ಬೆಳಗಾವಿ.
ಅಕ್ರಮ ದಂಧೆ ವಿರುದ್ಧ ಕ್ರಮ ತೆಗೆದುಕೊಳ್ಖುವಲ್ಲಿ ಪೊಲೀಸರ ಕೈ ಕಟ್ಟಿ ಹಾಕಿದವರು ಯಾರು ಎನ್ನುವ ಸುದ್ದಿ ಪ್ರಕಟವಾಗುತ್ತಿದ್ದಙತೆಯೇ ಇಡೀ ಪೊಲೀಸ್ ಇಲಾಖೆಯಲ್ಲಿ ಒಂದು ರೀತಿಯ ಹಲ್ ಚಲ್ ಶುರುವಾಗಿದೆ.
ಬೆಳಗಾವಿ ತಾಲೂಕಿನ ಗ್ರಾಮೀಣ, ಕಾಕತಿ, ಬಾಗೇವಾಡಿ, ಮಾರಿಹಾಳ, ದೇಸೂರು ಸೇರಿದಂತೆ ಮತ್ತಿತರ ಕಡೆಗಳಲ್ಲಿ ನಡೆಯುತ್ತಿರುವ ಅಕ್ರಮ ದಂಧೆಯ ಬಗ್ಗೆ E belagavi.com ವರದಿ ಮಾಡಿತ್ತು.

ಕಾಲ್ಪನಿಕ ಚಿತ್ರ…
ಅಷ್ಟೇ ಅಲ್ಲ ಕಳೆದ ದಿನ ಬಾಚಿ ಬಳಿ ಕಾಂಗ್ರೆಸ್ ನಗರಸೇವಕಿ ಪತಿ ಮೇಲೆ ನಡೆದ ಹಲ್ಲೆ ಘಟನೆ ಪ್ರಸ್ತಾಪಿಸಿ ವರದಿಯಲ್ಲಿ ಕೆಲ ಸಂಗತಿಗಳನ್ನು ಪ್ರಸ್ತಾಪಿಸಲಾಗಿತ್ತು.
ಈ ವರದಿಯನ್ನು ಗಮನಿಸಿದ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಸಂಬಂಧಿಸಿದವರ ಬೆಂಡೆತ್ತುವ ಕೆಲಸ ಮಾಡಿದ್ದಾರೆ.
ಅಷ್ಟೆ ಅಲ್ಲ ಈ ಎಲ್ಲದರ ಸೂತ್ರಧಾರನ ಹೆಡಮುರಿ ಕಟ್ಡಲು ಪೊಕೀಸ ಆಯುಕ್ತರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ.

ಇದೆಲ್ಲ ಬೆಳವಣಿಗೆಯ ಮಧ್ಯೆ ಈ ದಂಧೆಗಳಿಗೆ ಖಾಕಿ ಅಭಯ ಹಸ್ತ ಇದೆಯೇ? ಎನ್ನುವುದರ ಬಗ್ಗೆ ವಿಚಾರಣೆ ನಡೆಸಲು ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ.
ಮೂಲಗಳ ಪ್ರಕಾರ ಗ್ರಾಮೀಣ ಠಾಣೆಯ ಕೆಲವರ ಅಭಯ ಹಸ್ತ ಈ ದಂಧೆ ಕೋರರ ಮೇಲಿದೆ ಎನ್ನುವ ಸುಖಿವು ಸಹ ಪೊಲೀಸ್ ಆಯುಕ್ತರಿಗೆ ಸಿಕ್ಕಿದೆ.
ಈ ಪ್ರಕರಣದಲ್ಲಿ ಬೇಕಾದ ವ್ಯಕ್ತಿಯ ದೂರವಾಣಿ ಕೆರಗಳ ಜಾಡನ್ನು ಹಿಡಿದ ಗ್ರಾಮೀಣ ಠಾಣೆಯ ಕೆಲವರು ವಿಚಾರಣೆಗಾಗಿ ಕೆಲವರನ್ನು ಕರೆಯಿಸಿಮತ್ತೇ ಬಿಟ್ಟು ಕಳಿಸುತ್ತಿರುವ ವಿಷಯ ವಿಭಿನ್ನ ಚರ್ಚೆಗೆ ಕಾರಣವಾಗುತ್ತಿದೆ