BUDA COMMISSIONER ವಿರುದ್ಧ ಹಕ್ಕುಚ್ಯುತಿಗೆ ಮನವಿ

ಬೆಳಗಾವಿಯಲ್ಲಿ ನಿಲ್ಲದ ರಾಜಕೀಯ ಸಮರ
`ಬೂಡಾ ಆಯುಕ್ತರ ವಿರುದ್ಧ ಹಕ್ಕುಚ್ಯುತಿಗೆ ಪತ್ರ’

ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ಮಳೆ ನಿಂತರೂ ಹನಿ ನೀರು ನಿಲ್ಲಲಿಲ್ಲ ಎನ್ನುವಂತೆ ಪಾಲಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಜಟಾಪಟಿ ನಿಲ್ಲುವ ಲಕ್ಷಣಗಳು ಕಾಣಸಿಗುತ್ತಿಲ್ಲ.
ವಾರ್ಡ ನಂಬರ 46 ರಲ್ಲಿ ಬರುವ ರಾಮತೀರ್ಥ ನಗರದಲ್ಲಿ ಬೀದಿ ದೀಪಗಳ ಮರು ಉದ್ಘಾಟನೆ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸದೇ ಹಕ್ಕುಚ್ಯುತಿ ಮಾಡಲಾಗಿದೆ. ಆದ್ದರಿಂದ ಬೂಡಾ ಆಯುಕ್ತರ ವಿರುದ್ಧ ಹಕ್ಕು ಚ್ಯುತಿ ಮಂಡಿಸಲು ನಗರಸೇವಕರೂ ಆಗಿರುವ ಬೂಡಾ ನಾಮನಿರ್ದೇಶಿತ ಸದಸ್ಯ ಹನುಮಂತ ಕೊಂಗಾಲಿ ಬೂಡಾ ಅಧ್ಯಕ್ಷರಿಗೆ ಪತ್ರವನ್ಮು ನೀಡಿದ್ದಾರೆ,


ಬೂಡಾ ಪ್ರಾಧಿಕಾರದ ಅಡಿಯಲ್ಲಿ ಬರುವ ರಾಮತೀರ್ಥ ನಗರದ ಗಣೇಶ ವೃತ್ತ ಮತ್ತು ಬಸವೇಶ್ವರ ಬಡಾವಣೆಯಲ್ಲಿ 2023 ರಲ್ಲಿಯೇ ಅಲಂಕಾರಿಕ ಬೀದಿ ದೀಪಗಳನ್ನು ಉದ್ಘಾಟನೆ ಮಾಡಲಾಗಿತ್ತು, ಹಿಂದಿನ ಶಾಸಕರು ಮತ್ತು ಖುದ್ದು ನಾನೂ ಭಾಗಿಯಾಗಿದ್ದೆ.


ಆದರೆ ಈಗಿನ ಕಾಂಗ್ರೆಸ್ ಶಾಸಕ ಆಸೀಫ್ ಶೇಠರು ಈಗ ಮತ್ತೇ ಅದೇ ಬೀದಿದೀಪವನ್ನು ಉದ್ಘಾಟನೆ ಮಾಡಿದ್ದಾರೆ, ಆದರೆ ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ. ನಾನು ನಗರಸೇವಕ ಅಷ್ಟೇ ಅಲ್ಲ ಬೂಡಾ ನಾಮನಿದರ್ೇಶಿತ ಸದಸ್ಯನಿದ್ದರೂ ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲ ಎಂದು ಕೊಂಗಾಲಿ ಅವರು ಬೂಡಾ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ,

ಇಲ್ಲಿ ಬೂಡಾ ಆಯುಕ್ತರು ಮತ್ತು ಸಂಬಂಧಿಸಿದ ಅಧಿಕಾರಿಗಳ ಕ್ರಮದಿಂದ ನನಗೆ ವೈಯಕ್ತಿಕ ನೋವಾಗಿದ್ದಲ್ಲದೇ ಸ್ವಾಭಿಮಾನಕ್ಕೂ ಧಕ್ಕೆ ತಂದಿದೆ, ಇದು ಶಿಷ್ಟಾಚಾರ ಉಲ್ಲಂಘನೆ ಕೂಡ ಆಗಿದ್ದರಿಂದ ಮುಂದಿನ ಪ್ರಾಧಿಕಾರದ ಸಭೆಯಲ್ಲಿ ಇದನ್ನುಮಂಡಿಸಲು ಅನುಮತಿ ನೀಡಬೇಕೆಂದು ಹನುಮಂತ ಕೊಂಗಾಲಿ ಪತ್ರದಲ್ಲಿ ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!