ಬೆಳಗಾವಿ.
ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಅನಗತ್ಯವಾಗಿ ಗುಂಡಾ ಕಾಯ್ದೆ ಹಾಕುವ ದುಸ್ಸಾಹಸಕ್ಕೆ ಮುಂದಾದರೆ ಮುಂದಾಗುವ ಅನಾಹುತಕ್ಕೆ ಅವರೇ ಹೊಣೆ ಎಂದು ಶಾಸಕ ಅಭಯ ಪಾಟೀಲ ಎಚ್ಚರಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಮೇಲೆ ಪೊಲೀಸರು ಗುಂಡಾ ಕಾಯ್ದೆ ಹಾಕುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರೇ ನೀಡಿದ್ದಾರೆ..

ಈಗಾಗಲೇ ಪೊಲೀಸರು ಶಾಲೆಗೆ ಹೋಗಿ ದಾಖಲಾತಿಗಳನ್ನುಸಂಗ್ರಹಿಸುತ್ತಿದ್ದಾರೆ, ನಮ್ಮ ಕಾರ್ಯಕರ್ತರು ರಾಜಕೀಯ ಹೋರಾಟದಲ್ಲಿ ಭಾಗವಹಿಸಿದ್ದಾರೆ, ಅವರ ಮೇಲೆ ಯಾವುದೇ ಗಂಭೀರ ಸ್ವರೂಪದ ಆರೋಪಗಳಿಲ್ಲ.
ಹೀಗಿರುವಾಗ ಅಂತಹ ಕಾರ್ಯಕರ್ತರ ವಿರುದ್ಧ ಗುಂಡಾಕಾಯ್ದೆ ಪ್ರಕರಣ ದಾಖಲಿಸುವ ಕೆಲಸ ಮಾಡಿದರೆ ಮುಂದಾಗುವ ಅನಾಹುತಕ್ಕೆ ಅವರೇ ಕಾರಣರಾಗಬೇಜಾಗುತ್ತದೆ ಎಂದು ಸ್ಪಷ್ಟಪಡಿಸಿದರು,