20 ಕೋಟಿ ರೂ ಪಾವತಿಗೆ ಸಮ್ನತಿ ಕೊಟ್ಟ ಮೇಯರ್. ಇನ್ನೂ 150 ಕೋಟಿ ರೂ. ಪಾವತಿ ಬರಬಹುದು ಎಂದ ಶಾಸಕ ಆಸೀಫ್ ಶೇಠ್.
ಆಗ ಏನ್ ಮಾಡ್ತೀರಿ ಎಂದು ಪ್ರಶ್ನೆ ದಿವಾಳಿ ಆಗೊದು ಗ್ಯಾರಂಟಿ ಎಂದ ವಿರೋಧ ಪಕ್ಷ.
ಅಡ್ಜೆಸ್ಟ್ ಮಾಡಿಕೊಂಡು ಹೋಗೊಣು ಎಂದ ಆಡಳಿತ ಗುಂಪಿನ ನಾಯಕರು.
ಇನ್ನೂ ಆರು ನ್ಯಾಯಾಂಗ ನಿಂದನೆ ಕೇಸ್ ಭೀತಿಯಲ್ಲಿ ಪಾಲಿಕೆ.
ಅಧಿಕಾರಿಗಳ ತಪ್ಪಿಗೆ ನಗರಸೇವಕರು ಹೈರಾಣ
ಪಾಲಿಕೆಯಲ್ಲಿ ತಾಳ ಮೇಳವಿಲ್ಲದ ಆಡಳಿತ.
ಆಡಳಿತ ಗುಂಪಿಗೆ ವಿರೋಧಿಗಳೇ ಬೇಡ.
ವಿರೋಧಿ ಪಕ್ದದ ನಾಯಕರ ಒಳ ಒಪ್ಪಂದ.
ಅಭಿವೃದ್ಧಿ ಮರೆತ ಪಾಲಿಕೆ.
ಶಿಷ್ಟಾಚಾರ ಮಾತಾಡುವವರೇ ಅದನ್ನು ಮರೆತರಾ?
ಶಾಸಕರ ಮೌನ ದುರುಪಯೋಗ ಪಡಿಸಿಕೊಂಡರಾ ಬಿಜೆಪಿ ಕೆಲ ನಗರಸೇವಕರು?
ರೆವಿನ್ಯೂ ವಸೂಲಿಯಾದರೆ ಸಂಬಳ…ಅಭಿವೃದ್ಧಿ ಸ್ಥಗಿತ ಭೀತಿ
ಬೆಳಗಾವಿ.
ಒಂದಾನೊಂದು ಕಾಲದಲ್ಲಿ ಶ್ರೀಮಂತ ಎಂದು ಹೆಸರುಗಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಈಗ ದಿವಾಳಿ ಅಂಚಿಗೆ ಬಂದು ನಿಂತಿದೆಯೇ?
ಭೂ ಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಕೋಟಿ ಪರಿಹಾರ ಪಾವತಿಸಲು ನ್ಯಾಯಾಂಗ ನಿಂದನೆ ಭೀತಿ ಎದುರಿಸುತ್ತಿರುವ ಪಾಲಿಕೆಯಲ್ಲಿ ಕಳೆದ ದಿನ ವಿಶೇಷ ಸಭೆಯನ್ನು ಕರೆಯಲಾಗಿತ್ತು.
ಅಂತಹ ಸಭೆಯಲ್ಲಿ ಇಪ್ಪತ್ತು ಕೋಟಿ ರೂ.ವನ್ನು ಕೊಡಬೇಕೋ ಅಥವಾ ಬೇಡವೋ ಎನ್ನುವುದರ ಬಗ್ಗೆ ಚರ್ಚೆ ಮಾಡಬೇಕಿತ್ತು. ಕೊಡುವುದಾದರೆ ಯಾವ ರೀತಿ ಕೊಡಬೇಕು. ಕೊಡದಿದ್ದರೆ ಮುಂದಿನ ನಡೆ ಹೇಗಿರಬೇಕು ಎನ್ನುವುದು ಚರ್ಚೆಯ ವಸ್ತುವಾಗಿರಬೇಕಿತ್ತು.
ಆದರೆ ಆಡಳಿತ ಪಕ್ಷದ ಕೆಲವರು ಅತೀ ಬುದ್ದಿವಂತಿಕೆ ತೋರಿಸುವ ಉದ್ದೇಶದಿಂದ ಆ ರಸ್ತೆ ಯಾವಾಗ ಮಾಡಿದ್ದು, ಎನ್ನುವುದು ಸೇರಿದಂತೆ ಅದರ ಹಿನ್ನೆಲೆಯನ್ನು ಕೆದಕಿ ವಿರೋಧಿ ಪಕ್ಷದವರಿಗೆ ಚರ್ಚೆಗೆ ಆಹಾರವನ್ನು ಒದಗಿಸಿಕೊಟ್ಟರು. ಮೂಲಗಳ ಪ್ರಕಾರ ಉದ್ದೇಶಪೂರ್ವಕವಾಗಿಯೇ ಆಡಳಿತ ಗುಂಪಿನ ಕೆಲವರು ವಿರೋಧಿಗಳಿಗೆ ಮಾತನಾಡುವಂತೆ ಪ್ರೆರೇಪಿಸಿದ್ದು ಉಂಟು.
ಹೀಗಾಗಿ ಅರ್ಧ ತಾಸಿನೊಳಗೆ ಮುಗಿಯಬೇಕಾದ ವಿಶೇಷ ಸಭೆ ಬರೊಬ್ಬರಿ 8 ತಾಸು ನಡೆಯಿತು.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಪರರಿಗೆ ಶಿಷ್ಟಾಚಾರದ ಬಗ್ಗೆ ಉಪದೇಶ ಮಾಡುವವರೇ ಅದನ್ನು ಉಲ್ಲಂಘಿಸಿದ್ದು ಈ ಸಭೆಯಲ್ಲಿ ಸ್ಪಷ್ಟವಾಗಿ ಕಂಡು ಬಂದಿತು..
ತಾಳಮೇಳವಿಲ್ಲ..!
ಕಳೆದ ದಿನ ನಡೆದ ಒಟ್ಟಾರೆ ಸಭೆ ನಡೆದ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಡಳಿತ ಮತ್ತು ವಿರೋಧ ಪಕ್ಷದಲ್ಲಿ ತಾಳಮೇಳವಿಲ್ಲ ಎನ್ನುವುದು ಸ್ಪಷ್ಟವಾಯಿತು.
ಇಲ್ಲಿ ಹೇಗಾಗುತ್ತಿದೆ ಎಂದರೆ, ಆಡಳಿತದ ಗುಂಪಿನ ಕೆಲವರೇ ತಮ್ಮ ಪಕ್ಷದಲ್ಲಿನ ಲೋಪವನ್ನು ವಿರೋಧಿಗಳಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅತ್ತ ವಿರೋಧಿ ಗುಂಪಿನ ಕೆಕವರು ಆಡಳಿತ ಗುಂಪಿನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಬಿಟ್ಟಿದ್ದಾರೆ.
ಹೀಗಾಗಿ ಆಯಾ ಶಾಸಕರ ವರ್ಚಸ್ಸಿಗೆ ಎಷ್ಟು ಧಕ್ಕೆ ತರಬೇಕೋ ಅದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟ.
ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಬಿಜೆಪಿ ಮೇಯರ್ ಎನಿಸಿಕೊಂಡವರು ಈಗ ಬಿಜೆಪಿಯವರ ಮಾತನ್ನು ಹೆಚ್ಚಿಗೆ ಕೇಳುತ್ತಿಲ್ಲವಂತೆ. ಶಾಸಕರು ನೇಮಿಸಿದ ಸಮನ್ವಯ ಸಮಿತಿ ತೆಗೆದುಕೊಳ್ಖುವ ನಿರ್ಧಾರವನ್ನೇ ಪ್ರಶ್ನೆ ಮಾಡುತ್ತಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.
ದಿವಾಳಿ ದಿವಾಳಿ ದಿವಾಳಿ.
ಬೆಳಗಾವಿ ಮಹಾನಗರ ಪಾಲಿಕೆ ಈಗ ದಿವಾಳಿ ಹಂತಕ್ಕೆ ಬಂದು ನಿಂತಿದೆ.
ಹೈಕೋರ್ಟ ನಿರ್ದೇಶನದಂತೆ 20 ಕೋಟಿ ರೂ ಪಾವತಿಸುವ ನಿರ್ಧಾರ ಮಾಡಿರುವ ಮಹಾನಗರ ಪಾಲಿಕೆ ಹತ್ತಿರ ಈಗ ಬರೊಬ್ಬರಿ ಸುಮಾರು 39 ಕೋಟಿ ರೂ ಬಾಕಿ ಇದೆ.
ಅದರಲ್ಲಿ 20 ಕೋಟಿ ರೂ ಪಾವತಿಸಿದರೆ 19 ಕೋಟಿ ರೂ ಉಳಿಯುತ್ತದೆ. ಅದರಲ್ಲಿ ಟೆಂಡರ್ ಕರೆದ ಕಾಮಗಾರಿಗೆ 9 ಕೋಟಿ ಬೇಕು.ಇನ್ನೂ ಹತ್ತು ಕೋಟಿ ಕಾಮಗಾರಿ ಟೆಙಡರ್ ಕರೆಯಬೇಕಿದೆ. ಇನ್ನು ಪಾಲಿಕೆಗೆ ತಿಂಗಳು 8 ಕೋಟಿ ಬೇಕು. ಹೀಗಾದರೆ ಪಾಲಿಕೆ ದಿವಾಳಿ ಗ್ಯಾರಂಟಿ..
ಈಗ ಬೆಳಗಾವಿ ಪಾಲಿಕೆ ಆದಾಯ ಹೆಚ್ಚಿಗೆ ಮಾಡುವತ್ತ ಗಮನಹರಿಸಬೇಕಾದ ಆಡಳಿತ ಮತ್ತು ವಿರೋಧ ಪಕ್ಷದವರು ಏನು ಮಾಡುತ್ತಾರೆ? ಯಾವ ದಿಕ್ಕಿನತ್ತ ಹೋಗುತ್ತಾರೆ ಎನ್ನುವುದನ್ನು ಬೆಳಗಾವಿಗರು ಕುತೂಹಲದಿಂದ ಕಾದು ನೋಡುತ್ತಿದ್ದಾರೆ.