ಸಂಸದ ಜಗದೀಶ್ ಶೆಟ್ಟರ್ ಮನವಿ
ಕೇಂದ್ರ ಸಚಿವರಿಗೆ ಪತ್ರ ಕೊಟ್ಟ ಸಂಸದ , ಶೆಟ್ಡರ್ ಮನವಿಗೆ ಸ್ಪಂದಿಸಿದ ಸಚಿವರು
ಬೆಳಗಾವಿ ಜಿಲ್ಲೆಯಲ್ಲಿ “ಕೃಷಿ ಸಿಂಚಾಯಿ ಯೋಜನೆ” ( ಹರ ಖೇತ ಕೋ ಪಾನಿ HKKP – SMI ) ಯೋಜನೆಯಡಿ ಕಾಮಗಾರಿಗಳ ಪ್ರಾರಂಭಕ್ಕೆ ತಯಾರಿಸಿದ ಸುಮಾರು ರೂ.122.75 ಕೋಟಿ ಅಂದಾಜು ಮೊತ್ತದ ಪ್ರಸ್ತಾವನೆಗೆ ಅನುಮೋದನೆ ಕೋರಿ ರಾಜ್ಯ ಸರ್ಕಾರವು ಈಗಾಗಲೇ ಕೇಂದ್ರ ಜಲ ಶಕ್ತಿ ಸಚಿವಾಲಯಕ್ಕೆ ಮನವಿ ಕಳುಹಿಸಿದ್ದು, ಅದಕ್ಕೆ ಶೀಘ್ರ ಅನುಮೋದನೆ ಸೂಚಿಸುವಂತೆ ಕೋರಿ ಬೆಳಗಾವಿ ಲೋಕಸಭಾ ಸಂಸದ ಜಗದೀಶ್ ಶೆಟ್ಟರ್ ಅವರು ಕೇಂದ್ರ ಜಲ ಶಕ್ತಿ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಇವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ಮನವಿ ಅರ್ಪಿಸಿ,ದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಅದರಂತೆ ಪ್ರಸ್ತಾಪಿತ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ದೊರೆಯುವ ಭರವಸೆ ಇದೆ ಎಂದು ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.