ಕಳೆದ ದಿನ E belagavi.com ಹಾಕಿದ ವಿಡಿಯೋ ಎಫೆಕ್ಟ್.
ಸ್ಥಳಕ್ಕೆ ಭೆಟ್ಟಿ ನೀಡಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ.
ಬೆಳಗಾವಿ ಚನ್ನಮ್ಮ ವೃತ್ತದ ಬಳಿಯಿರುವ ಸ್ಮಾರ್ಟ ಸಿಟಿ ತಂಗುದಾಣ.
ಬರೀ ದುರಸ್ತಿ ಅಲ್ಲ ಕಳಪೆ ಕಾಮಗಾರಿ ಬಗ್ಗೆ ಆಗಬೇಕಿದೆ ತನಿಖೆ.
ಬೆಳಗಾವಿ.
ರಾಜ್ಯದ ತುಂಬ ಅದರಲ್ಲೂ ಅಧಿವೇಶನ ಹೊರಗೆ, ಒಳಗೆ ಎಲ್ಲೆಲ್ಲೂ ಮೈಸೂರಿನ ಮೂಡಾ ಹಗರಣವೇ ಸದ್ದು ಮಾಡುತ್ತಿದೆ.
ಅಲ್ಲಿ ಬರೀ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪತ್ನಿ ಹೆಸರಿನ ಮೇಲೆ ಸೈಟ್ ಇದೆ ಎನ್ನುವ ಕಾರಣಕ್ಕೆ ಅದು ಇಷ್ಟೊಂದು ಸುದ್ದಿ ಆಗುತ್ತಿದೆ.

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಬಸ್ ತಂಗುದಾಣವನ್ನು ವೀಕ್ಷಿಸುತ್ತಿರುವುದು
ಆದರೆ ಗಡಿನಾಡ ಬೆಳಗಾವಿಯಲ್ಲಿ ಮೈಸೂರಿನ ಮೂಡಾ ಹಗರಣವನ್ನು ಮೀರಿಸುವಷ್ಟು ಹಗರಣಗಳು ಸದ್ದು ಮಾಡುತ್ತಿದ್ದರೂ ಯಾರೊಬ್ಬರೂ ತುಟಿಪಿಟಕ್ಕೆನ್ನುತ್ತಿಲ್ಲ.. ಸ್ಮಾರ್ಟ ಲೋಪವನ್ನು ಪತ್ತೆ ಮಾಡಿ ವಿಚಾರಣೆಗೆ ಆದೇಶ ಮಾಡಬೇಕಾದವರು ಕೈಕಟ್ಟಿಕೊಂಡು ಕುಳಿತಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಹೀಗಾಗಿ ಸ್ಮಾರ್ಟ ಅಧಿಕಾರಿಗಳಿಗೆ ಆನೆ ನಡೆದಿದ್ದೆ ದಾರಿ ಎನ್ನುವಂತಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸ್ಮಾರ್ಟ ಕಾಮಗಾರಿ ಲೋಪ ಪತ್ತೆಯಾದ ಮೇಲೆ ಎಚ್ಚರಾಗುವ ಅಧಿಕಾರಿಗಳು ಅಲ್ಲೇ ತೇಪೆ ಹಚ್ಚುವ ಕೆಲಸ ಮಾಡುತ್ತಾರೇ ಹೊರತು ಅದರ ಗುಣಮಟ್ಟದ ಬಗ್ಗೆ ಆಳವಾದ ವಿಚಾರಣೆ, ತನಿಖೆಗೆ ಹೋಗದಿರುವುದು ಅನುಮಾನಕ್ಕೆ ಕಾರಣವಾಗಿದೆ

ಸಾಮಾಜಿಕ ಹೋರಾಟಗಾರ ಬಸ್ ನಿಲ್ದಾಣದ ಕುರಿತು ಅಪರ್ ಡಿಸಿಯವರಿಗೆ ಮನವಿ ಪತ್ರ ಅರ್ಪಿಸಿದರು.
ದಾಖಲೆಯಲ್ಲಿ ಮಾತ್ರ ಸ್ಮಾರ್ಟ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯ ಅಂದವನ್ನು ಒಳಬಗೆದರೆ ಬರೀ ಪೊಳ್ಳು ಕಾಣಿಸಿಕೊಳ್ಳುತ್ತಿದೆ.
ಇದೊಂದು ಉದಾಹರಣೆ ಅಷ್ಟೇ..
ಬೆಳಗಾವಿ ಸ್ಮಾರ್ಟ ಸಿಟಿ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಆದಾಗ್ಯೂ ಅವುಗಳನ್ನು ಪಾಲಿಜೆಗೆ ಹಸ್ತಾಂತರಿಸುವ ಕೆಲಸ ನಡೆಯುತ್ತಿದೆ. ಆದರೆ ಈಗ ಸ್ಮಾರ್ಟ್ ಸಿಟಿಯ ಕೆಲ ಕಳಪೆ ಕಾಮಗಾರಿಗಳಿಗೆ ಯಾರು ಹೊಣೆ ಎನ್ನುವ ಬಹುದೊಡ್ಡ ಪ್ರಶ್ನೆ ಬಹುತೇಕರನ್ಬು ಕಾಡುತ್ತಿದೆ
ಸಧ್ಯ ಹೇಗಾಗುತ್ತಿದೆ ಎಂದರೆ, ಸ್ಮಾರ್ಟ ಸಿಟಿ ಕಾಮಗಾರಿಗಳ ಬಗ್ಗೆ ಲೋಪವನ್ನು ಯಾರಾದರೂ ಪ್ರಸ್ತಾಪ ಮಾಡಿದರೆ ಅದಕ್ಕೆ ಅಲ್ಲಿಯೇ ತೇಪೆ ಹಚ್ಚುವ ಕೆಲಸ ಮಾಡಲಾಗುತ್ತದೆ. ಆದರೆ ಅಷ್ಟೊಂದು ಕಳಪೆ ಕಾಮಗಾರಿ ಮಾಡಿದವರ ಬಗ್ಗೆ ಕ್ರಮ ತೆಗೆದುಕೊಳ್ಳುವ ಕೆಲಸವನ್ನೂ ಯಾರೂ ಮಾಡುತ್ತಿಲ್ಲ.

ಇಲ್ಲಿ ಸಿಂಪಲ್ ಆಗಿ ಹೇಳಬೇಕೆಂದರೆ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬಳಿ ಸ್ಮಾರ್ಟ ಸಿಟಿಯ ಬಸ್ ತಂಗುದಾಣವಿದೆ. ಅದನ್ನು ಗಮನಿಸಿದರೆ ಅಬ್ಬಾ ಸ್ಮಾರ್ಟ ಸಿಟಿ ಕಾಮಗಾರಿಗಳು ಹೇಗಿರಬಹುದು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಇಲ್ಲಿ ಹೇಗಾಗಿದೆ ಅಂದರೆ ಶಾಸಕರು ಇಂತಹ ಕಳಪೆ ಬಗ್ಗೆ ಧ್ವನಿ ಎತ್ತುತ್ತಿದ್ದರೆ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಒಂದಿಷ್ಟು ಭಯ ಬರುತ್ತದೆ.ಆ ರೀತಿಯ ಭಯ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿದೆ. ಆದರೆ ಉತ್ತರ ಕ್ಷೇತ್ರದಲ್ಲಿ ಅಧಿಕಾರಿಗಳಿಗೆ ಅಂತಹ ಭಯ ಇಲ್ಲ. ಉತ್ತರ ಕ್ಷೇತ್ರದ ಶಾಸಕ ಆಸೀಫ್ ಶೇಠ ಮಾತು ಹೆಚ್ಚು ಆಡಲ್ಲ. ಅಧಿಕಾರಿಗಳು ಏನೇ ಸುಳ್ಳು ಸಮಜಾಯಿಷಿ ಕೊಟ್ಟರೂ ಅದನ್ನೇ ಸತ್ಯ ಎಂದು ನಂಬುತ್ತಾರೆ.

ಆದರೆ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರನ್ನು ಅಷ್ಟು ಸುಲಭವಾಗಿ ಯಾಮಾರಿಸಲು ಆಗಲ್ಲ ಎನ್ನುವುದು ವಾಸ್ತವ. ಏಕೆಂದರೆ ಅವರು ಹೇಳಿಕೊಳ್ಳುವಷ್ಡು ಸಂಭಾವಿತರಲ್ಲ. ಒರಟ. ಮಾತಿಗೆ ನಿಂತರೆ ಜಗ್ಗುವರಲ್ಲ.
ಇದೆಲ್ಲಕ್ಕಿಂತ ಮುಖ್ಯವಾಗಿ ಅವರು ಪ್ರತಿ ರವಿವಾರ ಸೈಕಲ್ ಫೇರಿ ಮಾಡುತ್ತಾರೆ. ಆಗ ದೂರು ಬಂದರೆ ಕಷ್ಟ ಎಂದು ಅಧಿಕಾರಿಗಳು ಎಚ್ಚರವಹಿಸುತ್ತಾರೆ. ಇದರರ್ಥ ಅಲ್ಲಿ ಕೂಡ ಎಲ್ಲವೂ ಸರಿಯಾಗಿದೆ ಅಂತಲ್ಲ. ಆದರೆ ಅಧಿಕಾರಿಗಳಿಗೆ ಭಯ ಮಾತ್ರ ಇದೆ.
ಅದೇನೇ ಆಆಗಲಿ ಬೆಳಗಾವಿ ಹೆಸರಿಗೆ ತಕ್ಕಂತೆ ಸ್ಮಾರ್ಟ ಆಗಬೇಕಿದೆ. ಕಾದು ನೋಡೋಣ.