ಧಾರಾಕಾರ ಮಳೆಯಲ್ಲೂ ಬಿದ್ದ ಮರದ ಟೊಂಗೆ ತೆರವು

ಬೆಳಗಾವಿ ಚಿದಂಬರ ನಗರದಲ್ಲಿ ಬಿದ್ದ ಮರದ ದೊಡ್ಡ ಟೊಂಗೆ.

ಮಧ್ಯರಾತ್ರಿವರೆಗೂ ಮುಂದೆ ನಿಂತು ತೆರವುಗೊಳಿಸಿದ ನಗರಸೇವಕಿ ವಾಣಿ ಜೋಶಿ.

ಸುರಿಯುತ್ತಿರುವ ಮಳೆ ಲೆಕ್ಕಿಸದೇ ಮರ ತೆರವುಗೊಳಿಸಿದ ಪಾಲಿಕೆ ಸಿಬ್ಬಂದಿ.


ಬೆಳಗಾವಿ. ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಮರಗಳು ಬೀಖ ಮನನ ಳುವ ದೃಶ್ಯಗಳು ಸರ್ವೇ ಸಾಮಾನ್ಯ.
ಕಳೆದ ದಿನ ಸಂಜೆ ವಾರ್ಡ ನಂಬರ 43 ರಲ್ಲಿ ಬರುವ ಚಿದಂಬರ ನಗರದಲ್ಲಿ ಮರದ ದೊಡ್ಡ ಟೊಂಗೆಯೊಂದು ತುಂಡರಿಸಿ ಬಿದ್ದಿತು. ಈ ಸಂದರ್ಭದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.

ಇದರಿಂದ ಸಂಚಾರಕ್ಕೆ ತೊಂದರೆ ಕೂಡ ಆಗಿತ್ತು.
ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿಗಳ ಮೂಲಕ ರಾತ್ರಿ 12.30 ರವರೆಗೆ ಸ್ವತಃ ಮುಂದೆ ನಿಂತು ಅದರ ತೆರವು ಕಾರ್ಯವನ್ನು ನಗರಸೇವಕಿ ವಾಣಿ ಜೋಶಿ ಮಾಡಿದರು.


ಗಮನಿಸಬೇಕಾದ ಸಂಗತಿ ಎಂದರೆ, ಈ ಹಿಂದೆನೆ ಈ ಭಾಗದಲ್ಲಿ ಇಂತಹ ಪೊಳ್ಳು ಮರವನ್ನು ತೆಗೆಯಬೇಕೆಂದು‌ ನಗರಸೇವಕರು ಅಲ್ಲಿನ‌ ನಿವಾಸಿಗಳು ಮನವಿ ಮಾಡಿದ್ದರು.

ಇಲ್ಲಿ ಅರಣ್ಯ ಇಲಾಖೆಯವರು ಅಂತಹ ಮರಗಳನ್ನು ಪಟ್ಟಿ ಮಾಡಿದರೂ ಕೂಡ ತೆರವು ಕಾರ್ಯಾಚರಣೆ ಮಾಡಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!