Headlines

ನೊಂದ ಕುಟುಂಬಕ್ಕೆ ಧೈರ್ಯ ತುಂಬಿದ ಜಾರಕಿಹೊಳಿ

ಬೆಳಗಾವಿ.

ನಾವಗೆ ಗ್ರಾಮದ ಕಾರ್ಖಾನೆಯ ಬೆಂಕಿ ಅವಘಸದಲ್ಲಿ ಪುತ್ರನನ್ನು‌ಕಡದುಕೊಂಡ ಕುಟುಂಬಕ್ಕೆ ಸಾಂತ್ವನದ ಜೊತೆಗೆ ಧೈರ್ಯ ತುಂಬುವ ಕೆಲಸವನ್ಬು ರಾಹುಲ್ ಜಾರಕಿಹೊಳಿ ಮಾಡಿದರು.

ರಾಜಕೀಯವಾಗಿ ಯಾವುದೇ ಅಧಿಕಾರದಲ್ಲಿ ಇರದಿದ್ದರೂ ಕೂಡ ನೊಂದವರ ಮನೆ ಬಾಗಿಲಿಗೆ ಹೋಗಿ ಸಾಂತ್ನನದ ಜೊತೆಗೆ ಧೈರ್ಯ ತುಂಬುವ ಕೆಲಸವನ್ಬು ಸಚಿವ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಮಾಡುತ್ತಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಬೆಂಕಿ ದುರಂತದಲ್ಲಿ ಮೃತಪಟ್ಟ ಯುವಕನ ಮನೆಗೆ ಭೆಟ್ಟಿ ನೀಡಿದ ರಾಹುಲ್ ಜಾರಕಿಹೊಳಿ ಕುಟುಂಬದ ಸದಸ್ಯರ ಜೊತೆ ಮಾತುಕತೆ ಮಾಡಿದರು.

ಅಷ್ಟೆ ಅಲ್ಲ ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆಯಿಲ್ಲ. ನಿಮ್ಮ‌ದುಃಖದಲ್ಲಿ ನಾವೂ ಸಹಭಾಗಿಯಾಗುತ್ತೇವೆ. ಮತ್ತು ಎಲ್ಲ ರೀತಿಯ ನೆರವಿನ ಹಸ್ತ ಚಾಚುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ‌ಪಂಚಾಯತಿ ಅಧ್ಯಕ್ಷ ಸುರೇಶ ಗವನ್ನವರ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!