ಬೆಳಗಾವಿ ಪಾಲಿಕೆ ವಿರುದ್ಧ ಹೈಕೋರ್ಟ ಗರಂ
23 ರೊಳಗೆ ಜಾಗೆ ಕೊಡದಿದ್ದರೆ ಆಯುಕ್ತರಿಗೆ ಲಕ್ಷ ರೂ ದಂಡ, ಬಡ್ತಿ ಸಿಗದ ಹಾಗೆ ಸೇವಾಪುಸ್ತಕದಲ್ಲಿ ಎಂಟ್ರಿ
ಜಾಗೆ ಗೌರವಯುತವಾಗಿ ಕೊಡಲು ಸೋಮವಾರದ ಗಡುವು. ಗಣೇಶ ವಿಸರ್ಜನೆ ನೆಪವೊಡ್ಡಿ ಸಮಯ ಕೇಳಿದ ಪಾಲಿಕೆ ಪರ ವಕೀಲರು.
ಜಾಗೆ ಹಸ್ತಾಂತರ ಮಾಡುವಾಗ ಅಡ್ಡಿ ಬಂದವರನ್ನು ಬಂಧಿಸಿ ಎಂದ ಜಡ್ಜ.
ಬೆಳಗಾವಿ.
ಲ್ಯಾಂಡನ್ನು ರಾಬರಿ ಮಾಡಕ್ಕೆ ಬರಲ್ಲ. ಲ್ಯಾಂಡ ತಗೋಳುವುದಿದ್ದರೆ ದುಡ್ಡು ಕೊಡಬೇಕು. ಸೋಮವಾರದೊಳಗೆ ಗೌರವಯುತವಾಗಿ ಆ ಲ್ಯಾಂಡ್ ಕೊಡದಿದ್ದರೆ ಪಾಲಿಕೆ ಆಯುಕ್ತರಿಗೆ ಲಕ್ಷ ರೂ ದಂಡದ ಜೊತೆಗೆ ಬಡ್ತಿ ಸಿಗದಂತೆ ಸೇವಾ ಪುಸ್ತಕದಲ್ಲಿ ಟಿಪ್ಪಣಿ ಬರೆಯಲಾಗುವುದು .
ಭೂಮಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಿದರೆ ಸಂಭವನೀಯ ಕ್ರಮವನ್ನು ಮರುಪರಿಶೀಲಿಸಲಾಗುವುದು .
ಬೆಳಗಾವಿ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾದಿಂದ ಜುನ್ನೆ ಬೆಳಗಾವಿವರೆಗೆ ನಿರ್ಮಿಸಿದ ಭೂ ಪರಿಹಾರ ವಿಷಯದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಮಹಾನಗರ ಪಾಲಿಕೆ ಕುರಿತು ಉಲ್ಲೇಖಿಸಿದ ಖಡಕ್ ಮಾತುಗಳಿವು

ಕಳೆದ ಸಲ ಈ ಬಗ್ಗೆ ಮಾತುಕತೆ ಆಗಿದೆ. ಈಗ ಈಗ ಮತ್ತದೇ 5 ವರ್ಷ ಚರ್ಚೆ ಮಾಡೊಕೆ ಆಗಲ್ಲ ಎಂದು ಜಡ್ಜ ಗರಂ ಆದರು.
.ಈ ಜಾಗೆಯನ್ನು ಹಸ್ತಾಂತರಿಸುವಾಗ ಪೊಲೀಸ್ ಪಡೆಯನ್ನು ನಿಯೋಜಿಸಬೇಕು, ಪ್ರತಿವಾದಿ ಅಥವಾ ಬೇರೆ ಯಾರಾದರೂ ಹಸ್ತಾಂತರಕ್ಕೆ ವಿರೋಧ ವ್ಯಕ್ತಪಡಿಸಿದರೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕೋರ್ಟ ಸೂಚನೆ ನೀಡಿದೆ,

ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿ ವಿಚಾರಣೆಯನ್ನು ಬರುವ 23ಕ್ಕೆ ಮುಂದೂಡಿತು,
ಮಂಗಳವಾರ ನ್ಯಾಯಾಲಯದಲ್ಲಿ ಪಾಲಿಕೆ ಸಲ್ಲಿಸಿದ ಅಫಿಡೆವಿಟ್ ಬಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಪಾಲಿಕೆ ಪರ ವಕೀಲರು ಈ ರಸ್ತೆಯನ್ನು ಸ್ಮಾರ್ಟ ಸಿಟಿಯವರು ಇನ್ನೂ ಹಸ್ತಾಂತರಿಸಿಲ್ಲ ಎಂದು ಹೇಳಿದರು,
ಈ ವೇಳೆ ಸ್ಮಾರ್ಟ ಸಿಟಿ ಇಲಾಖೆಯ ವಕೀಲರು ತಮ್ಮ ವಾದವನ್ನು ಪ್ರಸ್ತಾಪಿಸುತ್ತಿದ್ದಂತೆಯೇ ಅದಕ್ಕೆ ನ್ಯಾಯಮೂರ್ತಿಗಳು ಹೆಚ್ಚಿನ ಅವಕಾಶ ಕೊಡಲಿಲ್ಲ. .
ಇಲ್ಲಿ ಲ್ಯಾಂಡನ್ನು ರಾಬರಿ ಮಾಡಕ್ಕೆ ಬರಲ್ಲ. ಲ್ಯಾಂಡ ತಗೋಳುವುದಿದ್ದರೆ ದುಡ್ಡು ಕೊಡಬೇಕು ಎಂದರು.