ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಇದೇ ಜುಲೈ 2 ರಂದು ನಡೆಯಲಿದೆ.
ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ರೆವಿನ್ಯು, ಆರೋಗ್ಯ ಮತ್ತು ಲೆಕ್ಕಪತ್ರ ಸಮಿತಿಗೆ ಈ ಚುನಾವಣೆ ನಡೆಯಲಿದೆ.

ಅಂದು ಬೆಳಿಗ್ಗೆ 10 ಕ್ಕೆ ಈ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎರಡನೇ ಬಾರಿ ಸ್ಥಾಯಿ ಸಮಿತಿ ಚುನಾವಣೆ ನಡೆಯಲಿದೆ.
ಕಳೆದ ಬಾರಿ ಪಿಡಬ್ಲುಡಿ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಬಂದಿತ್ತು. ರೆವಿನ್ಯು ಮತ್ತು ಅಕೌಂಟ್ಸ ಸಮಿತಿ ಉತ್ತರ ಕ್ಷೇತ್ರದ ಪಾಲಾಗಿದ್ದವು.
ಈ ಬಾರಿ ಅವು ತಿರುವು ಮುರುವಾಗುವ ಸಾಧ್ಯತೆಗಳಿವೆ.