ವಾಲ್ಮೀಕಿ‌ ನಿಗಮ ಹಗರಣ ಸಿಬಿಐಗೆ ಕೊಡಿ

ವಾಲ್ಮೀಕಿ ನಿಗಮ ಮಂಡಳ ಹಗರಣ ಸಿಬಿಐಗೆ ವರ್ಗಾಯಿಸಿ.ರಮೇಶ ಜಾರಕಿಹೊಳಿ ಆಗ್ರಹ

ಅಥಣಿಯಲ್ಲಿ ಬಿಜೆಪಿ ಲೀಡ್ ಬಂದಿದ್ದು ಖುಷಿಯ ವಿಚಾರ

ಬೆಳಗಾವಿ;-

– ಲೋಕಸಭೆ ಚುನಾವಣೆಯಲ್ಲಿ ಅಥಣಿಯಲ್ಲಿ ಬಿಜೆಪಿ ಪಕ್ಷಕ್ಕೆ ಲೀಡ್ ಬಂದಿದ್ದು ನಮಗೆ ಖುಷಿಯ ವಿಚಾರ ಎಂದು ಮಾಜಿ ಸಚಿವ.ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಬುಧವಾರ ಕಾರ್ಯಕರ್ತರ ಭೇಟಿ ನಿಮಿತ್ಯ ಅಥಣಿ ಪಟ್ಟಣಕ್ಕೆ ಆಗಮಿಸಿದ ರಮೇಶ ಜಾರಕಿಹೊಳಿ ” ಲೋಕ ಸಭೆ ಚುನಾವಣೆಯಲ್ಲಿ ಅಥಣಿಯಲ್ಲಿ ಬಿಜೆಪಿ ಪಕ್ಷಕ್ಕೆ ಲೀಡ್ ಬಂದ್ ವಿಚಾರವಾಗಿ ” ಮಾತನಾಡಿದ ಅವರು, ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಲೀಡ್ ಕಳೆದುಕೊಂಡಿಟ್ಟು ಸುಮಾರು 72 ಸಾವಿರ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಗೆ ಜನ ಬೇಸತ್ತು ಇವತ್ತು ನಮ್ಮ ಪಕ್ಷದ ಮೇಲೆ ಒಲವು ತೋರಿ ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಟ್ಟಿದ್ದಾರೆ ಅದು ಖುಷಿಯ ವಿಚಾರ ಎಂದು ಹೇಳಿದರು.
ವಾಲ್ಮೀಕಿ ನಿಗಮ ಹಗರಣ ಎಸ್ ಐ ಟಿ ಯಿಂದ ಸಾಧ್ಯವಿಲ್ಲ; ಸಿಬಿಐಗೆ ಒಪ್ಪಿಸಿ ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದರು

ಅಥಣಿ ಪಟ್ಟಣದಲ್ಲಿ ವಾಲ್ಮೀಕಿ ನಿಘಮದ ಹಣ ಅಕ್ರಮ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಲಿತರ ಹಣ ದುರ್ಬಳಕೆ ಮಾಡಿಕೊಂಡಿದೆ. ಎಸ್ ಟಿ ಮೀಸಲಾತಿಯ ಸಾವಿರಾರು ಕೋಟಿ ರೂ  ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿದ್ದೂ ದಲಿತರನ್ನ ಹತ್ತಿಕ್ಕುವ ಕೆಲಸಕ್ಕೆ ಕೈಗನ್ನಡಿಯಾಗಿದೆ.

ಅಷ್ಟೇ ಅಲ್ಲದೆ ರಾಜ್ಯದಲ್ಲಿ ವಾಲ್ಮೀಕಿ ನಿಘಮದ ಅವ್ಯವಹಾರ ಎಸ್ ಐ ಟಿ ಯಿಂದ ತನಿಖೆ ನ್ಯಾಯ ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಸರ್ಕಾರ ಸಿಬಿಐ ಗೆ ಒಪ್ಪಿಸುವಂತೆ ಒತ್ತಾಯಿಸಿದರು.
ಈ ವೇಳೆ ಮಾಜಿ ಶಾಸಕರಾದ ಶ್ರೀಮಂತ ಪಾಟೀಲ.ಮಹೇಶ ಕುಮಠಳ್ಳಿ. ಎಸ್.ಎಂ. ಮುದಕನ್ನವರ.ಅಪ್ಪಾಸಾಬ ಅವತಾಡೆ.ನಾನಾಸಾಹೇಬ ಅವತಾಡೆ. ಮಲ್ಲಿಕಾರ್ಜುನ ಅಂದಾನಿ.ದೀಪಕಗೌಡ ಪಾಟೀಲ‌. ಅಶೋಕ ಯಲಡಗಿ.ರವಿ ಪೂಜಾರಿ.ಕುಮಾರ ಪಡಸಲಗಿ. ನಿಂಗಪ್ಪ ನಂದೇಶ್ವರ. ಸತ್ಯಪ್ಪ ಬಾಗೆನ್ನವರ. ರಮೇಶ ಪಾಟೀಲ .ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *

error: Content is protected !!