Headlines

ಡೇಂಘೀ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ- ಸಂಸದ ಕಡಾಡಿ

ಬೆಳಗಾವಿ: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಆರೋಗ್ಯಾಧಿಕಾರಿಗಳು ಮುನ್ನೆಚ್ಚರಿಕಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಬೆಳಗಾವಿ: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಕಾರಣ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಆದರೆ ಆರೋಗ್ಯ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಜನರು ಕೂಡಾ ಇಲಾಖೆ ನೀಡಿದ ಸೂಚನೆಗಳನ್ನು ಪಾಲಿಸುವ ಮೂಲಕ ಡೆಂಗ್ಯೂ ಪ್ರಮಾಣದ ಸಂಖ್ಯೆಯನ್ನು ಕಡಿಮೆ ಮಾಡಬಹುದು…

Read More

ಏಕ ಪೇಡ್, ಮಾ ಕೆ ನಾಮ”

ಗಿಡ- ಮರಗಳನ್ನು ಉಳಿಸಿ- ಬೆಳೆಸಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಏಕ ಪೇಡ್ ಮಾ ಕೆ ನಾಮ ವನ ಮಹೋತ್ಸವ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ-.. ಅರಣ್ಯ ಉಳಿಯಬೇಕಾದರೆ ಗಿಡ- ಮರಗಳನ್ನು ನೆಟ್ಟು ಅರಣ್ಯವನ್ನು ಬೆಳೆಸಬೇಕೆಂದು ಅರಭಾವಿ ಶಾಸಕ, ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಮ್ಮ ತಾಯಿಯ ಸ್ಮರಣಾರ್ಥವಾಗಿನಗರದ ಎನ್ಎಸ್ಎಫ್ ಆವರಣದಲ್ಲಿ “ಏಕ ಪೇಡ್ ಮಾ ಕೆ ನಾಮ” ಅಭಿಯಾನದ ನಿಮಿತ್ತ ವನ ಮಹೋತ್ಸವಕಾರ್ಯಕ್ರಮಕ್ಕೆ…

Read More

ಬೂಡಾ ಸದಸ್ಯರಾಗಿ ಕೊಂಗಾಲಿ ನೇಮಕ

ಬೆಳಗಾವಿ. ಮಹಾನಗರ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ ಅವರನ್ನು ಬೂಡಾಕ್ಕೆ ನಾಮನಿರ್ದೇಶನ ಸದಸ್ತರನ್ನಾಗಿ ಸರ್ಕಾರ ನೇಮಕ‌ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇವರನ್ನು ನಾಮನಿರ್ದೇಶನ ಸದಸ್ಯ ರನ್ನಾಗಿ ನೇಮಕ ಮಾಡುವ ಠರಾವ್ ಸ್ವೀಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ನೇಮಕ ಮಾಡಿ ಆದೇಶ ಹೊರಡಿಸಿದೆ.

Read More

ಸಹಕಾರ ಸಂಘಗಳು ರೈತರ ಜೀವನಾಡಿ: ಸಂಸದೆ ಪ್ರಿಯಂಕಾ

ಸಹಕಾರ ಸಂಘಗಳು ರೈತರ ಜೀವನಾಡಿ: ಸಂಸದೆ ಪ್ರಿಯಂಕಾ ಜಾರಕಿಹೊಳಿ ಯಮಕನಮರಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು. ಯಮಕನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಉಗ್ರಾಣ ಮತ್ತು ರೈತ ಸೇವಾ ಕೇಂದ್ರದ ಕಟ್ಟಡಗಳನ್ನು ಗಣ್ಯರೊಂದಿಗೆ ಉದ್ಘಾಟಿಸಿ, ಸನ್ಮನ ಸ್ವೀಕರಿಸಿ ಮಾತನಾಡಿದ ಅವರು, ಸಂಘದ ಸರ್ವ ಸದಸ್ಯರ, ರೈತರ ಪ್ರಯತ್ನದಿಂದ ಯಮಕನಮರಡಿ ಪ್ರಾಥಮಿಕ ಕೃಷಿ ಪತ್ತಿನ…

Read More

ಶಾಲಾ ಕೊಠಡಿ ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ತಿಮ್ಮಾಪೂರ ಗ್ರಾಮದ ಮಬನೂರ ತೋಟದಲ್ಲಿ ವಿವೇಕ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ, ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೂಡಲಗಿ- ಸರಕಾರಿ ಶಾಲೆಗಳಲ್ಲಿನ ಶಾಲಾ ಕೊಠಡಿಗಳ ಕೊರತೆಯನ್ನು ನೀಗಿಸಲು ವಿವೇಕ ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದು, ಇದಕ್ಕಾಗಿ ಒಟ್ಟು ೪೮.೩೬ ಲಕ್ಷ.ರೂ. ವಿನಿಯೋಗಿಸಲಾಗಿದೆ ಎಂದು ಶಾಸಕ ಮತ್ತು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಕಳೆದ ಸೋಮವಾರದಂದು ತಿಮ್ಮಾಪೂರ ಗ್ರಾಮದ ಮಬನೂರ ತೋಟದ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿವೇಕ…

Read More

ಸ್ಮಶಾನದಲ್ಲೇ ಸಾವು..!

ಬೆಳಗಾವಿ. ವ್ಯಕ್ತಿ ಸತ್ತ ಮೇಲೆ ಸ್ಮಶಾನಕ್ಕೆ ಶವವನ್ನು ತರುವುದು ಸಹಜ.ಆದರೆ ಸ್ಮಶಾನದಲ್ಲಿಯೇ ನಿದ್ರಿಸಿ‌ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆವಾನಗೋಳ ಸ್ಮಶಾನದಲ್ಲಿ ಬೆಳಕಿಗೆ ಬಂದಿದೆ. ಅನಗೋಳ ವಿದ್ಯಾನಗರದ ನಿವಾಸಿ ಕಿಶನ್ ಪವಾರ ಎಂಬಾತ ಕಳೆಷ ದಿನ ಅನಗೋಳ ಚಿದಂಬರ ನಗರದಲ್ಲಿರುವ ಸ್ಮಶಾನಜ್ಕೆ ಬಂದಿದ್ದನು. ಆದರೆ ಆತ ಅಲ್ಲಿಯೇ ಮಲಗಿದ್ದಾಗಲೇ ಪ್ರಾಣಪಕ್ಷಿ ಹಾಅರಿ ಹೋಗಿದೆ‌ ಸ್ಮಶಾನದಲ್ಕಿಯೇ ವ್ಯಕ್ತಿ ಮೃತಪಟ್ಟ ಸುದ್ದಿ ತಿಳಿದ ತಕ್ಷಣ ಉದ್ಯಮಬಾಗಬಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೊದಲು ಶವ ಯಾರದ್ದು ಎನ್ನುವುದು ಪೊಲೀಸರಿಗೆ ಗೊತ್ತಾಗಲಿಲ್ಲ. ನಙತರ ಶವದ ಪೊಟೊ ಹಾಕಿದಾಗ…

Read More

ಡೆಂಘೀಗೆ ಅರಣ್ಯ ಇಲಾಖೆನೇ ಕಾರಣ?

ಬೆಳಗಾವಿ‌ ವಾರ್ಡ‌ ನಂಬರ 43 ರ ಚಿದಂಬರ ನಗರದಲ್ಲಿ ದೊಡ್ಡ ಮರಗಳ ಕಡಿತ. ಕಡಿತಗೊಂಡ ಮರಗಳ ಟೊಂಗೆಗಳನ್ನು ತೆಗೆದುಕೊಂಡು ಹೋಗದ ಅರಣ್ಯ ಇಲಾಖೆ . ಈಗ ಮಳೆಯಲ್ಲಿ ಕೊಳೆತಿರುವ ಎಲೆಗಳು. ಡೇಂಘಿ ಭೀತಿಯಲ್ಲಿ ನಗರ ನಿವಾಸಿಗಳು. ನಗರಸೇವಕಿ ವಾಣಿ ಜೋಶಿ ಮನವಿಯನ್ನು ಲೆಕ್ಕಿಸದ ಅರಣ್ಯ ಇಲಾಖೆ. ಇವತ್ತು ಕಸ ಎತ್ತದಿದ್ದರೆ ಅದನ್ನು ಅರಣ್ಯ ಇಲಾಖೆ ಮುಂದೆ ಹಾಕುವ ಬೆದರಿಕೆ ಹಾಕಿದ ನಗರಸೇವಕಿ ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಮೊದಲೇ ಡೇಂಘೀ ಹಾವಳಿ ಜಾಸ್ತಿಯಾಗಿದೆ. ಮಹಾನಗರ ಪಾಲಿಕೆ ಸ್ವಚ್ಚತೆ ದೃಷ್ಟಿಯಿಂದ…

Read More

ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ಬದ್ಧ..!

ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟನಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಧನ ಚೆಕ್ ವಿತರಣೆ. ಬೆಳಗಾವಿ ಉದ್ಯಮಬಾಗದ ಫೌಂಡ್ರಿ ಕ್ಲಸ್ಟರ್ ನಲ್ಲಿಂದು ನಡೆದ ಸರಳ ಕಾರ್ಯಕ್ರಮ. ರಾಮ ಭಂಡಾರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಬೆಳಗಾವಿ.ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳ ನೆರವಿಗೆ ಬದ್ಧ ಎಂದು ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ ಹೇಳಿದರು.ನಗರದ ಉದ್ಯಮಬಾಗದಲ್ಲಿರುವ ಫೌಂಡ್ರಿ ಕ್ಲಸ್ಟರ್ ನಲ್ಲಿ ಟ್ರಸ್ಟ್ ವತಿಯಿಂದ ಆಯೋಜಿಸಿದ ಬ್ರಾಹ್ಮಣ‌ ಸಮಾಜದ ವಿದ್ಯಾರ್ಥಿಗಳಿಗೆ ಧನ ಸಹಾಯದ ಚೆಕ್ ವಿತರಿಸಿ ಅವರು ಮಾತನಾಡಿದರು….

Read More

ವಾರ್ತಾ ಇಲಾಖೆ ಆಯುಕ್ತರಾಗಿ ನಿಂಬಾಳ್ಕರ..!

ಬೆಂಗಳೂರು. : ಸ್ಥಳ ನಿರೀಕ್ಷೆಯಲ್ಲಿದ್ದ ಹಿರಿಯ ಐಪಿಎಸ್‌‍ ಅಧಿಕಾರಿ ಹಾಗೂ ಎಡಿಜಿಪಿ ಹೇಮಂತ್‌ ಎಂ.ನಿಂಬಾಳ್ಕರ್‌ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಹ್ದುೆಗೆ ಸರ್ಕಾರ ವರ್ಗಾವಣೆ ಮಾಡಿದ್ದು, ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಹಾಲಿ ಆಯುಕ್ತರಾಗಿದ್ದ ಐಎಎಸ್‌‍ ಅಧಿಕಾರಿ ಸೂರಳ್ಕರ್‌ ವಿಕಾಸ್‌‍ ಕಿಶೋರ್‌ ಅವರನ್ನು ಬೆಂಗಳೂರು ಬಿಬಿಎಂಪಿ ವಿಶೇಷ ಆಯುಕ್ತರು (ಆರೋಗ್ಯ) ಹುದ್ದೆಗೆ ಸರ್ಕಾರ ವರ್ಗಾವಣೆ ಮಾಡಿದೆ. ಈ ಹಿಂದೆ ಕೂಡ ಹೇಮಂತ್‌ ಎಂ.ನಿಂಬಾಳ್ಕರ್‌ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿದ್ದರು. ಈ…

Read More
error: Content is protected !!