‘ ಬೆಳಗಾವಿ: ವಚನ ದರ್ಶನ ಪುಸ್ತಕವನ್ನು ರಾಜ್ಯ ಸಕರ್ಾರವುಯ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ರಾಮದುರ್ಗ ತಾಲೂಕಿನ ಬಸವಾಶ್ರಮ ಮಠದ ಕಾರ್ಯದಶರ್ಿ ನಿವೇದಿತಾ ಆಗ್ರಹಿಸಿದರು. ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಬಸವಣ್ಣನವರು
ಬ್ರಾಹ್ಮಣ’ ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ವಚನದರ್ಶನ ಪುಸ್ತಕದಲ್ಲಿ ಬಸವಣ್ಣನವರ ವ್ಯಕ್ತಿತ್ವ ತಿರುಚುವ ಕೆಲಸ ಮಾಡಲಾಗಿದೆ ಎಂದರು.
ಶರಣರು, ಬಸವಾದಿ ಪ್ರಮುಖರು ಯಾವುದೇ ವೈದಿಕ ಪರಂಪರೆ ನಂಬಿಲ್ಲ, ಬೆಂಬಲಿಸಿಲ್ಲ. ವೈದಿಕ ಪರಂಪರೆಯನ್ನು ಬಸವಣ್ಣನವರು ವಿರೋಧ ಮಾಡುತ್ತಲೇ ಬಂದಿದ್ದಾರೆ. ಹೋಮ-ಹವನ, ಬಲಿ ಕೊಡುವುದನ್ನು ಬಸವಣ್ಣ ವಿರೋಧ ಮಾಡಿದ್ದರು ಎಂದು ಹೇಳಿದರು,

ಇಷ್ಟಲಿಂಗ ಅವಿಷ್ಕಾರ ಮಾಡಿ ಲಿಂಗಾಯತ ಧರ್ಮ ಕಟ್ಟಿರುವುದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಬಸವಣ್ಣ ವೈದಿಕತೆ ಒಪ್ಪಿದ್ದರೂ ಕೂಡ ವೇದ ಉಪನಿಷತ್ತು ವಿರೋಧ ಮಾಡಿಲ್ಲ ಎಂದು ಈ ಪುಸ್ತಕದಲ್ಲಿ ಬಿಂಬಿಸಲಾಗುತ್ತಿದೆ. ಲಿಂಗಾಯತರನ್ನು ಒಡೆದು ಆಳುವ ನೀತಿಯನ್ನು ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಲಿಂಗಾಯತರು ಹಿಂದೂಗಳಲ್ಲ ಎನ್ನುವುದನ್ನು ಯಾವ ಲಿಂಗಾಯತರು ಒಪ್ಪುವುದಿಲ್ಲ. ಹಿಂದೂ ಧರ್ಮ ಎನ್ನುವುದು ಎಷ್ಟು ಸರಿ ನನಗೆ ಗೊತ್ತಿಲ್ಲ. ಲಿಂಗ ತಾರತಮ್ಯ ನಮ್ಮಲ್ಲಿಲ್ಲ, ಲಿಂಗಾಯತ ಧರ್ಮದವನ್ನು ಬೇರೆ ಧರ್ಮದ ಜೊತೆಗೆ ಜೋಡಿಸಿದರೆ ಒಪ್ಪುವಂತಹ ಮಾತಲ್ಲ ಎಂದು ನಿವೇದಿತಾ ಸ್ಪಷ್ಟಪಡಿಸಿದರು.

ನಮ್ಮ ಧರ್ಮದ ಹಲವರಲ್ಲಿಯೇ ವಚನ ಸಾಹಿತ್ಯದ ಬಗ್ಗೆ ಜಾಗೃತಿಯಿಲ್ಲ, ತಿಳುವಳಿಕೆ ಇಲ್ಲ. ಈ ಕಾರಣಕ್ಕೆ ಕೆಲವರು ಎಲ್ಲ ಹಿಂದೂ- ಲಿಂಗಾಯತ ಒಂದೇ ಎಂದು ಜನರ ತಲೆಯಲ್ಲಿ ತುಂಬಿದ್ದಾರೆ. ಲಿಂಗಾಯತ ಧರ್ಮದ ಹೋರಾಟಕ್ಕೆ ಬಹಳಷ್ಟು ಜನ ಬೆಂಬಲ ಕೊಡುವುದಿಲ್ಲ ಎಂಬುದು ಅವರ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ವಚನದರ್ಶನ ಪುಸ್ತಕ ಬಗ್ಗೆ ಎಲ್ಲ ಕಡೆಯೂ ಹೋರಾಟ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪುಸ್ತಕದ ಬಗ್ಗೆ ಅಧ್ಯಯನ ಮಾಡಬೇಕು. ಸಮಿತಿ ರಚಿಸುವ ಮೂಲಕ ವಚನ ದರ್ಶನ ಪುಸ್ತಕ ಮುಟ್ಟುಗೋಲು ಹಾಕಬೇಕು ಎಂದು ಒತ್ತಾಯಿಸಲಾಗುವುದು ಎಂದರು.