Headlines

ಭೂ ಮಾಲಿಕರಿಗೆ ಜಾಗೆ ಹಸ್ತಾಂತರ ಪ್ರಕ್ರಿಯೆ ಶುರು

ಈ ಬಿಜೆಪಿಯಲ್ಲಿ ಏನು ನಡೆದಿದೆ ಅನ್ನೊದು ಗೊತ್ತೆ? ಹಾಗಿದ್ದರೆ ಲಿಂಕ್ ಒತ್ತಿ

https://nm-4.com/bjpmem/XFPHVH

——-
ಭೂ ಮಾಲಿಕರಿಗೆ ಜಾಗೆ ಹಸ್ತಾಂತರ ಪ್ರಕ್ರಿಯೆ ಶುರು. ರಸ್ತೆ ನಿರ್ಮಿಸಿದ ಜಾಗೆಯಲ್ಲಿ ಸೇರಿದ ಅಧಿಕಾರಿಗಳು.ಪಾಲಿಕೆ ಆಯುಕ್ತರು , ಇನ್ನು‌ ಮತ್ತೇ ಸಂಚಾರ ದಟ್ಟಣೆ ಗ್ಯಾರಂಟಿ. ಈ ಅವ್ಯವಸ್ಥೆಗೆ ಯಾರು ಹೊಣೆ



ಬೆಳಗಾವಿ.

ಇದೇ ಸೋಮವಾರದೊಳಗೆ ಬೆಳಗಾವಿ ಮಹಾನಗರ ಪಾಲಿಕೆ ಭೂ ಮಾಲಿಕರಿಗೆ 20 ಕೋಟಿ ರೂ ಪರಿಹಾರ ಬದಲು ಜಾಗೆಯನ್ನು ಹಸ್ತಾಂತರ ಮಾಡಬೇಕಿದೆ, ಇಲ್ಲದಿದ್ದರೆ ಬೆಳಗಾವಿ ಮಹಾನಗರ ಪಾಲಿಕೆಗೆ ಮತ್ತೇ ಅಪಾಯ ಕಟ್ಟಿಟ್ಟ ಬುತ್ತಿ..!
ಆದರೆ ಈಗ ಸ್ಮಾರ್ಟ ಸಿಟಿಯಿಂದ ಜಾಗೆ ಪಾಲಿಕೆಗೆ ಹಸ್ತಾಂತರವಾಗುವ ಮುನ್ನವೇ ಜಾಗೆಯನ್ನು ಭೂ ಮಾಲಿಕರಿಗೆ ಮರಳಿ ಕೊಡುವ ನಿಟ್ಟಿನಲ್ಲಿ ಗುರುತು ಹಾಕುವ ಕೆಲಸವನ್ನು ಕಳೆದ ದಿನವೇ ಮಾಡಲಾಗಿತ್ತು.ಇಂದು ಹಸ್ತಾಂತರ ಮಾಡಲು ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿ್ದಾರೆ.. .
ಇದರಿಂದ ಪಾಲಿಕೆ ಆಯುಕ್ತರು ನ್ಯಾಯಾಂಗ ನಿಂದನೆ, ಬಡ್ತಿಗೆ ಅಡ್ಡಿಯಾಗುವುದನ್ನು ತಪ್ಪಿಸಿಕೊಂಡರು ಎಂದು ಹೇಳಬಹುದು,

ಆದರೆ ಆ ರಸ್ತೆ ನಿರ್ಮಿಸಿದ ವೆಚ್ಚ ಮಾಡಿದ ಸುಮಾರು 7 ಕೋಟಿ ರೂ.ಗೆ ಯಾರು ಹೊಣೆ ಎನ್ನುವುದು ಬಹುದೊಡ್ಡ ಪ್ರಶ್ನೆಯಾಗಿದೆ,

ಇಲ್ಲಿ ಎಲ್ಲವನ್ನು ಅಧಿಕಾರಿಗಳೇ ಹೊರಗಿಂದ ಹೊರಗೆ ಮಾಡುವುದಾದರೆ ಪಾಲಿಕೆಯ ವಿಶೇಷ ಸಭೆ ಕರದು ಚಚರ್ೆ ನಡೆಸುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆ ನಗರಸೇವಕರದ್ದಾಗಿದೆ,

ಆದರೆ ರಸ್ತೆಯನ್ನೇ ಕಾನೂನು ಬಾಹಿರವಾಗಿ ಮಾಡಿದಾಗ ಅದನ್ನು ಕಾನೂನು ಪ್ರಕಾರ ಹಸ್ತಾಂತರ ಮಾಡುವ ಪ್ರಮೇಯವೇ ಬರಲ್ಲ ಎನ್ನುವುದು ಕೆಲವರ ವಾದ.

ಕೌನ್ಸಿಲ್ದಲ್ಲಿಯೇ ತೀರ್ಮಾನ ಆಗಬೇಕಿತ್ತಂತೆ
ಮಾಜಿ ಶಾಸಕ ರಮೇಶ ಕುಡಚಿ ಸೇರಿದಂತೆ ರಾಜ್ಯದ ಹಿರಿಯ ಅಧಿಕಾರಿಗಳ ಪ್ರಕಾರ ಪಾಲಿಕೆಯಲ್ಲಿ ಚುನಾಯಿತ ಆಡಳಿತ ಮಂಡಳಿ ಇದ್ದಾಗ ಕೌನ್ಸಿಲ್ದಲ್ಲಿಯೇ ಎಲ್ಲವೂ ತೀರ್ಮಾನವಾಗಬೇಕು.
ಇಲ್ಲಿ ಏನಾಗಿದೆ ಎಂದರೆ, ಬೆಳಗಾವಿ ದಕ್ಷಿಣ ಕ್ಷೇತ್ರದ ರಸ್ತೆ ನಿರ್ಮಾಣದಲ್ಲಿ ಭೂ ಪರಿಹಾರದಲ್ಲಿ ನ್ಯಾಯಾಂಗ ತೂಗುಗತ್ತಿ ಎದುರಾದಾಗ ಪಾಲಿಕೆ ಅಧಿಕಾರಿಗಳು ತುರ್ತ ವಿಶೇಷ ಸಭೆ ಕರೆಯುವ ಸನ್ನಿವೇಶ ಸೃಷ್ಟಿಸಿದರು,
ಅಲ್ಲಿ 20 ಕೋಟಿ ರೂ ಪರಿಹಾರ ಪಾವತಿಸುವುದನ್ನು ಬಿಟ್ಟು ಪರ್ಯಾಯ ಮಾರ್ಗವೇ ಇಲ್ಲ ಎಂದು ಅಧಿಕಾರಿಗಳೂ ಸೇರಿದಂತೆ ಕಾನೂನು ಸಲಹೆಗಾರರು ವಾದ ಮಾಡಿದರು,

ಆದರೆ ಕೌನ್ಸಿಲ್ಗೆ ಇಷ್ಟೊಂದು ಹಣ ಪಾವತಿಸುವ ಅಧಿಕಾರವಿಲ್ಲ. ಅದಕ್ಕೆ ಕ್ಯಾಬಿನೆಟ್ ಒಪ್ಪಿಗೆ ಬೇಕು ಎಂದು ಗೊತ್ತಾಗುತ್ತಿದ್ದಂತೆಯೇ ಕೋರ್ಟನಲ್ಲಿ ಪಾಲಿಕೆ ಪರ ವಕೀಲರು ಜಾಗೆ ಮರಳಿ ಕೊಡುವ ಮಾತನ್ನು ಆಡಿದರು, ಈಗ ಜಾಗೆ ಕೊಟ್ಟು ಅಫಿಡೆವಿಟ್ನ್ನು ಸೋಮವಾರ ಕೋರ್ಟಗೆ ಸಲ್ಲಿಬೇಕಾಗಿದೆ, ಇಲ್ಲದಿದ್ದರೆ ಪಾಲಿಕೆ ಆಯುಕ್ತರ ಸೇವಾ ಪುಸ್ತಕದಲ್ಲಿ ಬಡ್ತಿ ಸಿಗದ ಹಾಗೆ ಮತ್ತು ಎರಡು ಇನ್ಕ್ರಿಮೆಂಟ್ ಸಿಗದ ಹಾಗೆ ನೊಂದಣಿ ಮಾಡುವ ಎಚ್ಚರಿಕೆ ನೀಡಿದ್ದಾರೆ, ಇದರ ಜೊತೆಗೆ ಲಕ್ಷ ರೂ ದಂಡ ವಿಧಿಸುವ ಎಚ್ಚರಿಕೆಯನ್ನು ಕೋರ್ಟ ನೀಡಿದೆ,

ಇಲ್ಲಿ ಪಾಲಿಕೆ ಆಯುಕ್ತರು ತಮ್ಮಷ್ಟಕ್ಕೆ ತಾವೇ ಜಾಗೆಯನ್ನು ಮರಳಿ ಕೊಟ್ಟರೆ ಕೌನ್ಸಿಲ್ಗೆ ಮಾಡಿದ ಅಪಮಾನ ಎಂದು ಹೇಳಲಾಗುತ್ತದೆ, ಒಂದು ವೇಳೆ ಕೊಡದಿದ್ದರೆ ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ತೂಗುಗತ್ತಿ ಕಳಚುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಆಯುಕ್ತರು ಒಂದು ರೀತಿಯಲ್ಲಿ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ,

ಆ ದಂಡ ವಸೂಲಿ ಆಗಿದ್ದರೆ….!
ಮೂಲಗಳ ಪ್ರಕಾರ ಬೆಳಗಾವಿ ಮಹಾನಗರ ಪಾಲಿಕೆಗೆ ಹೊರಗಿನಿಂದ ಬರಬೇಕಾದ ಹಣ ಕೂಡ ಕೋಟಿ ಗಟ್ಟಲೆ ಇದೆ.
ಪಾಲಿಕೆ ಆಯುಕ್ತರು ಕಳೆದ ವರ್ಷ ಎಲ್ಆ್ಯಂಡ ಟಿ ಕಂಪನಿಗೆ 21 ಕೋಟಿ ರೂ. ದಂಡ ವಿಧಿಸಿದ್ದರು, ಅಷ್ಟೇ ಅಲ್ಲ ಹೆಸ್ಕಾಂದಿಂದಲೂ ಕೂಡ ಪಾಲಿಕೆಗೆ ಬರೊಬ್ಬರಿ 10 ಕೋಟಿ ರೂ.ಗು ಹಣ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಹಣ ವಸೂಲಾತಿಗೆ ಆಯುಕ್ತರು ಅಧಿಕಾರಿಗಳ ಕಮಿಟಿಯನ್ನು ರಚಿಸಿದ್ದಾರೆ, ಆದರೆ ಆ ಕಮಿಟಿ ಎಷ್ಟು ಸಭೆ ಮಾಡಿದೆ ಎನ್ನುವುದನ್ನು ನೋಡಹೊರಟರೆ ಉತ್ತರ ಶುನ್ಯ, ಅಂದರೆ ಪಾಲಿಕೆಗೆ ಬರಬೇಕಾದ ಹಣ ವಸೂಲಾತಿ ಕೂಡ ಸರಿಯಾಗಿ ಆಗುತ್ತಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ.

Leave a Reply

Your email address will not be published. Required fields are marked *

error: Content is protected !!