ಬೆಂಗಳೂರು. ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸಿಎಂ ಸಿದ್ಧರಾಮಯ್ಯನವರಿಗೆ ಬಿಗ್ ಶಾಕ್ ನೀಡಿದೆ.
ಈಗ ಮುಖ್ಯಮಂತ್ರಿಗಳು ಸರ್ವೋಚ್ಚ ನ್ಯಾಯಾಲಯ ಮೆಟ್ಡಿಲು ಹತ್ತುವ ಸಿದ್ಧತೆ ನಡೆಸಿದ್ದಾರೆ. ಆದರೆ ಇಸೆಲ್ಲದರ ನಡುವೆ ಕಾಂಗ್ರೆಸ್ ಹೈಕಮಾಂಡ ಸಿದ್ಧರಾಮಯ್ಯನವರನ್ನು ಕೆಳಗಿಳಿಸಿ ಬೇರೋಬ್ಬರನ್ನು ಆ ಜಾಗಕ್ಕೆ ಕುಳ್ಳಿಸುವ ಚಿಂತನೆ ನಡೆಸಿದೆ ಎಂದು ಗೊತ್ತಾಗಿದೆ.

ಇದೆಲ್ಲದರ ನಡುವೆ ಮುಖ್ಯಮಂತ್ರಿ ಗಳು ಇಂದು ಮಧ್ಯಾಹ್ನ 3 ಕ್ಕೆ ಕರೆದ ಸುದ್ದಿಗೋಷ್ಠಿಯಲ್ಲಿ ಏನು ಹೇಳಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ.
ದೆಹಲಿಯಿಂದ ಬಂದ ಮೂಲಗಳ ಪ್ರಕಾರ ಮುಂದಿನ ಉತ್ತರಾಧಿಕಾರದ ಆಯ್ಕೆ ಹೊಣೆಯನ್ನೂ ಕೂಡ ಸಿದ್ಧರಾಮಯ್ಯನವರಿಗೆ ನೀಡಿ ರಾಜೀನಾಮೆ ಪಡೆಯಬಹುದು ಎನ್ನುವ ಮಾತಿದೆ.

ಮತ್ತೊಂದು ಮೂಲಗಳ ಪ್ರಕಾರ ಹೈಕನಾಂಡ ತಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಆಲೋಚನೆ ಇದೆ ಎಂದು ಗೊತ್ತಾಗಿದೆ. ಆದರೆ ಈಗ ಖರ್ಗೆ ಕುಟುಂಬದ ವಿರುದ್ಧವೂ ಭೂ ವಿವಾದ ಸುತ್ತಿಕೊಂಡಿದೆ. ಹೀಗಾಗಿ ಆ ವಿಷಯ ಭುಗಿಲೆದ್ದರೆ ಕಷ್ಟ ಎನ್ನುವ ಮಾತಿದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಚಿಂತನೆಯನ್ನು ಹೈಕಮಾಂಡ ನಡೆದಿದೆ ಎಂದು ಗೊತ್ತಾಗಿದೆ. ಇಲ್ಲಿ ಸಿದ್ಧರಾಮಯ್ಯನವರನ್ನು ಕೇಳಿದರೂಬಕೂಡ ಅವರು ತಮ್ನ ಶಿಷ್ಯ ಸತೀಶ್ ಜಾರಕಿಹೊಳಿ ಹೆಸರು ಹೇಳುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.