Headlines

ಎಸ್ಸಿ ನಿರ್ವಾಹಕಿ ಮೇಲೆ ಹಲ್ಲೆ, ಜಾತಿ ನಿಂದನೆ, ಜೀವ ಬೆದರಿಕೆ

Oplus_0

ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
ಪರಿಶಿಷ್ಟ ಜಾತಿಗೆ ಸೇರಿದ ನಿವರ್ಾಹಕಿ ಮೇಲೆ ಮಾರಣಾಂತಿಕ ಹಲ್ಲೆ.

ಸಿಂಗಾರಕೊಪ್ಪದ 5 ಜನರಿಂದ ಹಲ್ಲೆ. ಜಾತಿ ನಿಂದನೆ.
ದೂರು ದಾಖಲು ಮಾಡಿಕೊಳ್ಳಲು ಮೂರು ದಿನ ತೆಗೆದುಕೊಂಡ ಪೊಲೀಸರು.

ಜಾತಿ ನಿಂದನೆ, ಹಲ್ಲೆ ದೂರು ದಾಖಲಾದರೂ ಆರೋಪಿಗಳನ್ನು ಬಂಧಿಸದ ಪೊಲೀಸರು,

ಬೆಳಗಾವಿ.
ಕ್ಷುಲ್ಲಕ ಕಾರಣಕ್ಕಾಗಿ ಪರಿಶಿಷ್ಟ ಜಾತಿಗೆ ಸೇರಿದ ನಿರ್ವಾಹಕಿಯೊಬ್ಬಳನ್ನು 5 ಜನರ ಗುಂಪು ನಿಂದಿಸಿದ್ದಲ್ಲದೇ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಸವದತ್ತಿ ತಾಲೂಕಿನ ಹಿಡ್ನಾಳ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮೂಲತ: ದಾವಣಗೆರೆ ತಾಲೂಕಿನ ಜಿಗಳೂರಿನ ಶಶಿಕಲಾ ಅವರೇ ಹಲ್ಲೆಗೊಳಗಾದವರು,
ಇಲ್ಲಿ ಘಟನೆ ಕಳೆದ ದಿ 29 ರಂದು ಮಧ್ಯಾಹ್ನ ನಡೆದರೂ ಕೂಡ ಪೊಲೀಸರು ಮೂರು ದಿನಗಳ ನಂತರ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ, ಆದರೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ.

ಘಟನೆ ನಡೆದ ದಿನವೇ ಹಲ್ಲೆಗೊಳಗಾದ ನಿವರ್ಾಹಕಿ ಶಶಿಕಲಾ ಮಧ್ಯರಾತ್ರಿಯವರೆಗೂ ಠಾಣೆಯಲ್ಲಿ ಕುಳಿತರೂ ಕೂಡ ಅಲ್ಲಿದ್ದ ಹವಾಲ್ದಾರ್ ಸಹ ದೂರು ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದರು ಎನ್ನಲಾಗಿದೆ,

ಆದರೆ ಹಲ್ಲೆ ಮಾಡಿದವರನ್ನು ಬಹಳ ಹೊತ್ತಿನ ನಂತರ ಠಾಣೆಗೆ ಕರೆಯಿಸಿ ನಂತರ ಬಿಟ್ಟು ಕಳಿಸಿದರು,
ಇದಾದ ನಂತರ ದೂರು ದಾಖಲು ಮಾಡಿಕೊಳ್ಳುವಂತೆ ಸಾರಿಗೆ ಸಂಸ್ಥೆ ಸಂಘಟನೆಗಳು ಠಾಣೆಗೆ ಹೋದ ಸಂದರ್ಭದಲ್ಲಿ ಕೂಡ ಪೊಲೀಸರು ದೂರು ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದರು.

ಆಗ ಸಂಘಟನೆ ಪದಾಧಿಕಾರಿಗಳು ಆಕ್ರೋಶಿತಗೊಂಡಾಗ ನೀವೇ ದೂರು ಬರೆದುಕೊಡಿ, ನಮ್ಮಲ್ಲಿ ಬರೆಯುವವರು ಇಲ್ಲ ಎನ್ನುವ ನೆಪ ಹೇಳಿದರು ಎನ್ನಲಾಗಿದೆ,

Oplus_34

ಕೊನೆಗೆ ಫಿರ್ಯಾದಿಯೇ ದೂರು ಬರೆದುಕೊಟ್ಟ ಸಂದರ್ಭದಲ್ಲಿ ಬರೀ ವಾದ ವಿವಾದ ಅಷ್ಟೇ ಬರೆಯಬೇಕು, ಅದನ್ನು ಬಿಟ್ಟು ಜಾತಿ ನಿಂದನೆ ಬಗ್ಗೆ ಬರೆದರೆ ದೂರು ದಾಖಲಾಗುವುದಿಲ್ಲ ಎನ್ನುವ ಬೆದರಿಕೆ ಮಾತುಗಳನ್ನು ಅಲ್ಲಿದ್ದ ಪೊಲೀಸರು ಆಡಿದರು ಎಂದು ಹಲ್ಲೆಗೊಳಗಾದವರು ತಿಳಿಸಿದ್ದಾರೆ, ಈಗ ಪ್ರಕರಣ ಎಸ್ಪಿ ಕಚೇರಿ ಮೆಟ್ಟಿಲು ಹತ್ತಿದೆ

ಆರೋಪಿಗಳು ಯಾರು?

ಪವಿತ್ರಾ ಶಂಕರಗೌಡ ಪಾಟೀಲ, ಶಂಕರಗೌಡ ಪಾಟೀಲ, ಸೋಮನಗೌಡ ಪಾಟೀಲ, ಅಮರ ಶಂಕರಗೌಡ ಪಾಟೀಲ, ಸುಮಂಗಲಾ ಶಂಕರಗೌಡ ಪಾಟೀಲ.

ಇಚರ ಹೆಸರುಗಳು FIR ದಲ್ಲಿ ನಮೂದಾಗಿವೆ

Leave a Reply

Your email address will not be published. Required fields are marked *

error: Content is protected !!