
ಬೆಳಗಾವಿಯಲ್ಲಿ ಚೂರಿ ಇರಿತ
ಬೆಳಗಾವಿಗಣೇಶೋತ್ಸವದ ವಿಸರ್ಜನೆ ಮೆರವಣಿಗೆಯಲ್ಲಿ ಮೂವರು ಯುವಕರ ಮೇಲೆ ಕಿಡಿಗೇಡಿಗಳು ಚಾಕು ಇರಿದ ಘಟನೆ ಬುಧವಾರ ನಸುಕಿನ ಜಾವ ಕಿತ್ತೂರು ಚನ್ನಮ್ಮ ವೃತ್ತದ ಬಳಿ ನಡೆದಿದೆ. ಚೂರಿ ಇರಿದು ಪರಾರಿಯಾಗಿರುವ ಶೋಧ ಕಾರ್ಯವನ್ನು ಪೊಲೀಸರು ನಡೆಸಿದ್ದಾರೆ. ದರ್ಶನ್ ಪಾಟೀಲ, ಸತೀಶ ಪೂಜಾರಿ, ಪ್ರವೀಣ್ ಗುಂಡ್ಯಾಗೋಳಗೆ ಗಂಭೀರ ಗಾಯವಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಮೂವರು ಯುವಕರು ಡಿಜೆಗೆ ಕುಣಿಯುತ್ಯಿರುವ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆದಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.