Headlines

ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ಮರ‌ ಕಡಿತ? ಕೇಳೊರು ಯಾರು?

ನಗರ ಮಧ್ಯದಲ್ಲಿ ಮರಗಳ ಮಾರಣಹೋಮ
ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಯಾಕಿಲ್ಲ ಕ್ರಮ
?
ಬೆಳಗಾವಿ: ಒಂದೆಡೆ ಪರಿಸರ ದಿನಾಚರಣೆಯ ಸಂಭ್ರಮದಲ್ಲಿ ಸಸಿ ನೆಡುವುದರಲ್ಲಿ
ಜವಾಬ್ದಾರಿಯುತ ನಾಗರಿಕರು ಮುಂದಾಗಿದ್ದರೆ, ಮತ್ತೊಂದೆಡೆ ಅರಣ್ಯ ಇಲಾಖೆಯ
ಸಿಬ್ಬಂದಿಯೊಬ್ಬರು ತಮ್ಮ ಇಲಾಖಾ ವಾಹನವನ್ನು ಮುಂದಿಟ್ಟುಕೊಂಡೇ ರಾಜಾರೋಷವಾಗಿ
ಮರಗಳನ್ನು ಕಡಿದು ಹಾಕುತ್ತಿರುವ ದೃಶ್ಯವೊಂದು ಕಾಣಿಸಿಕೊಂಡಿದ್ದು, ಸಾರ್ವಜನಿಕರಿಂದ
ತೀವ್ರ ಆಕ್ರೋಶ ವ್ಯಕ್ತವಾಗಿದೆ.


ಹೌದು, ಬೆಳಗಾವಿಯ ಮಹಾಂತೇಶನಗರದಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಸದ್ಯ ಈ
ದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೋಡುಗರಿಂದ
ಆಕ್ರೋಶ ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ಆ ವೀಡಿಯೋದಲ್ಲೇನಿದೆ ಎಂಬ ಕುತೂಹಲ
ಮೂಡುವುದು ಸಹಜ ಹೇಳ್ತೀವಿ ನೋಡಿ.
ಶೆಫರ್ಡ್ ಮಿಷನ್ ಪೂರ್ವ ಪ್ರಾಥಮಿಕ ಶಾಲೆಯ ಪಕ್ಕ ಪ್ರಾರ್ಥನಾ ಮಂದಿರವೊಂದರ ಮುಂದೆ
ಅರಣ್ಯ ಇಲಾಖೆಯ ಕೆಎ ೦೪ ಜಿ ೧೯೬೭ ವಾಹನವನ್ನು ನಿಲ್ಲಿಸಲಾಗಿದೆ. ಇಲಾಖೆಯ
ಸಿಬ್ಬಂದಿ ಅರ್ಧ ಯೂನಿಫಾರಂನಲ್ಲಿದ್ದು, ಪ್ರಾರ್ಥನಾ ಮನೆಯ ಆವರಣದಲ್ಲಿರುವ ದೊಡ್ಡ
ಮರಗಳ ಮಾರಣಹೋಮವನ್ನು ಮಾಡುತ್ತಿದ್ದಾರೆ.

ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಹೀಗೆ
ರಾಜಾರೋಶವಾಗಿ ಮರ ಕಡಿಯುತ್ತಿದ್ದರೆ ಆ ರಸ್ತೆಯಲ್ಲಿ ಹೋಗುವ ಸಾರ್ವಜನಿಕರು ಸ್ಥಳದಲ್ಲಿ
ಅರಣ್ಯ ಇಲಾಖೆಯ ವಾಹನವನ್ನು ಕಂಡು ಬಹುಶಃ ಇದು ಇಲಾಖೆಯವರೇ ಮಾಡುತ್ತಿರುವದೇ ಎಂದು
ಶಂಕಿಸಿ ಮುಂದಕ್ಕೆ ಹೋಗುತ್ತಿರುವುದನ್ನು ಕೂಡಾ ವೀಡಿಯೋದಲ್ಲಿ ಕಾಣಬಹುದಾಗಿದೆ.
ಅಂದಹಾಗೆ ಅರಣ್ಯ ಇಲಾಖೆಯವ ಅನುಮತಿ ಇಲ್ಲದೆ ಹೀಗೆ ಮರಗಳನ್ನು ಕಡಿದು ಸಾಗಿಸುವುದು
ಅಪರಾಧ ಎಂದಿದ್ದರೂ, ಅನುಮತಿ ಇಲ್ಲದೆ ಹೀಗೆ ಆ ವ್ಯಕ್ತಿ ಮರ ಹೇಗೆ ಕಡಿಯುತ್ತಿದ್ದ
ಎಂಬುದು ಈಗ ಸಾರ್ವಜನಿಕರ ಪ್ರಶ್ನೆಯಾಗಿದೆ.

ಮಳೆಗಾಲದಲ್ಲಿ ರಸ್ತೆಯ ಮೇಲೆ ಬಾಗಿ ನಿಂತು
ಅನಾಹುತ ಸೃಷ್ಟಿಸುವ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸುವುದಕ್ಕೆ ಕೂಡಾ ಅರಣ್ಯ
ಇಲಾಖೆಯವರು ಇಲ್ಲಸಲ್ಲದ ಕಿರಿಕ್ ಮಾಡುತ್ತಾರೆ. ಆದರೆ ಇಲ್ಲಿ ರಾಜಾರೋಷವಾಗಿ
ಇಲಾಖೆಯವರು ಆಪತ್ತೇ ಇಲ್ಲದೆ ಇರುವ ಮರಗಳನ್ನು ಯಾಕೆ ಹೇಗೆ ಕಡಿಯುತ್ತಾರೆ ಎಂಬುದು
ಎಲ್ಲರ ಮುಂದಿನ ಸಂದೇಹವಾಗಿದ್ದು, ಪ್ರಾರ್ಥನಾ ಮಂದಿರ ಎಂದರೆ ಅದು ಸಾರ್ವಜನಿಕರು
ಭಕ್ತಿ ಭಾವದಿಂದ ದೇವರ ಮುಂದೆ ತಮ್ಮ ನೋವು-ಖುಷಿ ಹಂಚಿಕೊಳ್ಳುವ ಜಾಗ. ಅಲ್ಲಿ ಪ್ರಶಾಂತ
ವಾತಾವರಣ ಇರಬೇಕು ಅಂತಹದ್ದರಲ್ಲಿ ಅಲ್ಲಿ ಗಾಳಿ ಬೆಳಕು ನೆರಳು ನೀಡುತ್ತಿದ್ದ ಮರಗಳಿಗೆ
ಕೊಡಲಿ ಹಾಕಿದ್ದು ಯಾಕೆ? ನಗರ ಮಧ್ಯದಲ್ಲಿ ಮರಗಳ ಮಾರಣಹೋಮ ನಡೆದರೂ ಸಂಬಂಧಪಟ್ಟವರು
ಸುಮ್ಮನೆ ಯಾಕಿದ್ದಾರೆ? ಅರಣ್ಯ ಇಲಾಖೆಯ ವಾಹನ ಮುಂದಿಟ್ಟು ಇಲಾಖೆಯ ಹೆಸರನ್ನು
ದುರುಪಯೋಗ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಜೋರಾಗಿ
ಕೇಳಿ ಬರುತ್ತಿದೆ.
ಅಧಿಕ ತಾಪಮಾನದಿಂದ ಈ ಬಾರಿ ವಿಪರೀತ ಬಿಸಿಗೆ ಸಾಕಷ್ಟು ಆರೋಗ್ಯ ಸಮಸ್ಯೆ ಅನುಭವಿಸಿದ
ಬೆಳಗಾವಿಗರಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಜಾಗೃತಿ ಮೂಡಿಸಬೇಕಾಗಿರುವ
ಇಲಾಖೆಯಿಂದಲೇ ಮರಗಳ ಮಾರಣಹೋಮ ನಡೆಯುತ್ತಿರುವುದು ನಿಜಕ್ಕೂ ದುರದೃಷ್ಟವೇ ಸರಿ.

Leave a Reply

Your email address will not be published. Required fields are marked *

error: Content is protected !!