ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ; ಆರೋಪಿಗೆ ಗಲ್ಲು ಶಿಕ್ಷೆ.
ಕೋರ್ಟ ಮಹತ್ವದ ತೀರ್ಪು.
ಬೆಳಗಾವಿ :
ಚಾಕಲೇಟು ನೀಡುವ ನೆಪದಲ್ಲಿ ೩ ವರ್ಷದ ಬಾಲಕಿಯನ್ನು ತನ್ನೊಂದಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಅಮಾನುಷವಾಗಿ ಕೊಂದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
7 ವರ್ಷದ ಹಿಂದೆ ಬೆಳಗಾವಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಈ ಘಟನೆ ನಡೆದಿತ್ತು. ಹಾರೂಗೇರಿಯ 3 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣ ಇದೀಗ ತನಿಖೆಯಾಗಿ, ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಉದ್ದಪ್ಪ ರಾಮಪ್ಪ ಗಾಣಿಗೇರ (32) ಸಾ. ಕುರಬಗೋಡಿ ಹಾರೂಗೇರಿ ಎಂಬಾತನೇ ಶಿಕ್ಷೆಗೊಳಗಾದ ಆರೋಪಿ.
ಎಮ್. ಆರ್. ಎಮ್. ತಹಸೀಲ್ದಾರ ಪಿಎಸ್‌ಐ ಹಾರೂಗೇರಿ ಪೊಲೀಸ್ ಠಾಣೆ ದೂರು ಸ್ವೀಕರಿಸಿಕೊಂಡು ಹಾರೂಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 183/2024 ಕಲಂ ಕಲಂ. 363 ಐಪಿಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದರು.
ತನಿಖಾಧಿಕಾರಿ ಸಿಪಿಐ ಸುರೇಶ. ಪಿ. ಶಿಂಗಿ ಉದ್ದಪ್ಪ ಅವರು ರಾಮಪ್ಪ ಗಾಣಿಗೇರ ಮೇಲೆ ದಿನಾಂಕ 08/12/2017 ರಂದು ದೋಷಾರೋಪಣ ಪತ್ರ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಹಾರೂಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 183/2017 ಕಲಂ 366ಎ, 376 302, 201 ಐ.ಪಿ.ಸಿ ಮತ್ತು 4, 6, 8, 12 ಪೋಕ್ಸೋ ಕಾಯ್ದೆ 2012 (ಎಸ್‌ಸಿ ನಂಬರ: 431/2017) ನೇ ಪ್ರಕರಣವನ್ನು ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಎಫ್‌ಟಿಎಸ್‌ಸಿ-1) ನ್ಯಾಯಾಲಯದಲ್ಲಿ ವಿಚಾರಣೆ ಕೈಕೊಂಡು ಪ್ರಕರಣದ ಬಗ್ಗೆ ಸಾರ್ವಜನಿಕ ಅಭಿಯೋಜಕ ಎಲ್. ಬಿ. ಪಾಟೀಲ, ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ನ್ಯಾಯಾಲಯವು ಆರೋಪಿ ಉದ್ದಪ್ಪ ರಾಮಪ್ಪ ಗಾಣಿಗೇರ ಈತನಿಗೆ ಗಲ್ಲು ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ಪ್ರಕರಣದ ತನಿಖೆ ಕೈಕೊಂಡ ಸುರೇಶ, ಪಿ. ಶಿಂಗಿ. ಸಿಪಿಐ ಮತ್ತು ಪ್ರಕರಣದ ಪತ್ತೆ ಕಾರ್ಯದಲ್ಲಿ ಎಮ್. ಆರ್. ಎಮ್. ತಹಸೀಲ್ದಾರ. ಪಿಎಸ್‌ಐ. ಪಿ. ಆರ್. ಗುಡೋಡಗಿ, ಶಿವಾನಂದ ಬಡಿಗೇರ, ವಿಷ್ಣು ಗಾಯಕವಾಡ, ಆರ್. ಪಿ. ಕಟೀಕರಿ ರವರು ಕಾರ್ಯನಿರ್ವಹಿಸಿದ್ದು ಇವರ ಕಾರ್ಯವನ್ನು ಎಸ್ಪಿ ಭೀಮಾಶಂಕರ ಗುಳೇದ ಹಾಗೂ ಹೆಚ್ಚುವರಿ ಎಸ್ಪಿ ಶೃತಿ ಎನ್. ಎಸ್. ಮತ್ತು ಆರ್. ಬಿ. ಬಸರಗಿ ಹಾಗೂ ಡಿಎಸ್ಪಿ ಪ್ರಶಾಂತ ಮುನ್ನೋಳ್ಳಿ ಶ್ಲಾಘಿಸಿ ಅಭಿನಂದಿಸಿದ್ದಾರೆ.