಯಾಂಕಾ, ಸಚಿವ ಸತೀಶ ಜಾರಕಿಹೊಳಿ ಮತ್ತು ರಾಹುಲ್ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು
————–
ಇವತ್ತೂ ಅದೇ ಚರ್ಚೆ
ಈಗ ಹೇಳ ಹೊರಟಿರುವುದು ಕೂಡ ನಾವು ಇಂದು ಡಾ. ಸೋನವಾಲ್ಕರ ಮನೆಯಲ್ಲಿ ನಡೆದ ಚರ್ಚೆಯ ವಿಷಯ.
ಇಲ್ಲಿ ಸತೀಶ ಜಾರಕಿಹೊಳಿ ಮತ್ತು ಡಾ. ಗಿರೀಶ ಸೋನವಾಲ್ಕರ ಅವರು ಈ ಬಗ್ಗೆ ಹೆಚ್ಚಿಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. ಆದರೆ ಅಲ್ಲಿ ಸೇರಿದ್ದ ಜನ ಮಾತ್ರ ತಮ್ಮ ಅಭಿಪ್ರಾಯ ಹೇಳೋದನ್ನು ಬಿಡಲಿಲ್ಲ..
ಅವರೆಲ್ಲರೂ ಕೊಟ್ಟ ಮಾತಿನಂತೆ ಡಾಕ್ಟರಗೆ ಟಿಕೆಟ್ ಕೊಟ್ಟಿದ್ದರೆ ರಿಜಲ್ಟ್ ನೋಡ್ತಿದ್ದಿರಿ ನೀವ್ ಎಂದು ಸಚಿವರ ಮುಂದೆ ಹೇಳುತ್ತಿದ್ದರು.
ಇವೆಲ್ಲ ಈಗ ಮಾತಿಗೆ ಸಿಮೀತ. ಮೂಲಗಳ ಪ್ರಕಾರ ಮತ್ತೇ ಡಾಕ್ಟರ್ ಸಾಹೇಬ್ರಿಗೆ ಮುಂದಿನ ದಿನಗಳಲ್ಲಿ ರಾಜಕಾರಣದ ಅದೃಷ್ಟ ಬಾಗಿಲು ತೆರೆಯುವ ಸಾಧ್ಯತೆಗಳು ಹೆಚ್ಚಿವೆ. ಕಾದು ನೋಡಬೇಕು