ಆದೇಶ ಕೊಟ್ಟು ವಾಪಸ್ ಪಡೆದಿದ್ದ ಪಾಲಿಕೆ.
ಆದೇಶ ಬದಲಾದರೂ ನಿರ್ಧಾರ ಬದಲಿಸದ ನಿವಾಸಿಗಳು.
ಮೂರ್ತಿ ಪೂಜೆಗೆ ವಿರುದ್ಧ ವ್ಯಕ್ತಪಡಿಸಿದವರ ವಿರುದ್ಧವೇ ಕೆಂಡಕಾರಿದ ನಿವಾಸಿಗಳು.
9 ದಿನ ಉದ್ಯಾನದಲ್ಲೇ ನವರಾತ್ರಿ ಉತ್ಸವ ಎಂದ ನಿವಾಸಿಗಳು.
ನಿವಾಸಿಗಳ ಪರ ನಿಂತ ನಗರಸೇವಕಿ ವಾಣಿ ಜೋಶಿ ಮತ್ತು ನವರಾತ್ರಿ ಉತ್ಸವ ಮಂಡಳ.
ಗೊಂದಲ ಮೂಡಿಸಿದ ಪಾಲಿಕೆ ಆದೇಶ
ಪಟ್ಟು ಬಿಡದೇ ದುಗರ್ಾದೇವಿ
ಮೂತರ್ಿ ಪೂಜೆ ಸಲ್ಲಿಸಿದ ನಿವಾಸಿಗಳು
ಬೆಳಗಾವಿ.
ದಸರಾ ಹಬ್ಬದ ಪ್ರಯುಕ್ತ ಪಾಲಿಕೆಯ ವಾರ್ಡ ನಂಬರ 43 ರಲ್ಲಿ ದುಗರ್ಾದೇವಿ ಮೂತರ್ಿ ಪೂಜೆಗೆ ಅನುಮತಿ ನೀಡಿಮತ್ತೇ ರದ್ದುಗೊಳಿಸಿದ ಪಾಲಿಕೆ ಕ್ರಮ ಕೆಲ ಹೊತ್ತು ಗೊಂದಲಕ್ಕೆ ಕಾರಣವಾಯಿತು,
ಆದರೆ ಆ ವಾರ್ಡ ನಗರಸೇವಕಿ ವಾಣಿ ಜೋಶಿ ಮತ್ತು ನವರಾತ್ರಿ ಉತ್ಸವ ಮಂಡಳದ ಅಧ್ಯಕ್ಷ ಆನಂದ ಅಪ್ಟೇಕರ, ಪಿಆರ್ಓ ವಿಕಾಸ ಕಲಘಟಗಿ,ಅಜಿತ್ ಸಿದ್ದನ್ನವರ, ಅರುಣ ಗಾವಡೆ, ಶಿವಾನಂದ ದುರ್ಗನ್ನವರ, ಮುಂತಾದವರ ಸಕಾಲಿಕ ಮಧ್ಯ ಪ್ರವೇಶದಿಂದ ಯಥಾವತ್ತಾಗಿ ಅಲ್ಲಿಯೇ ಪೂಜೆ ನೆರವೇರಿಸಲಾಯಿತು.

ಯಾವುದೇ ಸಂದರ್ಭದಲ್ಲಿ ಕೂಡ ನವರಾತ್ರಿ ಮುಗಿಯುವತನಕ ಈ ಪೆಂಡಾಲನ್ನು ತೆರವು ಮಾಡುವ ಪ್ರಮೇಯವೇ ಇಲ್ಲ. ಮೇಲಾಗಿ ಇಲ್ಲಿ ನಿತ್ಯ ಆರತಿ ನೆರವೇರಿಸಲಾಗುವುದು ಎಂದು ಅಲ್ಲಿನ ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ,
ಗಮನಿಸಬೇಕಾದ ಸಂಗತಿ ಎಂದರೆ, ಉದ್ಯಾನದಲ್ಲಿ ದುಗರ್ಾದೇವಿ ಪೂಜೆಗೆ ಕಿರಿಕ್ ಮಾಡಿದ ವ್ಯಕ್ತಿಯ ವಿರುದ್ಧವೇ ಅಲ್ಲಿನ ನಿವಾಸಿಗಳು ಪ್ರತಿ ದೂರು ನೀಡಿದ್ದಾರೆ, ಇದೊಂದೇ ಅಲ್ಲ ಯಾವುದೇ ಉತ್ಸವ ನಡೆದರೂ ಕೂಡ ಅವರು ಅನಗತ್ಯವಾಗಿ ಕಿರಿಕಿರಿ ಮಾಡುತ್ತಾರೆ. ಇದರಿಂದ ಶಾಂತಿ ಭಂಗಕ್ಕೆ ಎಡೆ ಮಾಡಿಕೊಡುತ್ತಿದ್ದಾರೆಂದು ನಿವಾಸಿಗಳು ದೂರಿನಲ್ಲಿ ತಿಳಿಸಿದ್ದಾರೆ.

ವಾರ್ಡ ನಂಬರ 43 ರಲ್ಲಿ ಬರುವ ಮೃತ್ಯುಂಜಯ ನಗರದ ಮಹಾಂತೇಶ ಉದ್ಯಾನದಲ್ಲಿ ತಾತ್ಕಾಲಿಕ ಪೆಂಡಾಲ್ ನಿಮರ್ಿಸಿ ದುಗರ್ಾದೇವಿ ಪೂಜೆಯನ್ನು ಪ್ರತಿ ವರ್ಷ ಸಲ್ಲಿಸಲಾಗುತ್ತದೆ.
ಈ ಸಲವೂ ಸಿದ್ಧಕಲಾ ಮಂಡಳದವರು ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆಯಿಂದ ಪೂಜೆ ಸಲ್ಲಿಸಲು ಅನುಮತಿ ಸಹ ಪಡೆದುಕೊಂಡಿದ್ದರು,
ಪಾಲಿಕೆ ಅನುಮತಿ ಸಿಕ್ಕ ನಂತರ ಅಲ್ಲಿ ಚಿಕ್ಕದಾದ ಪೆಂಡಾಲ ನಿಮರ್ಿಸಿ ಮೂತರ್ಿಯನ್ನು ಪ್ರತಿಷ್ಠಾಪಿಸುವ ಕೆಲಸವನ್ನು ನಿವಾಸಿಗಳು ಮಾಡಿದ್ದರು,
ಆದರೆ ಈ ಮೂತರ್ಿ ಪ್ರತಿಷ್ಠಾಪನೆಗೆ ಅಲ್ಲಿನ ನಿವಾಸಿಯೊಬ್ಬರು ತಕರಾರು ವ್ಯಕ್ತಪಡಿಸಿ ಪಾಲಿಕೆಗೆ ದೂರು ನೀಡಿದರು.

ಈ ದೂರನ್ನು ಗಮನಿಸಿದ ಪಾಲಿಕೆಯ ಅಧಿಕಾರಿಗಳು ತಾವೇ ಕೊಟ್ಟ ಆದೇಶವನ್ನು ವಾಪಸ್ಸು ತೆಗೆದುಕೊಂಡರು, ಇದು ಒಂದು ರೀತಿಯ ಗೊಂದಲಕ್ಕೂ ಕಾರಣವಾಯಿತು,
ಆದರೆ ಅಷ್ಟರೊಳಗೆ ಅನುಮತಿ ಮತ್ತೇ ನಿರಾಕರಿಸಿದ ಸುದ್ದಿ ಹಬ್ಬುತ್ತಿದ್ದಂತೆಯೇ ಉದ್ಯಾನದಲ್ಲಿ ಜನ ಸೇರತೊಡಗಿದರು, ನಗರಸೇವಕಿ ವಾಣಿ ಜೋಶಿ, ಉತ್ಸವ ಮಂಡಳದ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು,
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪಾಲಿಕೆಯವರು ಆದೇಶ ರದ್ದುಗೊಳಿಸಿದ ಪತ್ರ ತೋರಿಸಿದರೂ ಕೂಡ ಮೂತರ್ಿಯನ್ನು ತೆರವು ಮಾಡುವ ಪ್ರಮೇಯವೇ ಇಲ್ಲ ಎಂದು ನಿವಾಸಿಗಳು ಸ್ಪಷ್ಟಪಡಿಸಿದರು,
ಈ ಹಿನ್ನೆಲೆಯಲ್ಲಿ ನಗರಸೇವಕಿ ಸೇರಿದಂತೆ ಇತರರು ಪಾಲಿಕೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪ್ರತಿಷ್ಠಾಪಿಸಿದ ಮೂತರ್ಿಯನ್ನು ತೆರವು ಮಾಡಲ್ಲ ಎನ್ನುವುದನ್ನು ತಿಳಿಸಿದರು,
ಅಷ್ಟೇ ಅಲ್ಲ ಅಲ್ಲಿದ್ದ ನಿವಾಸಿಗಳೂ ಸಹ ಈ ಬಗ್ಗೆ ದೂರು ನೀಡಿದ್ದ ವ್ಯಕ್ತಿಯ ವಿರುದ್ಧ ಕಿಡಿಕಾರಿದರು,
ಕೊನೆಗೆ ಸಿದ್ಧಕಲಾ ಮಂಡಳದವರ ಮುಂದಾಳತ್ವದಲ್ಲಿ ದುಗರ್ಾದೇವಿ ಮೂತರ್ಿಗೆ ಆರತಿ ಮಾಡಲಾಯಿತು.