ಬೆಳಗಾವಿ.
ಕಳೆದ ದಿನ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬುದ್ದಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಪ್ರಕರಣವನ್ನು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಹ ಗಂಭೀರವಾಗಿ ಪರಿಗಣಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತಾವು ಬೆಂಗಳೂರಿನ ಅಧಿವೇಶನದಲ್ಲಿದ್ದರೂ ಕೂಡ ತಮ್ಮ ಆಪ್ತರನ್ನು ಸಂತ್ರಸ್ತೆ ಮನೆಗೆ ಕಳಿಸಿ ಧೈರ್ಯ ತುಂಬುವ ಕೆಲಸ ಮಾಡಿದರು. ಅಷ್ಟೇ ಅಲ್ಕ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎನ್ಬುವ ಸಚಿವರ ಸಂದೇಶವನ್ನು ಅವರ ಆಪ್ತ ಮಲಗೌಡ ಪಾಟೀಲರು ಅಧಿಕಾರಿಗಳಿಗೆ ತಿಳಿಸಿದರು.
