ಬುದ್ಧಿಮಾಂದ್ಯ ಯುವತಿ ಮೇಲೆ ಯುವಕನಿಂದ ಅತ್ಯಾಚಾರ ಯತ್ನ..?
ಮೊಹರಮ್ ದಿನವೇ ನೀಚ ಕೆಲಸಕ್ಕೆ ಕೈ ಹಾಕಿದ್ದ ಕಡೋಲಿ ಯುವಕ..?
ಕಾಕತಿ ಠಾಣೆ, ಗ್ರಾಮದಲ್ಲಿ ಸೇರಿದ ಸೇರಿದ ಜನ; ಪ್ರಕರಣ ಭೇದಿಸಲು ಸ್ವತಃ ಸ್ಥಳಕ್ಕಾಗಮಿಸಿದ ಡಿಸಿಪಿ
ಬೆಳಗಾವಿ :
ತಾಲೂಕಿನ ಕಡೋಲಿ ಗ್ರಾಮದಲ್ಲಿ 20 ವರ್ಷಗಳ ಹಿಂದೆ ಆ ಕುಟುಂಬದಿಂದ ನಡೆದಿದ್ದ ಕೊಲೆಯಿಂದಾಗಿ ಅಂದು ನರಕಮಯವಾಗಿದ್ದ ಕಡೋಲಿ ಗ್ರಾಮದಲ್ಲಿ ಇಂದು ಮತ್ತದೇ ಕುಟುಂಬದ ಒರ್ವ ವ್ಯಕ್ತಿಯಿಂದಾಗಿ ಗ್ರಾಮದಲ್ಲಿ ಎರಡು ಕೊಮಿನ ಮಧ್ಯೆ ಉದ್ವೀಗ್ನ ಪರಿಸ್ಥಿತಿ ಉಂಟಾಗಿದೆ.

ಮೊಹರಮ್ ಹಬ್ಬದ ಸಂದರ್ಭದಲ್ಲಿ ಕಡೋಲಿ ಗ್ರಾಮದ ಆಜಾದ ಗಲ್ಲಿಯ ಯುವಕ ಸಮೀರ ಅಬ್ಬಾಸ್ ಧಾಮಣೆಕರ ಎಂಬಾತ ಬುಧವಾರ ಬುದ್ಧಿಮಾಂದ್ಯತೆ ಇರುವ ಯುವತಿಯನ್ನು ಕರೆದೊಯ್ದು ಅತ್ಯಾಚಾರ ಮಾಡಲು ಪ್ರಯತ್ನಿಸುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾನೆ.
ತಕ್ಷಣ ಆತನನ್ನು ಗ್ರಾಮಸ್ಥರು ಹಿಡಿದು ಕಾಕತಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಯುವಕನ ವಿರುಧ್ಧ ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನ್ಯಕೊಮಿನ ಯುವಕ ಮತ್ತೊಂದು ಕೊಮಿನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಕಡೋಲಿಯ ನೂರಾರು ಗ್ರಾಮಸ್ಥರು ಠಾಣೆಗೆ ಮುಂದೆ ಜಮಾಯಿಸಿದ್ದರಿಂದ ಸ್ವತಃ ಡಿಸಿಪಿ ಸ್ನೇಹಾ ಪಿ ವಿ ಠಾಣೆಗೆ ಧಾವಿಸಿದ್ದಾರೆ.