
ಎಲ್ಲರನ್ನೂ ಗೌರವಿಸುವ ಗುಣಬೇಕು- ನಿತೇಶ್
ನಿಕಟಪೂರ್ವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಬೀಳ್ಕೊಡುಗೆ ಬೆಳಗಾವಿ, ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾಗಿರುವ ನಿತೇಶ್ ಪಾಟೀಲ ಅವರನ್ನು ಶುಕ್ರವಾರ (ಜು.05) ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ, ಜಿಲ್ಲಾಮಟ್ಟದ ಅಧಿಕಾರಿಗಳು ಸನ್ಮಾನಿಸಿ, ಬೀಳ್ಕೊಟ್ಟರು. ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿತೇಶ್ ಪಾಟೀಲ ಅವರು, ಯಾವುದೇ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ನೇಹದಿಂದ ಕಾಣಬೇಕು. ಜತೆಗೆ ಎಲ್ಲರನ್ನೂ ಗೌರವಿಸುವ ಗುಣವಿದ್ದರೆ ಸರ್ಕಾರಿ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಬಹುದು. ಎರಡೂವರೆ ವರ್ಷದಿಂದ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ…