Headlines

ಪೊಕ್ಸೊ- ಮತ್ತೊಂದು‌ ಮಹತ್ವದ ತೀರ್ಪು

ಬೆಳಗಾವಿ ಪೋಕ್ಸೋ ನ್ಯಾಯಾಲಯ ತೀರ್ಪು
ಬಾಲಕಿಯ ಮೇಲೆ ಅತ್ಯಾಚಾರ ಆರೋಪಿಗೆ ೨೦ ವರ್ಷ ಕಠಿಣ ಶಿಕ್ಷೆ

ಬೆಳಗಾವಿ:

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಬೆಳಗಾವಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಗುರುವಾರ 2೦ ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಿಪ್ಪಾಣಿ ಗ್ರಾಮಿಣ ಪೋಲಿಸ ಠಾಣೆಯಲ್ಲಿ ಕಲಂ.೩೬೬ ೩೭೬ (೧)(೨) (ಐ) ಐಪಿಸಿ ಮತ್ತು ಕಲಂ. ೪, ೬, ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣವು ದಾಖಲಾಗಿತ್ತು. ಈ ಬಗ್ಗೆ ತನಿಖಾಧಿಕಾರಿ ಕಿಶೂರ ಭರಣಿ ರವರು ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-೦೧ ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣಿ ಪಟ್ಟಿಯನ್ನು ಸಲ್ಲಿಸಿದ್ದರು.


ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿಯನ್ನು ಆರೋಪಿ ಚಿಕ್ಕೋಡಿಯ ಕುರ್ಲಿಯ ನಿವಾಸಿ ಶ್ರೀಸಂಗಮ್ಮ ಕೆ ನಿಕಾಡೆ ಎಂಬಾತ ಮದುವೆಯಾಗುವುದಾಗಿ ಪುಸಲಾಯಿಸಿ ಅಪಹರಣ ಮಾಡಿಕೊಂಡು ಕೊಲ್ಲಾಪುರ- ಪೂನಾ ನಂತರ ಕೊಲ್ಹಾಪುರದ ಕರವೀರ ತಾಲ್ಲೂಕಿನ ಆಡೂರ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಬಾಡಿಗೆ ಮನೆ ಪಡೆದು ಪತಿ-ಪತ್ನಿಯೆಂದು ಮಾಲೀಕರಿಗೆ ನಂಬಿಸಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿರುವುದು ವಿಚಾರಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ನ್ಯಾಯಾಲಯದಲ್ಲಿ ೫ ದಾಖಲೆಗಳು ಹಾಗೂ ೧೫ ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀಮತಿ ಸಿ.ಎಂ ಪುಷ್ಪಲತಾ ಅವರು, ಆರೋಪಿತನಿಗೆ ೨೦ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ &ರೂ ೧೦.೦೦೦/-ರೂಪಾಯಿ ದಂಡ ವಿಧಿಸಿ ಪ್ರಕರಣದ ತೀರ್ಪು ನೀಡಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ ಒಂದು ಲಕ್ಷ ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಲ್. ವಿ ಪಾಟೀಲ ವಾದ ಮಂಡಿಸಿದರು.

Leave a Reply

Your email address will not be published. Required fields are marked *

error: Content is protected !!