ಚಿಕ್ಕೋಡಿ: ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಗೆ ಹಾರಿ ವ್ಯಕ್ತಿವೂರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಅಂಕಲಿ- ನಸಲಾಪೂರ ಗ್ರಾಮದ ಸೇತುವೆ ಬಳಿ ನಡೆದಿದೆ.

ರಾಯಬಾಗ್ ತಾಲೂಕಿನ ಬಾವಾನ ಸೌಂದತ್ತಿ ಗ್ರಾಮದ ಬಾಬುರಾವ ಸಂಭಾಜಿ ಭಾಸ್ಕರ ( 40) ಎಂದು ತಿಳಿದುಬಂದಿದೆ. ಅಂಕಲಿ ಹಾಗೂ ನಸಲಾಪೂರ ಗ್ರಾಮಗಳ ಮಧ್ಯೆ ನಿರ್ಮಿಸಲಾಗಿರುವಂತಹ ಸೇತುವೆ ಮೇಲೆ ನಿಂತು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.