ಇವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುವ ಶಾಸಕರಲ್ಲ.
ಪ್ರತಿ ಭಾನುವಾರ ಸ್ವಚ್ಚತಾ ಅಭಿಯಾನ, ಸೈಕಲ್ ಫೇರಿ ಮೂಲಕ ಜನರ ಮಧ್ಯೆ ಇರುವ ಶಾಸಕ.
ಈಗ ಜನರ ಮನೆ ಮನೆಗೆ ಅಭಿನಂದನಾ ಪತ್ರ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಆಯಾ ಬಿಜೆಪಿ ನಗರಸೇವಕರ ಮೂಲಕ ಮನೆ ಮನೆ ತಲುಪುತ್ತಿವೆ ಈ ಅಭಿನಂದನಾ ಪತ್ರಗಳು.

ಬೆಳಗಾವಿ. ರಾಜಕಾರಣದಲ್ಲಿ ಬಹುತೇಕರು ಚುನಾವಣೆ ಮುಗಿದ ನಂತರ ಮತದಾತರನ್ನು ಭೆಟ್ಟಿ ಮಾಡಿ ಕಷ್ಟಗಳನ್ನು ಕೇಳುವುದು, ಹಂಚಿಕೊಳ್ಳುವುದು ಅಪರೂಪ.
ಆದರೆ ಬೆಳಗಾವಿ ದಕ್ಷಿಣ ಕ್ಷೇತ್ರದ BJP MLA ABHAY PATILರು ಚುನಾವಣೆ ಇರಲಿ, ಬಿಡಲಿ ಪ್ರತಿವಾರ ಸೈಕಲ್ ಫೇರಿ ಮೂಲಕ ಜನರ ಮನೆ ಬಾಗಿಲಿಗೆ ಸಮಸ್ಯೆ ಆಲಿಸಲು ಹೋಗುತ್ತಿದ್ದಾರೆ ಎನ್ನುವುದು ಗುಟ್ಟಿನ ವಿಷಯವೇನಲ್ಲ.

ಮತ್ತೊಂದು ಸಂಗತಿ ಎಂದರೆ, ಇವರು ತಾವಷ್ಟೆ ಅಲ್ಕ ದಕ್ಷಿಣ ಕ್ಷೇತ್ರದ ಬಿಜೆಪಿ ನಗರ ಸೇವಕರಿಗೂ ಕೂಡ ಮತದಾರರನ್ನು ಮೇಲಿಂದ ಮೇಲೆ ಭೆಟ್ಟಿಯಾಗುವ ಅವಕಾಶ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಬೆಳಗಾವಿ ದಕ್ಷಿಣ ಕ್ಷೇತ್ರ ಬಿಜೆಪಿ ಭದ್ರಕೋಟೆ.
ಇನ್ನು ಡೆಂಗ್ಯು ಭೀತಿ ಹಿನ್ನೆಲೆಯಲ್ಲಿ ಪ್ರತಿ ವಾರ್ಡನಲ್ಲಿ ಡೆಂಗ್ಯುಡ್ರಾಪ್ ಹಾಕಿಸುವ ಕೆಲಸ ಮಾಡಲಾಗಿದೆ. ಅದನ್ನೂ ಆಯಾ ನಗರಸೇವಕರು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸ್ವಚ್ಚತಾ ಅಭಿಯಾನ ಸೇರಿದಂತೆ ಇತರ ವಿಷಯಕ್ಕೆ ಆಧ್ಯತೆ ನೀಡುತ್ತಿದ್ದಾರೆ. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂದಷ್ಟು ಅನುದಾನ ಕಾಂಗ್ರೆಸ್ ಸರ್ಕಾರದಲ್ಲಿ ಬರುತ್ತಿಲ್ಲ ಎನ್ನುವ ಅಸಮಾಧಾನ ಶಾಸಕರದ್ದು.