ಸಹಕಾರಿ ಧುರೀಣ ರಾವಸಾಹೇಬ ಇನ್ನಿಲ್ಲ

ಬೆಳಗಾವಿ:

ಅರಿಹಂತ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷರು ಹಾಗೂ ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷರಾಗಿದ್ದ ರಾವಸಾಹೇಬ್ ಪಾಟೀಲ ಅವರು ನಿಧನ ಹೊಂದಿದ್ದಾರೆ.
ಖ್ಯಾತ ಉದ್ಯಮಿ ರಾವಸಾಹೇಬ ಪಾಟೀಲರಿಗೆ 80 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹಿರಿಯ ಸಹಕಾರಿ ಧುರೀಣರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಇವರು ಇಂದು ಬೆಳಗ್ಗೆ ಇಹಲೋಕವನ್ನು ತ್ಯಜಿಸಿದ್ದಾರೆ.

ತುಂಬಲಾರದ ನಷ್ಟ..!
ಸಹಕಾರ ರತ್ನ, ಅರಿಹಂತ ಉಸ್ಯೋಗ ಸಮಹೂದ ಸಂಸ್ಥಾಪಕ ಅಧ್ಯಕ್ಷ ಮತ್ತು ದಕ್ಷಿಣ ಭಾರತ ಜೈನ ಸಭಾದ ಅಧ್ಯಕ್ಷರೂ ಆಗಿದ್ದ ರಾವಸಾಹೇಬ ಪಾಟೀಲರ ನಿಧನದಿಂದ ಸಹಕಾರ ಕ್ಷೇತ್ರಕ್ಕೆ ತುಂಬಲಾದ ನಷ್ಟವಾಗಿದೆ, ಭಣಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ.
ಅಭಯ ಪಾಟೀಲ. ಶಾಸಕರು, ಬೆಳಗಾವಿ.

ಕತ್ತಿ ಕುಟುಂಬಕ್ಕೆ ಆತ್ಮೀಯರು

ಜನತಾ ಪರಿವಾರದಿಂದಲೂ ಕತ್ತಿ ಕುಟುಂಬದ ಹಿರಿಯ ಒಡನಾಡಿ ಸಹಕಾರರತ್ನ ರಾವಸಾಹೇಬ ಪಾಟೀಲ ನಿಧನ ನಂಬಲಸಾಧ್ಯವಾಗಿದೆ. ಸಹಕಾರ, ಉದ್ಯಮ, ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ರಾವಸಾಹೇಬ ಕಾಕಾ ಮಾರ್ಗದರ್ಶನ ಇನ್ನಷ್ಟು ಕಾಲ ಸಮಾಜಕ್ಕೆ ಅವಶ್ಯವಿತ್ತು. ವಿಶೇಷವಾಗಿ ಜೈನ‌ ಸಮುದಾಯದ ಮಹಾಸಭೆಯ ಮೂಲಕ ಸಮುದಾಯದ ಏಳ್ಗೆಗೆ ಶ್ರಮಿಸುವ ಜೊತೆಗೆ ಹಲವಾರು ರಾಜಕೀಯ ಕುಟುಂಬಗಳ ನಂಟು ಹೊಂದಿದ್ದ ಅವರು ಅಧಿಕಾರಕ್ಕಾಗಿ ಎಂದಿಗೂ ಆಸೆಪಟ್ಟವರಲ್ಲ. ನೇರ ನಡೆ-ನುಡಿಯ ಮೂಲಕ ಸಮಾಜದ ವಿವಿಧ ಕ್ಷೇತ್ರಗಳ ಉನ್ನತಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಅಗಲಿಕೆ‌ ಸಮಾಜಕ್ಕೆ ತುಂಬಿಬಾರದ‌ ಹಾನಿಯನ್ನುಂಟು ಮಾಡಿದೆ. ಅವರ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ.
ರಮೇಶ ಕತ್ತಿ
ಅಧ್ಯಕ್ಷರು, ಬೆಳಗಾವಿ ಡಿಸಿಸಿ ಬ್ಯಾಂಕ

ಯುವಕರಿಗೆವ ಮಾದರಿ

ಗಡಿಭಾಗದಲ್ಲಿ ಸಹಕಾರ ಹಾಗೂ ಔದ್ಯೋಗಿಕ ಕ್ಷೇತ್ರದ ಹಿರಿಮೆ ಹೆಚ್ಚಿಸಿದ ಸಹಕಾರ ಜೀವಿ ರಾವಸಾಹೇಬ ದಾದಾ ಪಾಟೀಲ ನಿಧನ ಆಘಾತ ತಂದಿದ್ದು, ಸರಳತೆಯ ಬದುಕು ಸವೆಸಿ ತಮ್ಮ ಪ್ರತಿ ಕಾರ್ಯದಲ್ಲಿಯೂ ಯಶ ಕಂಡಿದ್ದ ಅವರ ಬದುಕು ಯುವಕರಿಗೆ ಮಾದರಿಯಾಗಿತ್ತು. ದಿ.ಉಮೇಶ ಕತ್ತಿ ಹಾಗೂ ಚಿಕ್ಕಪ್ಪ ರಮೇಶ ಕತ್ತಿ ಅವರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡು ಬಂದಿದ್ದ ಅವರ ನಿಧನ ದುಃಖದ ಸಂಗತಿಯಾಗಿದೆ. ಅವರ ಅಗಲಿಕೆಯಿಂದ ಈ ಭಾಗ ಶ್ರೇಷ್ಠ ಸಹಕಾರಿಯೊಬ್ಬರನ್ನು ಕಳೆದುಕೊಂಡಂತಾಗಿದ್ದು, ಈ ನೋವು ಸಹಿಸುವ ಶಕ್ತಿ ಕುಟುಂಬ ವರ್ಗ ಹಾಗೂ ಅಭಿಮಾನಿ ಬಳಗಕ್ಕೆ ಭಗವಂತ ಕರುಣಿಸಲಿ.
ನಿಖಿಲ್ ಕತ್ತಿ
ಶಾಸಕರು, ಹುಕ್ಕೇರಿ

Leave a Reply

Your email address will not be published. Required fields are marked *

error: Content is protected !!