ಬೆಳಗಾವಿ:
ನೇಕಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳೇಭಾವಿಯಲ್ಲಿ ನಡೆದಿದೆ.
ವಾಡೇಗಲ್ಲಿಯ ಪರಶುರಾಮ ಕಲ್ಲಪ್ಪ ವಾಗೂಕರ(47) ಆತ್ಮಹತ್ಯೆ ಮಾಡಿಕೊಂಡ ನೇಕಾರ ಎಂದು ಗೊತ್ತಾಗಿದೆ. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ನೇಕಾರಿಕೆಗೆ ಅವರು ಸಾಲ ಮಾಡಿದ್ದರು. ಆದರೆ, ನೇಕಾರಿಕೆಯಲ್ಲಿ ನಷ್ಟ ಆಗಿದೆ. ಇದರಿಂದ ತೀವ್ರ ಬೇಸರಗೊಂಡಿದ್ದರು. ಪತ್ನಿ ಮತ್ತು ಪುತ್ರಿ ಬೆಳಗಾವಿಗೆ ಹೋಗಿದ್ದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಈ ಸಂದರ್ಭದಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.